ನಾಲ್ಕು ತಿಂಗಳ ಬಳಿಕ… ಜಾರ್ಖಂಡ್‌ನಲ್ಲಿ ಕುಟುಂಬದ ಮಡಿಲು ಸೇರಿದ ಅಮಿನ್ ಸೊರೆನ್
ಮಂಜೇಶ್ವರ, ಜುಲೈ 16, 2026: ಮಾನವೀಯತೆಯ ಕೈಗಳು ಯಾರನ್ನಾದರೂ ತಲುಪಿದಾಗ, ಕಳೆದುಹೋದ ಬದುಕಿಗೂ ಮತ್ತೆ ಹೊಸ ಬೆಳಕು ಮೂಡುತ್ತದೆ. ಅಂತಹ ಮತ್ತೊಂದು ಹೃದಯಸ್ಪರ್ಶಿ ಪುನರ್ಮಿಲನಕ್ಕೆ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ ಸಾಕ್ಷಿಯಾಗಿದೆ.
ಸ್ನೇಹಾಲಯದ ಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರದ್ಧಾ ಫೌಂಡೇಶನ್, ಮುಂಬೈಯ ಸಹಯೋಗದೊಂದಿಗೆ, ನಾಲ್ಕು ತಿಂಗಳಿನಿಂದ ಕುಟುಂಬದಿಂದ ದೂರವಾಗಿ ಅಲೆದಾಡುತ್ತಿದ್ದ ಅಮಿನ್ ಸೊರೆನ್ ಅವರು, ಜುಲೈ 12, 2026ರಂದು ಜಾರ್ಖಂಡ್ ರಾಜ್ಯದ ಪಾಕುರ್ ಜಿಲ್ಲೆಯ ತಮ್ಮ ಸ್ವಗ್ರಾಮದಲ್ಲಿ ಕುಟುಂಬದ ಮಡಿಲು ಸೇರಿದರು.
ಜಾರ್ಖಂಡ್ ರಾಜ್ಯದ ಪಾಕುರ್ ಜಿಲ್ಲೆಯ ಮಹೇಶ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಕೆಂಡುವಾ ಗ್ರಾಮದ ನಿವಾಸಿಯಾಗಿರುವ ಅಮಿನ್ ಸೊರೆನ್ ಅವರು ವಿವಾಹಿತರಾಗಿದ್ದು, ಇಬ್ಬರು ಪುತ್ರರ ತಂದೆ. ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದ ಅವರು, ಉತ್ತಮ ಬದುಕಿನ ಕನಸಿನೊಂದಿಗೆ ಸ್ನೇಹಿತರು ಮತ್ತು ನೆರೆಹೊರೆಯವರ ಜೊತೆ ಕೆಲಸಕ್ಕಾಗಿ ಕೇರಳಕ್ಕೆ ಬಂದಿದ್ದರು. ಆದರೆ ವಿಧಿಯಾಟ ಬೇರೆದ್ದಾಗಿತ್ತು. ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಅವರನ್ನು ಕುಟುಂಬದಿಂದ ದೂರ ಮಾಡಿ, ಅಲೆದಾಡುವ ಬದುಕಿನತ್ತ ತಳ್ಳಿದವು.
ಜೂನ್ 1, 2026ರಂದು ಕಾಸರಗೋಡು ಜಿಲ್ಲೆಯ ಕುಂಬ್ಳೆಯ ಬದ್ರಿಯಾ ನಗರದಲ್ಲಿ ಅಮಿನ್ ಸೊರೆನ್ ಅವರು ಮಾನಸಿಕ ಅಸ್ವಸ್ಥತೆ ಮತ್ತು ಸಂಕಷ್ಟದ ಸ್ಥಿತಿಯಲ್ಲಿ ಕಂಡುಬಂದರು. ಅವರ ಪರಿಸ್ಥಿತಿಯನ್ನು ಗಮನಿಸಿದ ಕುಂಬ್ಳೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ರೀ ಅನೂಪ್ ಎಂ. ಅವರು ಮಾನವೀಯ ಕಾಳಜಿಯಿಂದ ತಕ್ಷಣವೇ ಅಗತ್ಯ ಕ್ರಮ ಕೈಗೊಂಡರು. ಕುಂಬ್ಳೆ ಪೊಲೀಸ್ ತಂಡವು ಅವರನ್ನು ಸುರಕ್ಷಿತವಾಗಿ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸುವ ಮೂಲಕ ಅವರ ಬದುಕಿಗೆ ಹೊಸ ಆಶಾಕಿರಣವನ್ನು ನೀಡಿತು.
ಸ್ನೇಹಾಲಯದಲ್ಲಿ ನಡೆದ ವೈದ್ಯಕೀಯ ಹಾಗೂ ಮನೋವೈದ್ಯಕೀಯ ಪರೀಕ್ಷೆಯಲ್ಲಿ, ಅಮಿನ್ ಸೊರೆನ್ ಅವರು ವೈಯಕ್ತಿಕ ಸ್ವಚ್ಛತೆಯ ಕೊರತೆ, ಮದ್ಯಾಸಕ್ತಿ ಅವಲಂಬನೆ, ಭ್ರಮಾತ್ಮಕ ವರ್ತನೆ ಹಾಗೂ ಸಂಭವನೀಯ ಸ್ಕಿಜೋ-ಅಫೆಕ್ಟಿವ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ಕಂಡುಬಂತು. ಬಳಿಕ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ, ಮನೋವೈದ್ಯಕೀಯ ಆರೈಕೆ, ಔಷಧೋಪಚಾರ, ಸಮಾಲೋಚನೆ, ಪುನರ್ವಸತಿ ಸೇವೆ ಹಾಗೂ ನಿರಂತರ ಪ್ರೀತಿ-ಆಧಾರಿತ ಆರೈಕೆ ಒದಗಿಸಲಾಯಿತು.
ಕುಟುಂಬವನ್ನು ಪತ್ತೆಹಚ್ಚುವ ಪ್ರಯತ್ನಗಳು ಫಲ ನೀಡಿದ ಬಳಿಕ, ಜುಲೈ 7, 2026ರಂದು ಅಮಿನ್ ಸೊರೆನ್ ಅವರನ್ನು ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಶ್ರದ್ಧಾ ಫೌಂಡೇಶನ್, ಮುಂಬೈಗೆ ವರ್ಗಾಯಿಸಲಾಯಿತು. ಅಲ್ಲಿಂದ ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿ, ಜುಲೈ 12, 2026ರಂದು ಅವರನ್ನು ಜಾರ್ಖಂಡ್‌ನ ತಮ್ಮ ಸ್ವಗ್ರಾಮಕ್ಕೆ ಸುರಕ್ಷಿತವಾಗಿ ಕರೆದೊಯ್ಯಲಾಯಿತು.
ತಾಯಿ, ಸಹೋದರ, ಪುತ್ರರು, ಬಂಧು-ಬಳಗ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅಮಿನ್ ಸೊರೆನ್ ಅವರು ಕುಟುಂಬದ ಮಡಿಲು ಸೇರಿದ ಕ್ಷಣ ಎಲ್ಲರ ಕಣ್ಣಲ್ಲೂ ಸಂತೋಷದ ಕಣ್ಣೀರನ್ನು ತರಿಸಿತು. ನಾಲ್ಕು ತಿಂಗಳ ಅನಿಶ್ಚಿತತೆ, ನೋವು ಮತ್ತು ನಿರೀಕ್ಷೆಯ ಬಳಿಕ ತಮ್ಮ ಆತ್ಮೀಯರನ್ನು ಮರಳಿ ಕಂಡ ಕುಟುಂಬದ ಸಂತೋಷಕ್ಕೆ ಮಿತಿಯೇ ಇರಲಿಲ್ಲ.
“ಮಾನವೀಯತೆ ಬದುಕಿರುವವರೆಗೆ ಯಾರ ಬದುಕೂ ಸಂಪೂರ್ಣ ಕಳೆದುಹೋಗುವುದಿಲ್ಲ; ಪ್ರೀತಿಯ ಸ್ಪರ್ಶ ಸಿಕ್ಕಾಗ ಒಡೆದ ಬದುಕೂ ಮತ್ತೆ ಅರಳುತ್ತದೆ.” ಎಂಬ ಸತ್ಯಕ್ಕೆ ಈ ಪುನರ್ಮಿಲನ ಮತ್ತೊಮ್ಮೆ ಸಾಕ್ಷಿಯಾಯಿತು.
ಅಮಿನ್ ಸೊರೆನ್ ಅವರನ್ನು ರಕ್ಷಿಸಿ, ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಿದ ಬ್ರ. ಜೋಸೆಫ್ ಕ್ರಾಸ್ತಾ, ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಸಿಬ್ಬಂದಿ, ಕುಂಬ್ಳೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ರೀ ಅನೂಪ್ ಎಂ. ಹಾಗೂ ಪೊಲೀಸ್ ತಂಡ, ಮತ್ತು ಶ್ರದ್ಧಾ ಫೌಂಡೇಶನ್, ಮುಂಬೈ ಅವರಿಗೆ ಅಮಿನ್ ಸೊರೆನ್ ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 9446547033 / 85903 39570 / 6282495137

After Four Months, Amin Soren Reunited with His Family in Jharkhand
Manjeshwar, July 16, 2026: When the hands of humanity reach out to someone in need, even a lost life can find new light. Snehalaya Psycho-Social Rehabilitation Centre has once again witnessed such a heart-touching reunion.
Under the guidance of Snehalaya’s Founder, Bro. Joseph Crasta, and in collaboration with Shraddha Foundation, Mumbai, Mr. Amin Soren, who had been separated from his family for four months, was safely reunited with his loved ones in his native village in Pakur district, Jharkhand, on July 12, 2026.
Amin Soren is a resident of Barkenduwa village under Maheshpur Police Station limits in Pakur district, Jharkhand. He is married and the father of two sons. Depending on agriculture for his livelihood, he had come to Kerala along with his friends and neighbours in search of work and a better life. However, due to the harmful effects of substance abuse and mental health issues, he was separated from his family and pushed into a life of wandering.
On June 1, 2026, Amin Soren was found in a distressed condition with mental health concerns at Badriya Nagar, Kumble, in Kasaragod district. Noticing his condition, Sub Inspector Mr. Anoop M. of Kumble Police Station immediately took necessary action with humanitarian concern. The Kumble Police team safely admitted him to Snehalaya Psycho-Social Rehabilitation Centre, giving a new ray of hope to his life.
During the medical and psychiatric assessment at Snehalaya, it was found that Amin Soren was suffering from poor personal hygiene, alcohol dependence, delusional behaviour, and a possible schizo-affective mental illness. He was then provided with emergency medical care, psychiatric treatment, medication, counselling, rehabilitation services, and continuous love-based care.
After efforts to trace his family were successful, Amin Soren was transferred to Shraddha Foundation, Mumbai, on July 7, 2026, for the further reunion process. After completing the necessary procedures, he was safely taken to his native village in Jharkhand and reunited with his family on July 12, 2026.
The moment Amin Soren reunited with his family in the presence of his mother, brother, sons, relatives, and villagers brought tears of joy to everyone’s eyes. After four months of uncertainty, pain, and waiting, the family’s happiness on seeing their loved one again knew no bounds.
This reunion once again proved the truth that “as long as humanity lives, no life is ever completely lost; with the touch of love, even a broken life can bloom again.”
The family members and villagers of Amin Soren expressed their heartfelt gratitude to Bro. Joseph Crasta, the staff of Snehalaya Psycho-Social Rehabilitation Centre, Sub Inspector Mr. Anoop M. and the Kumble Police team, and Shraddha Foundation, Mumbai, for rescuing, treating, caring for, and safely reuniting Amin Soren with his family.
For more information, contact:
9446547033 / 85903 39570 / 6282495137
