After Four Years, Snehalaya Reunites Rohit Kushwaha with His Parents

ನಾಲ್ಕು ವರ್ಷಗಳ ಬಳಿಕ ಪೋಷಕರೊಂದಿಗೆ ಒಂದಾದ ರೋಹಿತ್ ಕುಶ್ವಾಹ ಮಂಜೇಶ್ವರ, ಜೂನ್ 12, 2026: ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರದರ್ .ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಹಾಗೂ ಮುಂಬೈನ ಶ್ರದ್ಧಾ ಫೌಂಡೇಶನ್ ಸಹಕಾರದೊಂದಿಗೆ, ನಾಲ್ಕು ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ರೋಹಿತ್ ಕುಶ್ವಾಹ ಅವರನ್ನು ಜೂನ್ 11ರಂದು ಅವರ ಪೋಷಕರೊಂದಿಗೆ ಸುರಕ್ಷಿತವಾಗಿ ಪುನರ್ಮಿಲನಗೊಳಿಸಲಾಯಿತು. ಉತ್ತರ ಪ್ರದೇಶದ ಕಾನ್ಪುರ ದೇಹಾತ್ ಜಿಲ್ಲೆಯ ಗಜ್ನೇರ್ ಸಮೀಪದ ರಸೂಲ್ಪುರ ಗೊಗೊಮೌ ಗ್ರಾಮದ ಅವಿವಾಹಿತ ರೋಹಿತ್, ಏಪ್ರಿಲ್ 3ರಂದು ಮಂಜೇಶ್ವರ ಬಸ್ […]
