Snehalaya Rescues Man Near Mangaluru Railway Station

snehalaya-bikram-3-September-2026-00.

ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯನ್ನು ಸ್ನೇಹಾಲಯಕ್ಕೆ ದಾಖಲಿಸಿ ಆರೈಕೆ ಮಂಜೇಶ್ವರ, ಸೆಪ್ಟೆಂಬರ್ 4, 2026: ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದ ಪಶ್ಚಿಮ ಬಂಗಾಳದ ಜಲ್ಪೈಗುರಿ ಮೂಲದ ಶ್ರೀ ಬಿಕ್ರಮ್ ಅವರನ್ನು ಸ್ನೇಹಾಲಯ ತಂಡವು ರಕ್ಷಿಸಿ ಸ್ನೇಹಾಲಯಕ್ಕೆ ಕರೆತಂದು ದಾಖಲಿಸಿದೆ. ಶ್ರೀ ಬಿಕ್ರಮ್ ಅವರು ರೈಲು ನಿಲ್ದಾಣದ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಶ್ರೀ ಸಾಜು ಅವರು ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ರವರಿಗೆ […]

Helpless Man from Tamil Nadu Finds Hope and Shelter at Snehalaya

snehalaya-sundar-29-August-2026-03.

ಮಂಜೇಶ್ವರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ತಮಿಳುನಾಡಿನ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಮಂಜೇಶ್ವರ, ಆಗಸ್ಟ್ 29, 2026: ತಮಿಳುನಾಡಿನ ಕೋಯಮತ್ತೂರು ಮೂಲದ ಶ್ರೀ ಆರ್. ಸುಂಧರ್ ಅವರು ಮಂಜೇಶ್ವರದ ಸುತ್ತಮುತ್ತಲಿನ ವಾತಾವರಣದಲ್ಲಿ ಮಾನಸಿಕವಾಗಿ ಅಸ್ವಸ್ಥ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅವರನ್ನು ರಕ್ಷಿಸಿ ಸ್ನೇಹಾಲಯ ಮಾನಸಿಕ–ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ದಾಖಲಿಸಲಾಗಿದೆ. ಶ್ರೀ ಆರ್. ಸುಂಧರ್ ಅವರು ಯಾವುದೇ ಸೂಕ್ತ ಆರೈಕೆ ಅಥವಾ ಕುಟುಂಬದ ಬೆಂಬಲವಿಲ್ಲದೆ ಅಲೆದಾಡುತ್ತಿದ್ದ ಸಂದರ್ಭದಲ್ಲಿ ಅವರ ಪರಿಸ್ಥಿತಿ ಸಾರ್ವಜನಿಕರ ಗಮನಕ್ಕೆ ಬಂದಿದೆ. […]

Snehalaya Supports Pradeep on His Path to Recovery

snehalaya-pradip-rescue-27-August-2026-00.

ವೆನ್ಲಾಕ್ ಆಸ್ಪತ್ರೆಯ ಬಳಿ ಅಸಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಪ್ರದೀಪ್ ರವರನ್ನು ಪುನರ್ವಸತಿ ಮತ್ತು ಆರೈಕೆಗಾಗಿ ಸ್ನೇಹಾಲಯಕ್ಕೆ ದಾಖಲಿಸಲಾಗಿದೆ ಮಂಜೇಶ್ವರ, ಆಗಸ್ಟ್ 27, 2026: ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಬಳಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಕಡಬ ತಾಲೂಕಿನ ಮರ್ಧಾಳ ಮೂಲದ ಶ್ರೀ ಪ್ರದೀಪ್ ಅವರನ್ನು ರಕ್ಷಿಸಿ ಪುನರ್ವಸತಿ ಆರೈಕೆಗಾಗಿ ದಾಖಲಿಸಿಕೊಂಡಿದೆ. ಮಂಗಳೂರಿನ ಫಳ್ನೀರ್‌ನಲ್ಲಿರುವ ಜೇಮ್ಸ್ ಆ್ಯಂಡ್ ಕಂಪನಿಯ ಸಿಬ್ಬಂದಿ ಶ್ರೀ ನಿಖಿಲ್ ಪಿಂಟೊ ಅವರು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರನ್ನು ಸಂಪರ್ಕಿಸಿ, ಪ್ರದೀಪ್ […]

Snehalaya Marks 17 Years of Service, Releases Konkani Book

snehalaya-foundation-day-26-August-2026-00.

ಸ್ನೇಹಾಲಯದ 17ನೇ ವಾರ್ಷಿಕೋತ್ಸವ: ‘ಹೆಬ್ರೋನಾಂತ್ಲೆ ಮೊಗಾ ತುವಾಲೆ’ ಕೃತಿ ಬಿಡುಗಡೆ ಮಂಗಳೂರು: ನಿರ್ಗತಿಕರು, ದೀನದಲಿತರು ಹಾಗೂ ಸಮಾಜದ ಅಂಚಿನಲ್ಲಿರುವವರ ಸೇವೆಯಲ್ಲಿ ತೊಡಗಿರುವ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ (ರಿ.) ತನ್ನ 17ನೇ ವಾರ್ಷಿಕೋತ್ಸವವನ್ನು ಮಂಗಳವಾರ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿತು. ಕೋಲ್ಕತ್ತಾದ ಸಂತ ಮದರ್ ತೇರೆಸಾ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವು ಧನ್ಯವಾದದ ಪವಿತ್ರ ಬಲಿಪೂಜೆಯೊಂದಿಗೆ ಆರಂಭಗೊಂಡಿತು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ ಪ್ರಧಾನ ಗುರುಗಳಾಗಿ ಬಲಿಪೂಜೆ ನೆರವೇರಿಸಿದರು. ಫಾ. ಪೀಟರ್ […]

Mrs. Hemavathi Admitted to Snehalaya for Care and Rehabilitation

ಮಂಗಳೂರಿನ ಕೊಂಚಾಡಿ ನಿವಾಸಿ ಶ್ರೀಮತಿ ಹೇಮಾವತಿ ಅವರಿಗೆ ಸ್ನೇಹಾಲಯದಲ್ಲಿ ಆರೈಕೆ ಮತ್ತು ಪುನರ್ವಸತಿ ನೆರವು ಮಂಜೇಶ್ವರ, ಆಗಸ್ಟ್ 20, 2026: ನಿರಾಶ್ರಿತರು, ಅಸಹಾಯಕರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಆರೈಕೆಯ ಅಗತ್ಯವಿರುವ ವ್ಯಕ್ತಿಗಳಿಗೆ ರಕ್ಷಣೆ, ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿರುವ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ, ಮಂಗಳೂರಿನ ಕೊಂಚಾಡಿ ನಿವಾಸಿ ಶ್ರೀಮತಿ ಹೇಮಾವತಿ ಅವರನ್ನು ಅಗತ್ಯ ಆರೈಕೆ, ಆರೋಗ್ಯ ಮೌಲ್ಯಮಾಪನ ಹಾಗೂ ಸಮಗ್ರ ಪುನರ್ವಸತಿಗಾಗಿ ದಾಖಲಿಸಲಾಗಿದೆ. ಶ್ರೀಮತಿ ಹೇಮಾವತಿ ಅವರ ಪುತ್ರ 2026 ಆಗಸ್ಟ್ 4ರಂದು […]

Rajesh Sawant Reunited with Brother After Two Years of Separation

snehalaya-rajesh-reunion-19-August-2026-00.

ಎರಡು ವರ್ಷಗಳ ಬಳಿಕ ಸಹೋದರನ ಮಡಿಲಿಗೆ ಮರಳಿದ ರಾಜೇಶ್ ಸಾವಂತ್ ಮಂಜೇಶ್ವರ,ಆಗಸ್ಟ್ 19, 2026: ಮಾನಸಿಕ ಅಸ್ವಸ್ಥತೆಯಿಂದ ಕುಟುಂಬದಿಂದ ದೂರವಾಗಿ ಎರಡು ವರ್ಷಗಳ ಕಾಲ ಕಾಣೆಯಾಗಿದ್ದ ಮಹಾರಾಷ್ಟ್ರದ ರಾಜೇಶ್ ಸಾವಂತ್ ಅವರು, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ನಿರಂತರ ಆರೈಕೆ ಮತ್ತು ಕುಟುಂಬ ಪತ್ತೆ ಕಾರ್ಯದ ಫಲವಾಗಿ ಆಗಸ್ಟ್ 16ರಂದು ತಮ್ಮ ಸಹೋದರನೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡರು. ಮುಂಬೈನ ಭಾಂಡೂಪ್ ವೆಸ್ಟ್ ನಿವಾಸಿಯಾದ ರಾಜೇಶ್ ಉದ್ಯೋಗದ ನಿಮಿತ್ತ ಕೇರಳಕ್ಕೆ ಬಂದಿದ್ದರು. ಮಾನಸಿಕ ಆರೋಗ್ಯ ಸಮಸ್ಯೆ ತೀವ್ರಗೊಂಡ ಪರಿಣಾಮ ಕುಟುಂಬದ […]

Sanju Reunited with Family After Eight Months Through Efforts of Snehalaya and Shraddha Foundation

snehalaya-sanju-reunion-18-August-2026-00-0.

ಎಂಟು ತಿಂಗಳ ಬಳಿಕ ಕುಟುಂಬದ ಮಡಿಲಿಗೆ ಮರಳಿದ ಸಂಜು – ಸ್ನೇಹಾಲಯ ಮತ್ತು ಶ್ರದ್ಧಾ ತಂಡಗಳಿಂದ ಭಾವುಕ ಪುನರ್ಮಿಲನ ಮಂಜೇಶ್ವರ, ಆಗಸ್ಟ್ 18, 2026: ಸುಮಾರು ಎಂಟು ತಿಂಗಳಿಂದ ನಾಪತ್ತೆಯಾಗಿದ್ದ ಧಾರವಾಡ ಮೂಲದ ಶ್ರೀ ಸಂಜು ಅವರು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಮತ್ತು ಶ್ರದ್ಧಾ ಫೌಂಡೇಶನ್ ಮುಂಬೈ ತಂಡಗಳ ಪ್ರಯತ್ನದಿಂದ ತಮ್ಮ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡಿದ್ದಾರೆ. ಧಾರವಾಡದ ಯಮ್ಮಿಕೇರಿ ನಿವಾಸಿಯಾದ ಸಂಜು ಅವರು ಮಾನಸಿಕ ಆರೋಗ್ಯ ಸಮಸ್ಯೆಗಳ ಬಳಿಕ ಮನೆಯಿಂದ ಹೊರಟು ಅಲೆದಾಡುತ್ತಿದ್ದರು. 2025ರ ಡಿಸೆಂಬರ್‌ನಲ್ಲಿ […]

Narayan Das Reunited with Family After 30 Years An Emotional Reunion Made Possible by Snehalaya and Shraddha Teams

30 ವರ್ಷಗಳ ಬಳಿಕ ಕುಟುಂಬ ಸೇರಿಕೊಂಡ ನಾರಾಯಣ ದಾಸ್ – ಸ್ನೇಹಾಲಯ ಮತ್ತು ಶ್ರದ್ಧಾ ತಂಡದ ನೆರವಿನಿಂದ ಭಾವುಕ ಪುನರ್ಮಿಲನ ಮಂಜೇಶ್ವರ, ಆಗಸ್ಟ್ 17, 2026: ಸುಮಾರು 30 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ಉತ್ತರಾಖಂಡ ಮೂಲದ ಶ್ರೀ ನಾರಾಯಣ ದಾಸ್, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರದ್ಧಾ ಪುನರ್ವಸತಿ ತಂಡದ ಪ್ರಯತ್ನದಿಂದ ತಮ್ಮ ಸಹೋದರಿಯೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡಿದ್ದಾರೆ. ಆರಂಭದಲ್ಲಿ (ನರೇಮ್ ದಾಸ್) ನರೇನ್ ದಾಸ್ ಎಂದು ಗುರುತಿಸಲ್ಪಟ್ಟಿದ್ದ ಅವರನ್ನು ಜುಲೈ 4, 2026ರಂದು ಕಣ್ಣೂರಿನ ಖಿದ್ಮತ್ ಥಣಲ್ […]

Bihar Native Raju, Found Wandering at Kasaragod Railway Station, Admitted to Snehalaya for Rehabilitation Care

snehalaya-raju-rescue-15-August-2026-00.

ಕಾಸರಗೋಡು ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಬಿಹಾರ ಮೂಲದ ರಾಜು ಅವರಿಗೆ ಸ್ನೇಹಾಲಯದಲ್ಲಿ ಪುನರ್ವಸತಿ ಆರೈಕೆ ಮಂಜೇಶ್ವರ, ಆಗಸ್ಟ್ 16, 2026: ಕಾಸರಗೋಡು ರೈಲು ನಿಲ್ದಾಣದಲ್ಲಿ ಅಸಹಾಯಕ ಹಾಗೂ ದಿಕ್ಕುತೋಚದ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಬಿಹಾರ ಮೂಲದ ಶ್ರೀ ರಾಜು ಅವರನ್ನು ಚಿಕಿತ್ಸೆ, ಸುರಕ್ಷಿತ ಆಶ್ರಯ ಹಾಗೂ ಸಮಗ್ರ ಮನೋಸಾಮಾಜಿಕ ಪುನರ್ವಸತಿಗಾಗಿ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿಕೊಳ್ಳಲಾಗಿದೆ. ಆಗಸ್ಟ್ 15, 2026ರಂದು, ಕಾಸರಗೋಡು ರೈಲು ನಿಲ್ದಾಣದ ಪರಿಸರದಲ್ಲಿ ಅಲೆದಾಡುತ್ತಿದ್ದ ರಾಜು ಅವರ ಅಸಹಾಯಕ ಸ್ಥಿತಿಯನ್ನು ಗಮನಿಸಿದ […]

Snehalaya Celebrates 80th Independence Day with Patriotic Fervour

ಸ್ನೇಹಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ದೇಶಭಕ್ತಿಯ ಸಂಭ್ರಮ ಮಂಜೇಶ್ವರ: ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಅತ್ಯಂತ ಸಂಭ್ರಮ, ದೇಶಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಸ್ನೇಹಾಲಯದ ನಿವಾಸಿಗಳು, ಸಿಬ್ಬಂದಿ, ಆಡಳಿತ ಮಂಡಳಿ, ಟ್ರಸ್ಟಿಗಳು ಹಾಗೂ ಹಿತೈಷಿಗಳು ಒಂದಾಗಿ ಸೇರಿ ಆಚರಿಸಿದ ಈ ಕಾರ್ಯಕ್ರಮವು ಏಕತೆ, ದೇಶಪ್ರೇಮ, ಸಹಬಾಳ್ವೆ ಮತ್ತು ಮಾನವೀಯತೆಯ ಸುಂದರ ಸಂದೇಶವನ್ನು ಸಾರಿತು. ಭಾರತೀಯ ವಾಯುಪಡೆಯ ಸಾರ್ಜೆಂಟ್ ರೇಮಂಡ್ ಎ. ಡಿಸೋಜಾ ಹಾಗೂ ಸ್ನೇಹಾಲಯದ ಧರ್ಮಗುರು ರೆವರೆಂಡ್ ಫಾ. ಸಿರಿಲ್ […]

Need Help?