ನಾಲ್ಕು ವರ್ಷಗಳ ಬಳಿಕ ಪೋಷಕರೊಂದಿಗೆ ಒಂದಾದ ರೋಹಿತ್ ಕುಶ್ವಾಹ
ಮಂಜೇಶ್ವರ, ಜೂನ್ 12, 2026: ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರದರ್ .ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಹಾಗೂ ಮುಂಬೈನ ಶ್ರದ್ಧಾ ಫೌಂಡೇಶನ್ ಸಹಕಾರದೊಂದಿಗೆ, ನಾಲ್ಕು ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ರೋಹಿತ್ ಕುಶ್ವಾಹ ಅವರನ್ನು ಜೂನ್ 11ರಂದು ಅವರ ಪೋಷಕರೊಂದಿಗೆ ಸುರಕ್ಷಿತವಾಗಿ ಪುನರ್ಮಿಲನಗೊಳಿಸಲಾಯಿತು.
ಉತ್ತರ ಪ್ರದೇಶದ ಕಾನ್ಪುರ ದೇಹಾತ್ ಜಿಲ್ಲೆಯ ಗಜ್ನೇರ್ ಸಮೀಪದ ರಸೂಲ್ಪುರ ಗೊಗೊಮೌ ಗ್ರಾಮದ ಅವಿವಾಹಿತ ರೋಹಿತ್, ಏಪ್ರಿಲ್ 3ರಂದು ಮಂಜೇಶ್ವರ ಬಸ್ ನಿಲ್ದಾಣದಲ್ಲಿ ಗೊಂದಲ ಮತ್ತು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದರು. ಇದನ್ನು ಗಮನಿಸಿದ ಆಟೋ ಚಾಲಕ ಅಶ್ರಫ್ ಅವರು ಸ್ನೇಹಾಲಯಕ್ಕೆ ಮಾಹಿತಿ ನೀಡಿದರು. ಬಳಿಕ ಟ್ರಸ್ಟಿ ಜೋವಿಯಲ್ ಕ್ರಾಸ್ತಾ ಮತ್ತು ರಕ್ಷಣಾ ತಂಡ ರೋಹಿತ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ದಾಖಲಿಸಿದರು.
ರೋಹಿತ್ ಸುಮಾರು ಐದು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಮೊದಲು ದೆಹಲಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಸ್ನೇಹಾಲಯದಲ್ಲಿ ಚಿಕಿತ್ಸೆ ನೀಡಿದ ಬಳಿಕ, ಮೇ 26ರಿಂದ ಮುಂಬೈನ ಶ್ರದ್ಧಾ ಫೌಂಡೇಶನ್‌ನಲ್ಲಿ ಮುಂದಿನ ಪುನರ್ವಸತಿ ಸೇವೆ ನೀಡಲಾಯಿತು. ನಂತರ ಅವರ ಕುಟುಂಬವನ್ನು ಪತ್ತೆಹಚ್ಚಲಾಯಿತು.
ರೋಹಿತ್ ಅವರ ಪೋಷಕರು, ಸಂಬಂಧಿಕರು ಮತ್ತು ಗ್ರಾಮಸ್ಥರು ಬ್ರದರ್ ಜೋಸೆಫ್ ಕ್ರಾಸ್ತಾ, ಸ್ನೇಹಾಲಯ ಹಾಗೂ ಶ್ರದ್ಧಾ ಫೌಂಡೇಶನ್ ಮುಂಬೈಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಕುಟುಂಬಕ್ಕೆ ಎರಡು ತಿಂಗಳ ಔಷಧಿ ನೀಡಲಾಗಿದ್ದು, ನಿಯಮಿತ ಚಿಕಿತ್ಸೆ ಮತ್ತು ಮುಂದಿನ ತಪಾಸಣೆಯ ಕುರಿತು ಸಲಹೆ ನೀಡಲಾಯಿತು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9446547033 / 85903 39570 / 6282495137

After Four Years, Snehalaya Reunites Rohit Kushwaha with His Parents
Manjeshwar, June 12, 2026: Snehalaya Psycho-Social Rehabilitation Centre, under the guidance of Founder Br. Joseph Crasta and with the support of Shraddha Foundation Mumbai, successfully reunited Mr. Rohit Kushwaha with his parents on June 11, 2026, after four years of separation.
Rohit, an unmarried native of Rasulpur Gogomau, Gajner, Kanpur Dehat District, Uttar Pradesh, was found wandering in a vulnerable and confused condition at Manjeshwar Bus Stand on April 3, 2026. Auto driver Mr. Ashraf alerted Snehalaya, following which Trustee Mr. Jovial Crasta and the rescue team safely admitted him for treatment and rehabilitation.
Rohit had been experiencing mental illness for nearly five years and had previously worked as a labourer in Delhi. After treatment at Snehalaya and further rehabilitation support from Shraddha Foundation Mumbai from May 26, 2026, his family was traced.
His parents, relatives, and villagers expressed heartfelt gratitude to Br. Joseph Crasta, Snehalaya, and Shraddha Foundation Mumbai. Two months of medication were provided, and the family was counselled regarding regular treatment and follow-up.
For further information, please contact:
9446547033 / 85903 39570 / 6282495137
