ಸ್ನೇಹಾಲಯದಲ್ಲಿ ನಿವಾಸಿಗಳ ಕ್ರೀಡಾಕೂಟ 2026: ಕ್ರೀಡಾಸ್ಫೂರ್ತಿ, ಆತ್ಮವಿಶ್ವಾಸ ಮತ್ತು ಸೌಹಾರ್ದತೆಯ ಸಂಭ್ರಮ
ಮಂಜೇಶ್ವರ: ಓಡುವ ಹೆಜ್ಜೆಗಳಲ್ಲಿ ಉತ್ಸಾಹವಿತ್ತು, ಎಸೆಯುವ ಚೆಂಡಿನಲ್ಲಿ ಆತ್ಮವಿಶ್ವಾಸವಿತ್ತು, ಹಾರುವ ಮನಸ್ಸುಗಳಲ್ಲಿ ಹೊಸ ಕನಸುಗಳಿದ್ದವು… ನಗುವಿನ ಅಲೆಗಳ ನಡುವೆ ಸ್ನೇಹದ ಹಸ್ತಗಳು ಒಂದಾದಾಗ, ಕ್ರೀಡೆಯಂಗಳವೇ ಸಂಭ್ರಮದ ಸ್ವರ್ಗವಾಯಿತು..
ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದ ನಿವಾಸಿಗಳಿಗಾಗಿ ಆಯೋಜಿಸಲಾದ ಕ್ರೀಡಾಕೂಟ – 2026 ಕೇವಲ ಕ್ರೀಡಾ ಸ್ಪರ್ಧೆಗಳ ಹಬ್ಬವಾಗಿರದೆ, ಸುಪ್ತ ಪ್ರತಿಭೆಗಳಿಗೆ ವೇದಿಕೆಯಾಗಿ, ಆತ್ಮವಿಶ್ವಾಸಕ್ಕೆ ರೆಕ್ಕೆಗಳಾಗಿ, ಬದುಕಿನಲ್ಲಿ ಹೊಸ ಉತ್ಸಾಹ ತುಂಬಿದ ಸುಂದರ ಸಂಭ್ರಮವಾಗಿ ಮೂಡಿಬಂದಿತು.
ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಿತು. ಬಳಿಕ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗಿರೀಶ್ ಆಳ್ವ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ, ಟ್ರಸ್ಟಿ ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಒಲಿವಿಯಾ ಕ್ರಾಸ್ತಾ, ಸ್ನೇಹಾಲಯದ ಧರ್ಮಗುರುಗಳಾದ ರೆ. ಫಾ. ಸಿರಿಲ್ ಡಿಸೋಜ, ಟ್ರಸ್ಟಿ ಶ್ರೀ ಜೋವಿಯಲ್ ಮ್ಯಾಥ್ಯೂ ಕ್ರಾಸ್ತಾ ಹಾಗೂ ಕ್ಲಿನಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀ ಕ್ಲಿಂಟ್ ಜೋಸೆಫ್ ಸೇರಿದಂತೆ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಸಂಸ್ಥೆಯ ಧ್ವಜಾರೋಹಣ ಹಾಗೂ ವಿವಿಧ ವಸತಿ ಘಟಕಗಳನ್ನು ಪ್ರತಿನಿಧಿಸಿದ ಏಳು ತಂಡಗಳ ಆಕರ್ಷಕ ಪಥಸಂಚಲನದೊಂದಿಗೆ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಸ್ನೇಹಾಲಯದ ಮೊದಲ ನಿವಾಸಿಯಾದ ಶ್ರೀ ಚೋಟು ಅವರು ತಂಡಗಳನ್ನು ಮುನ್ನಡೆಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಸ್ನೇಹಾಲಯದ ಪಯಣ ಮತ್ತು ಸಾಧನೆಯ ನೆನಪನ್ನು ಮೂಡಿಸಿದ ಈ ಕ್ಷಣ ಎಲ್ಲರ ಗಮನ ಸೆಳೆಯಿತು.
ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು. ಈ ಜ್ಯೋತಿಯು ಆಶಾವಾದ, ದೃಢಸಂಕಲ್ಪ ಮತ್ತು ಮುನ್ನಡೆಯ ಸಂಕೇತವಾಗಿ ಎಲ್ಲರಲ್ಲೂ ಹೊಸ ಉತ್ಸಾಹವನ್ನು ತುಂಬಿತು. ಬಳಿಕ ಗಣ್ಯರು ಗುಂಡು ಎಸೆತ ಸ್ಪರ್ಧೆಗೆ ಚಾಲನೆ ನೀಡುವ ಮೂಲಕ ನಿವಾಸಿಗಳಿಗೆ ಪ್ರೋತ್ಸಾಹ ನೀಡಿದರು.
ನಂತರ ಕ್ರೀಡೆಯಂಗಳದಲ್ಲಿ ಶುರುವಾಯಿತು ನಲಿವಿನ ನವೋಲ್ಲಾಸ! 50, 100 ಹಾಗೂ 200 ಮೀಟರ್ ಓಟಗಳಲ್ಲಿ ವೇಗದ ಹೆಜ್ಜೆಗಳು, ನಿಂಬೆಹಣ್ಣು ಓಟದಲ್ಲಿ ಸಮತೋಲನದ ಸವಾಲು, ನಿಂತು ಉದ್ದ ಜಿಗಿತದಲ್ಲಿ ಸಾಧನೆಯ ಹಂಬಲ, ಗುಂಡು ಎಸೆತದಲ್ಲಿ ಶಕ್ತಿಯ ಪ್ರದರ್ಶನ, ಶಟಲ್ ಸ್ಪರ್ಧೆಯಲ್ಲಿ ಚುರುಕುತನ, ಆಲೂಗಡ್ಡೆ ಓಟ ಹಾಗೂ ಅಡಿಕೆ ಹೆಕ್ಕುವ ಸ್ಪರ್ಧೆಗಳಲ್ಲಿ ನಗು-ನಲಿವು, ರೋಚಕ ರಿಲೇ ಓಟದಲ್ಲಿ ತಂಡದ ಒಗ್ಗಟ್ಟು ಹೀಗೆ ಪ್ರತಿಯೊಂದು ಸ್ಪರ್ಧೆಯೂ ವಿಭಿನ್ನ ಅನುಭವವನ್ನು ನೀಡಿತು.
ಶ್ರೀ ಜೋವಿಯಲ್ ಕ್ರಾಸ್ತಾ, ಶ್ರೀ ದೀಕ್ಷಿತ್ ಹಾಗೂ ಶ್ರೀ ಶರಣ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ, ಸ್ಪರ್ಧೆಗಳು ನ್ಯಾಯಸಮ್ಮತವಾಗಿ ನಡೆಯಲು ಸಹಕರಿಸಿದರು.
ಸಂಜೆ 4 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಿಗಳ ಭಾಗವಹಿಸುವಿಕೆ, ಸಾಧನೆ ಹಾಗೂ ಕ್ರೀಡಾ ಮನೋಭಾವವನ್ನು ಅಭಿನಂದಿಸಲಾಯಿತು. ವಿಜೇತರಿಗೆ ಗೌರವದ ಕ್ಷಣಗಳು ಲಭಿಸಿದರೆ, ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರೋತ್ಸಾಹದ ಮಾತುಗಳು ಮತ್ತು ಮೆಚ್ಚುಗೆಯ ಚಪ್ಪಾಳೆಗಳು ದೊರಕಿದವು.
ಸ್ನೇಹಾಲಯದ ಪಾಲಿಗೆ ಈ ಕ್ರೀಡಾಕೂಟವು ಕೇವಲ ಗೆಲುವು-ಸೋಲಿನ ಸ್ಪರ್ಧೆಯಾಗಿರದೆ, ನಿವಾಸಿಗಳ ದೈಹಿಕ ಕ್ಷಮತೆ, ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಬೆರೆಯುವಿಕೆಯನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಯಿತು. ಕ್ರೀಡೆಯ ಮೂಲಕ ಪರಸ್ಪರ ಸ್ನೇಹ, ಸಹಕಾರ ಮತ್ತು ಒಗ್ಗಟ್ಟಿನ ಮೌಲ್ಯಗಳನ್ನು ಅನುಭವಿಸುವ ಅವಕಾಶವನ್ನು ಇದು ಒದಗಿಸಿತು.
ಪದಕಗಳಾಗಲಿ, ಬಹುಮಾನಗಳಾಗಲಿ ಈ ದಿನದ ನಿಜವಾದ ಗೆಲುವನ್ನು ನಿರ್ಧರಿಸಲಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ತೋರಿದ ಧೈರ್ಯ, ಪ್ರತಿಯೊಂದು ಪ್ರಯತ್ನದಲ್ಲೂ ವ್ಯಕ್ತವಾದ ಆತ್ಮವಿಶ್ವಾಸ ಹಾಗೂ ಎಲ್ಲರ ಮುಖದಲ್ಲಿ ಮೂಡಿದ ಸಂತೋಷದ ನಗುವೇ ಈ ಕ್ರೀಡಾಕೂಟದ ನಿಜವಾದ ಸಾಧನೆಯಾಗಿತ್ತು.
ಸ್ನೇಹಾಲಯದ ಕ್ರೀಡಾಕೂಟ – 2026 ಮತ್ತೊಮ್ಮೆ ಸಾರಿದ ಸತ್ಯ ಒಂದೇ:
ಸ್ನೇಹಾಲಯದಲ್ಲಿ ಪ್ರತಿಯೊಂದು ಪ್ರಯತ್ನವೂ ಗೆಲುವು, ಪ್ರತಿಯೊಂದು ನಗುವೂ ಅಮೂಲ್ಯ, ಪ್ರತಿಯೊಬ್ಬ ನಿವಾಸಿಯೂ ಒಬ್ಬ ಚಾಂಪಿಯನ್!

Snehalaya Psycho-Social Rehabilitation Centre – RESIDENTS’ SPORTS DAY 2026: A Celebration of Strength, Smiles and Togetherness
AT SNEHALAYA, EVERY STEP IS A VICTORY, EVERY SMILE IS A MEDAL, AND EVERY PARTICIPANT IS A CHAMPION.
Manjeshwar: The sports ground at Snehalaya Psycho-Social Rehabilitation Centre came alive with joy, laughter and enthusiasm as residents gathered to celebrate Sports Day 2026. It was not just a day of games and competitions but a beautiful celebration of courage, confidence, inclusion and togetherness.
The celebration began with a prayer song, followed by the welcome of dignitaries, including Shri. Girish Alva, President, Mangalore North Youth Congress Constituency; Mr. Joseph Crasta, Founder of Snehalaya Charitable Trust; Mrs. Olivia Crasta, Trustee and Secretary; Rev. Fr. Cyril D’Souza, Chaplain, Snehalaya; Mr. Jovial Mathew Crasta, Trustee; and Mr. Clint Joseph, Head of the Clinical Department.
The institutional flag hoisting and an impressive March Past by SEVEN TEAMS representing different residential units marked the beginning of the celebration. A special highlight was seeing Mr. Chotu, Snehalaya’s very first resident, lead the teams, reminding everyone of Snehalaya’s inspiring journey.
The lighting of the Sports Torch by Founder Mr. Joseph Crasta officially inaugurated the sporting events, symbolising hope, determination and the spirit of moving forward.
The dignitaries added joy to the celebration by initiating the games with a shot put throw, encouraging our residents with their warm support and enthusiasm.
Residents enthusiastically participated in various events, including 50-metre, 100-metre and 200-metre races, lemon race, standing jump, shot put, shuttle, potato race, Areca nut picking and the exciting relay race. The events were conducted under the guidance of referees Mr. Jovial Crasta, Mr. Deekshith and Mr. Sharan, ensuring fair play and enthusiastic participation. Special activities were also organised to ensure that every resident could be part of the celebration.
The day concluded with great joy through the Valedictory Ceremony at 4 pm, celebrating the participation, achievements and sporting spirit of all residents.
For Snehalaya, Sports Day was much more than a competition. It was an opportunity to build confidence, strengthen friendships, encourage physical well-being and experience the happiness of inclusion.
The greatest victory of the day was not measured by medals or finishing positions, but by the courage to participate, the joy of togetherness and the smiles that brightened every face.
At Snehalaya, every effort matters, every smile is precious, and every resident is a champion.
