KSFE (ಕೆಎಸ್‌ಎಫ್‌ಇ) CSR ಉಪಕ್ರಮದಡಿ ಸ್ನೇಹಾಲಯ ಸಂಸ್ಥೆಗೆ ನೂತನ ಆಂಬ್ಯುಲೆನ್ಸ್ ಹಸ್ತಾಂತರ
ಮಾನವೀಯತೆಯ ಮಿಡಿತದಲ್ಲಿ ಮೂಡಿದ ಸೇವೆಯ ಕನಸು, ಮಾನಸಿಕ ರೋಗಿಗಳ ಸಾಮಾಜಿಕ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ ಸ್ನೇಹಾಲಯ ಸಂಸ್ಥೆಯು ಇಂದು ದಿ. 18-04-2026 ರಂದು ಕೇರಳ ರಾಷ್ಟ್ರೀಯ ಆರ್ಥಿಕ ಸಂಸ್ಥೆಯಾದ ಕೆಎಸ್‌ಎಫ್‌ಇ (Kerala State Financial Enterprises – KSFE) ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ನೂತನ ಆಂಬ್ಯುಲೆನ್ಸ್ ಸೇವೆಯನ್ನು ಇಂದು ಸ್ನೇಹಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರರಿಸಲಾಯಿತು.
ಬೆಳಿಗ್ಗೆ 10:30ಕ್ಕೆ ಕಾರ್ಯಕ್ರಮ ಆರಂಭಗೊಂಡು, ಸ್ನೇಹಾಲಯದ ನಿವಾಸಿಗಳು, ಸಿಬ್ಬಂದಿ ಮತ್ತು ಗಣ್ಯ ಅತಿಥಿಗಳು ಭಾಗವಹಿಸಿದರು. ಕಾರ್ಯಕ್ರಮವನ್ನು ಶ್ರೀ ಕ್ಲಿಂಟ್ ಜೋಸೆಫ್ ನಿರ್ವಹಿಸಿ, ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಎಫ್‌ಇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸನಿಲ್ ಎಸ್.ಕೆ., ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಯು.ಕೆ. ಸೈಫುಲ್ಲಾ ತಂಗಳ್, ಸ್ನೇಹಾಲಯದ ಚಾಪ್ಲೇನ್ ರೆ. ಫಾ. ಸಿರಿಲ್ ಡಿ’ಸೋಜ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಕೇರಳ ತುಳು ಅಕಾಡೆಮಿಯ ಅಧ್ಯಕ್ಷರಾದ ಕೆ.ಆರ್. ಜಯಾನಂದ್, ಶ್ರೀ ಕುಂಜಿ ಕಣ್ಣನ್, ಸಹಾಯಕ ಸಾಮಾನ್ಯ ವ್ಯವಸ್ಥಾಪಕ, ಕೆಎಸ್‌ಎಫ್‌ಎಫ್‌ಇ ಹಾಗೂ ಸ್ನೇಹಾಲಯದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಬ್ರ. ಜೋಸೆಫ್ ಕ್ರಾಸ್ತಾ ಹಾಗೂ ಟ್ರಸ್ಟಿ ಹಾಗೂ ಕಾರ್ಯದರ್ಶಿ ಶ್ರೀಮತಿ ಒಲಿವಿಯಾ ಕ್ರಾಸ್ತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬ್ರ. ಜೋಸೆಫ್ ಕ್ರಾಸ್ತಾ ಅವರು ಮುಖ್ಯ ಭಾಷಣ ನೀಡಿ, ಆಂಬ್ಯುಲೆನ್ಸ್ ಸೇವೆಯ ಅಗತ್ಯತೆ ಮತ್ತು ಅದರ ಮೂಲಕ ನಿವಾಸಿಗಳಿಗೆ ತುರ್ತು ಆರೋಗ್ಯ ಸೇವೆಗಳನ್ನು ಸುಧಾರಿಸುವ ಮಹತ್ವವನ್ನು ಒತ್ತಿಹೇಳಿದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಡಾ. ಸನಿಲ್ ಎಸ್.ಕೆ. ಅವರು ಆಂಬ್ಯುಲೆನ್ಸ್ ಕೀಲಿಯ ಪ್ರತಿಕಾತ್ಮಕ ಹಸ್ತಾಂತರವನ್ನು ನೆರವೇರಿಸಿದರು. ತಮ್ಮ ಭಾಷಣದಲ್ಲಿ ಅವರು, ಕೆಎಸ್‌ಎಫ್‌ಇ ಸಂಸ್ಥೆಯು ಸಮಾಜಮುಖಿ ಕಾರ್ಯಗಳಿಗೆ ಸದಾ ಬದ್ಧವಾಗಿದ್ದು, ಇಂತಹ CSR ಯೋಜನೆಗಳ ಮೂಲಕ ಜನಸೇವೆಯನ್ನು ವಿಸ್ತರಿಸುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯು.ಕೆ. ಸೈಫುಲ್ಲಾ ತಂಗಳ್ ಹಾಗೂ ಕೆ.ಆರ್. ಜಯಾನಂದ್ ಅವರು ಮಾತನಾಡಿ, ಈ ಉಪಕ್ರಮವನ್ನು ಪ್ರಶಂಸಿಸಿ, ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳ ಅಗತ್ಯತೆಯನ್ನು ಪ್ರಸ್ತಾಪಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀ ಜೆಸ್ವಿನ್ ಅವರು ಧನ್ಯವಾದ ಅರ್ಪಿಸಿ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಹೊಸ ಆಂಬ್ಯುಲೆನ್ಸ್‌ನ್ನು ಪ್ರದರ್ಶಿಸಲಾಯಿತು ಮತ್ತು ಅತಿಥಿಗಳು ಛಾಯಾಚಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಸ್ನೇಹಾಲಯದ ಪುರುಷ ಹಾಗೂ ಮಹಿಳೆಯವರ ವಿಭಾಗದಲ್ಲಿ ಪ್ರಸ್ತುತಿಯನ್ನು ವೀಕ್ಷಿಸಿ ಭೇಟಿ ನೀಡಿದರು.
ಈ ಉಪಕ್ರಮವು ಸ್ನೇಹಾಲಯದ ನಿವಾಸಿಗಳಿಗೆ ಉತ್ತಮ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದ್ದು, ಕೆಎಸ್‌ಎಫ್‌ಇ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಗೆ ಮತ್ತೊಂದು ಸಾಕ್ಷಿಯಾಗಿದೆ.
ಈ ಮಹತ್ವದ ಸೇವೆಯನ್ನು ಒದಗಿಸಿದ ಕೆಎಸ್‌ಎಫ್‌ಇ ಸಂಸ್ಥೆಗೆ ಸ್ನೇಹಾಲಯ ಕುಟುಂಬದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತದೆ. ಸಮಾಜದ ಅತ್ಯಂತ ಅಗತ್ಯವಿರುವವರಿಗಾಗಿ ತೋರಿದ ಈ ಮಾನವೀಯ ಕಾಳಜಿ ಎಲ್ಲರಿಗೂ ಪ್ರೇರಣೆಯಾಗಿದೆ.

New Ambulance Launched Under KSFE CSR Initiative
Manjeshwar, April 18, 2026:
A new ambulance was officially launched today under the Corporate Social Responsibility (CSR) initiative of Kerala State Financial Enterprises (KSFE) at a function held in the Snehalaya auditorium.
The event began at 10:30 AM with the gathering of residents, staff, and invited guests. The program was compered by Mr. Clint Joseph, who welcomed the dignitaries and introduced the purpose of the event.
The distinguished guests included Dr. Sanil S.K., Managing Director of KSFE; U.K. Saifulla Thangal, President of Manjeshwar Block Panchayat; Rev. Fr. Cyril D’Souza, Chaplain of Snehalaya; K.R. Jayanand, CPM District Secretariat Member and President of Kerala Tulu Academy; Mr. Kunhi Kannan , Assistant General Manager, KSFE, along with Br. Joseph Crasta, Founder and Managing Trustee, and Mrs. Olivia Crasta, Trustee of Snehalaya.
Bro. Joseph Crasta then delivered the keynote address, highlighting the importance and purpose of the ambulance service in enhancing emergency healthcare support for residents.
The highlight of the program was the symbolic key handover ceremony conducted by Dr. Sanil S.K. In his address, Dr. Sanil emphasized KSFE’s commitment to community welfare through meaningful CSR initiatives.
Speeches were also delivered by U.K. Saifulla Thangal and K.R. Jayanand, who appreciated the initiative and stressed the importance of accessible emergency services in the region.
The program concluded with a vote of thanks by Mr. Jeswin, followed by the national anthem. The newly launched ambulance was later showcased, and guests participated in a photo session at the men’s section ground before proceeding for a presentation and visit.
The initiative marks a significant step in strengthening healthcare support and reflects KSFE’s continued dedication to social responsibility.
