ಬಂಟ್ವಾಳದ ವೈಲಂಕಣ್ಣಿ ಚರ್ಚ್ ಬಳಿ ನಿರ್ಗತಿಕ ಸ್ಥಿತಿಯಲ್ಲಿ ಪತ್ತೆಯಾದ ಜೀವನ್ರನ್ನು ಸ್ನೇಹಾಲಯ ತಂಡ ರಕ್ಷಿಸಿದೆ
ಮಂಜೇಶ್ವರ, ಸೆಪ್ಟೆಂಬರ್ 27, 2026: ಲಡಾಖ್ ಮೂಲದ ಶ್ರೀ ಜೀವನ್ ಅವರು ಬಂಟ್ವಾಳ ತಾಲ್ಲೂಕಿನ ಫರ್ಲಾ ವೈಲಂಕಣ್ಣಿ ಚರ್ಚ್ ಸಮೀಪ ನಿರ್ಗತಿಕ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಫರ್ಲಾ ಚರ್ಚ್ನ ಫಾದರ್ ಮಾರ್ಕ್ ಅವರು ಜೀವನ್ ಅವರನ್ನು ಗಮನಿಸಿ, ಅವರ ಪರಿಸ್ಥಿತಿಯ ಕುರಿತು ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡಿದರು.
ಮಾಹಿತಿ ದೊರೆತ ತಕ್ಷಣ ಸ್ಪಂದಿಸಿದ ಸ್ನೇಹಾಲಯ ತಂಡವು ಜೀವನ್ ಅವರನ್ನು ಸ್ಥಳದಿಂದ ಕರೆತಂದು, ಮಂಜೇಶ್ವರದ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಸುರಕ್ಷಿತ ಆಶ್ರಯ ಒದಗಿಸಿತು.
ಸ್ನೇಹಾಲಯದಲ್ಲಿ ಜೀವನ್ ಅವರ ದಾಖಲಾತಿ ಸೆಪ್ಟೆಂಬರ್ 23, 2026ರಂದು ನಡೆಯಿತು. ಈ ಸಂದರ್ಭದಲ್ಲಿ ವೈಯಕ್ತಿಕ ಸ್ವಚ್ಛತೆಯ ಕೊರತೆ, ಹೆಚ್ಚಾಗಿ ಮಾತನಾಡುವುದು, ಅಸಂಬದ್ಧ ಸಂಭಾಷಣೆ ಹಾಗೂ ವಸ್ತುಗಳನ್ನು ಸಂಗ್ರಹಿಸುವ ಪ್ರವೃತ್ತಿ ಕಂಡುಬಂದಿತು.
ಸ್ನೇಹಾಲಯವು ಜೀವನ್ ಅವರಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ, ಆರೈಕೆ, ಮನೋಸಾಮಾಜಿಕ ಸಹಾಯ ಹಾಗೂ ಪುನರ್ವಸತಿ ಬೆಂಬಲವನ್ನು ಮುಂದುವರಿಸಲಿದೆ. ಇದೇ ವೇಳೆ, ಅವರ ವೈಯಕ್ತಿಕ ಹಾಗೂ ಕುಟುಂಬದ ಹಿನ್ನೆಲೆಯ ಕುರಿತು ಮಾಹಿತಿ ಸಂಗ್ರಹಿಸುವ ಪ್ರಯತ್ನಗಳು ನಡೆಯುತ್ತಿದ್ದು, ಸಂಬಂಧಿಕರನ್ನು ಪತ್ತೆಹಚ್ಚಲು ಸಾಧ್ಯವಾದಲ್ಲಿ, ಸುರಕ್ಷಿತ ಕುಟುಂಬ ಪುನರ್ಮಿಲನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
ಸ್ನೇಹಾಲಯ ತಂಡದ ಸಮಯೋಚಿತ ಮಧ್ಯಪ್ರವೇಶವು ನಿರ್ಗತಿಕ ಹಾಗೂ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಆರೈಕೆ, ಗೌರವ, ರಕ್ಷಣೆ ಮತ್ತು ಪುನರ್ವಸತಿಯ ಅವಕಾಶ ಒದಗಿಸುವಲ್ಲಿ ಸಮುದಾಯದ ಸಹಕಾರದ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9446547033 / 85903 39570 / 6282495137


Snehalaya Rescues Destitute Man Found Near Vailankanni Church in Bantwal
Manjeshwar, September 27, 2026: A simple act of concern has given a vulnerable man a safe place to begin a new chapter in his life. Mr. Jeevan, a native of Ladakh, was found in a destitute and helpless condition near Vailankanni Church at Farla, Bantwal Taluk.
Noticing Jeevan’s difficult situation, Fr. Mark of Farla Church reached out to Br. Joseph Crasta, Founder of Snehalaya, and informed him about the man. Responding promptly, the Snehalaya team went to the location and brought Jeevan to the Snehalaya Psycho-Social Rehabilitation Centre, Manjeshwar, where he was provided with a safe and caring environment.
Jeevan was admitted to Snehalaya on September 23, 2026. At the time of admission, he was observed to have poor personal hygiene, excessive talking, irrelevant conversations and a tendency to collect objects. The Snehalaya team has taken responsibility for providing him with the necessary medical care, personal support, psychosocial assistance and rehabilitation services.
For a person who had been living without care or support, the intervention has provided more than just shelter. It has given Jeevan an opportunity to regain his dignity, receive care and gradually rebuild his life in a safe and supportive environment.
Meanwhile, Snehalaya is making efforts to learn more about Jeevan’s personal and family background and to trace his relatives. If his family members or relatives can be identified, the organisation will make every possible effort to facilitate a safe and dignified family reunion.
The timely intervention by the Snehalaya team once again highlights the importance of compassion and community support in protecting people who are found alone and vulnerable. For individuals like Jeevan, a helping hand at the right moment can become the first step towards care, dignity, recovery and a possible return to their family.
For more information, contact:
9446547033 / 85903 39570 / 6282495137
