ಹೊಸಂಗಡಿ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಮತ್ತು ಚಿಕಿತ್ಸೆ
ಮಂಜೇಶ್ವರ, ಆಗಸ್ಟ್ 01, 2026: ಕೇರಳದ ಪಾಲಕ್ಕಾಡ್ ಮೂಲದ ಶ್ರೀ ರಾಜನ್ ಅವರು ಹೊಸಂಗಡಿ ರಸ್ತೆಯ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಸಮೀಪ ಅಸಹಾಯಕ ಮತ್ತು ನಿರ್ಲಕ್ಷಿತ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಹಾಗೂ ಪುನರ್ವಸತಿ ಆರೈಕೆ ಒದಗಿಸಲಾಗಿದೆ.
ಈ ಕುರಿತು ಶ್ರೀ ಬಶೀರ್ ಅವರು ಸ್ನೇಹಾಲಯದ ಸಂಸ್ಥಾಪಕರರಾದ ಬ್ರದರ್. ಜೋಸೆಫ್ ಕ್ರಾಸ್ತಾರವರಿಗೆ ಮಾಹಿತಿ ನೀಡಿದರು. ಮಾಹಿತಿ ದೊರಕಿದ ತಕ್ಷಣ ಸ್ನೇಹಾಲಯದ ಸಹ ಸಂಸ್ಥಾಪಕಿ ಶ್ರೀಮತಿ ಒಲಿವಿಯಾ ಕ್ರಾಸ್ತಾ ಅವರ ನೇತೃತ್ವದಲ್ಲಿ ಸ್ನೇಹಾಲಯದ ರಕ್ಷಣಾ ತಂಡ ಸ್ಥಳಕ್ಕೆ ತೆರಳಿ ಶ್ರೀ ರಾಜನ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿಗಾಗಿ ಸ್ನೇಹಾಲಯಕ್ಕೆ ಕರೆತಂದಿತು.
ಜುಲೈ 31, 2026 ರಂದು ಅವರನ್ನು ಸ್ನೇಹಾಲಯದಲ್ಲಿ ದಾಖಲಿಸಲಾಯಿತು. ಪ್ರಾಥಮಿಕ ವೈದ್ಯಕೀಯ ಹಾಗೂ ಮನೋಸಾಮಾಜಿಕ ಮೌಲ್ಯಮಾಪನದಲ್ಲಿ ಅವರಿಗೆ ವೈಯಕ್ತಿಕ ಸ್ವಚ್ಛತೆಯ ಕೊರತೆ, ತಂಬಾಕು ಮತ್ತು ಬೀಡಿ ಸೇವಿಸುವ ಚಟ ಹಾಗೂ ನಡೆಯಲು ತೊಂದರೆ ಇರುವುದನ್ನು ಗಮನಿಸಲಾಯಿತು. ಅವರ ಆರೋಗ್ಯ ಮತ್ತು ಸಾಮಾಜಿಕ ಸ್ಥಿತಿಯನ್ನು ಪರಿಗಣಿಸಿ ವೈದ್ಯಕೀಯ ಚಿಕಿತ್ಸೆ, ವೈಯಕ್ತಿಕ ಆರೈಕೆ, ಸಮಾಲೋಚನೆ ಮತ್ತು ಮನೋಸಾಮಾಜಿಕ ಪುನರ್ವಸತಿಯ ಅಗತ್ಯವಿದೆ ಎಂದು ವೈದ್ಯಕೀಯ ತಂಡ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಶ್ರೀ ರಾಜನ್ ಅವರಿಗೆ ಸ್ನೇಹಾಲಯದಲ್ಲಿ ವೈದ್ಯಕೀಯ ಚಿಕಿತ್ಸೆ, ಸಮಾಲೋಚನೆ, ವೈಯಕ್ತಿಕ ಆರೈಕೆ ಹಾಗೂ ಸಮಗ್ರ ಮನೋಸಾಮಾಜಿಕ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಅವರ ಆರೋಗ್ಯ ಮತ್ತು ಜೀವನಮಟ್ಟ ಸುಧಾರಣೆಗೆ ನಿರಂತರ ಕಾಳಜಿ ವಹಿಸಲಾಗುತ್ತಿದೆ.
ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಬೀದಿಯಲ್ಲಿ ಅಸಹಾಯಕ, ನಿರಾಶ್ರಿತ ಹಾಗೂ ಮಾನಸಿಕ ಮತ್ತು ಸಾಮಾಜಿಕ ಸಂಕಷ್ಟದಲ್ಲಿರುವ ವ್ಯಕ್ತಿಗಳನ್ನು ರಕ್ಷಿಸಿ ಅವರಿಗೆ ಚಿಕಿತ್ಸೆ, ಆರೈಕೆ, ಪುನರ್ವಸತಿ ಮತ್ತು ಗೌರವಯುತ ಬದುಕಿನ ಅವಕಾಶ ಕಲ್ಪಿಸುವ ಮಾನವೀಯ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿದೆ.
ಶ್ರೀ ರಾಜನ್ ಅವರ ಕುಟುಂಬದವರ ಕುರಿತು ಮಾಹಿತಿ ಇರುವವರು ದಯವಿಟ್ಟು ಈ ಸಂಖ್ಯೆಗಳಿಗೆ ಸಂಪರ್ಕಿಸಿ:
📞 9446547033 / 85903 39570 / 6282495137

Snehalaya Rescues Vulnerable Man Found on Hosangadi Road, Provides Treatment and Care
Manjeshwar, August 01, 2026: Mr. Rajan, a native of Palakkad, Kerala, was admitted to the Snehalaya Psycho-Social Rehabilitation Centre after being found in a vulnerable and neglected condition near Gold King Jewellery on Hosangadi Road.
The matter was brought to the attention of Snehalaya Founder Br. Joseph Crasta by Mr. Basheer. Upon receiving the information, the Snehalaya rescue team, under the leadership of Mrs. Olivia Crasta, Co-Executive Director, immediately reached the location and safely rescued Mr. Rajan, bringing him to Snehalaya for treatment, care, and psychosocial rehabilitation.
Mr. Rajan was admitted to the centre on July 31, 2026. During the initial medical and psychosocial assessment, he was found to have poor personal hygiene, dependence on tobacco and beedi, and difficulty in walking. Considering his overall physical and psychosocial condition, the clinical team recommended comprehensive medical treatment, personal care, counselling, and psychosocial rehabilitation.
Mr. Rajan is currently receiving medical treatment, counselling, personal care, and holistic psychosocial rehabilitation services at Snehalaya. The multidisciplinary team is committed to supporting his recovery and improving his overall health, well-being, and quality of life.
Snehalaya Charitable Trust continues its humanitarian mission of rescuing homeless, abandoned, and vulnerable individuals experiencing mental health and psychosocial challenges, ensuring they receive timely treatment, compassionate care, rehabilitation, and an opportunity to live with dignity.
If anyone has information regarding the family or relatives of Mr. Rajan, kindly contact:
📞 9446547033 / 85903 39570 / 6282495137
