Gangamma Reunited with Her Daughter After Nine Months of Care and Rehabilitation

/

ಒಂಬತ್ತು ತಿಂಗಳ ಆರೈಕೆ ಮತ್ತು ಪುನರ್ವಸತಿಯ ನಂತರ ಮಗಳೊಂದಿಗೆ ಒಂದಾದ ಗಂಗಮ್ಮ

ಮಂಜೇಶ್ವರ, ನವೆಂಬರ್ 08, 2026: ಕರುಣೆ, ಚೇತರಿಕೆ ಮತ್ತು ಕುಟುಂಬದ ಮಿಲನಕ್ಕೆ ಸಾಕ್ಷಿಯಾದ ಹೃದಯಸ್ಪರ್ಶಿ ಘಟನೆಯಲ್ಲಿ, ಕರ್ನಾಟಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮೂಲದ 46 ವರ್ಷದ ಗಂಗಮ್ಮ ಅವರು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಒಂಬತ್ತು ತಿಂಗಳ ಆರೈಕೆ ಮತ್ತು ಪುನರ್ವಸತಿ ಪಡೆದ ಬಳಿಕ ತಮ್ಮ ಮಗಳೊಂದಿಗೆ ಯಶಸ್ವಿಯಾಗಿ ಒಂದಾಗಿದ್ದಾರೆ.

2026ರ ಜನವರಿಯಿಂದ ನಾಪತ್ತೆಯಾಗಿದ್ದ ಗಂಗಮ್ಮ ಅವರು ಮಂಗಳೂರಿನ ಅತ್ತಾವರ ರಸ್ತೆಯಲ್ಲಿ ಅಸಹಾಯಕ ಮತ್ತು ನಿರ್ಲಕ್ಷಿತ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಕಂಡುಬಂದಿತ್ತು. ಈ ಕುರಿತು ಸ್ನೇಹಾಲಯದ ಹಿತೈಷಿ ಶ್ರೀ ಎಂ. ಬಿ. ಬಶೀರ್ ಅವರು ಮಾಹಿತಿ ನೀಡಿದ್ದರು. ಮಾಹಿತಿ ದೊರೆತ ತಕ್ಷಣ ಸ್ಪಂದಿಸಿದ ಸ್ನೇಹಾಲಯದ ಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಹಾಗೂ ತಂಡ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಬಳಿಕ ಅವರನ್ನು ಸುರಕ್ಷಿತವಾಗಿ ಕೇಂದ್ರಕ್ಕೆ ಕರೆತಂದಿತು.

2026ರ ಫೆಬ್ರವರಿ 28ರಂದು ಗಂಗಮ್ಮ ಅವರನ್ನು ವೈದ್ಯಕೀಯ ತಪಾಸಣೆ, ವೈಯಕ್ತಿಕ ಆರೈಕೆ ಮತ್ತು ಮನೋಸಾಮಾಜಿಕ ಪುನರ್ವಸತಿಗಾಗಿ ಸ್ನೇಹಾಲಯಕ್ಕೆ ದಾಖಲಿಸಲಾಯಿತು. ದಾಖಲಾದ ಸಂದರ್ಭದಲ್ಲಿ ಅವರು ವೈಯಕ್ತಿಕ ಸ್ವಚ್ಛತೆಯ ಕೊರತೆ ಹಾಗೂ ಮದ್ಯಪಾನದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಸ್ಥಿತಿಯನ್ನು ಮನಗಂಡ ಸ್ನೇಹಾಲಯದ ತಂಡವು ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆ, ನಿರಂತರ ಆರೈಕೆ ಮತ್ತು ಪುನರ್ವಸತಿ ಸೇವೆಗಳನ್ನು ಒದಗಿಸಿತು.

ಸ್ನೇಹಾಲಯದ ತಂಡದ ಒಂಬತ್ತು ತಿಂಗಳ ನಿರಂತರ ಆರೈಕೆ, ತಾಳ್ಮೆ ಮತ್ತು ಪ್ರೀತಿಪೂರ್ವಕ ಬೆಂಬಲದಿಂದ ಗಂಗಮ್ಮ ಅವರ ಆರೋಗ್ಯ ಹಾಗೂ ಒಟ್ಟಾರೆ ಜೀವನಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಅವರ ಚೇತರಿಕೆಯೊಂದಿಗೆ ಕುಟುಂಬದವರನ್ನು ಪತ್ತೆಹಚ್ಚಿ ಮರುಸಂಪರ್ಕಿಸುವ ಪ್ರಯತ್ನಗಳೂ ನಡೆದವು. ಕೊನೆಗೂ, ಎಲ್ಲರ ಮನಮುಟ್ಟುವ ಕ್ಷಣದಲ್ಲಿ ಗಂಗಮ್ಮ ಅವರು ತಮ್ಮ ಮಗಳೊಂದಿಗೆ ಯಶಸ್ವಿಯಾಗಿ ಒಂದಾದರು. ಹಲವು ತಿಂಗಳುಗಳ ಅಗಲಿಕೆಯ ನೋವಿಗೆ ತೆರೆ ಬಿದ್ದು, ತಾಯಿ ಮತ್ತು ಮಗಳು ಮತ್ತೆ ಒಂದಾಗುವ ಮೂಲಕ ಕುಟುಂಬದಲ್ಲಿ ಸಂತೋಷ ಮತ್ತು ಹೊಸ ಭರವಸೆ ಮೂಡಿತು.

ಈ ಹೃದಯಸ್ಪರ್ಶಿ ಪುನರ್ಮಿಲನವು ಅಸಹಾಯಕ ವ್ಯಕ್ತಿಗಳನ್ನು ಬೀದಿಗಳಿಂದ ರಕ್ಷಿಸಿ, ಅವರಿಗೆ ಸೂಕ್ತ ಚಿಕಿತ್ಸೆ, ಪ್ರೀತಿ, ಗೌರವ ಮತ್ತು ಪುನರ್ವಸತಿ ಒದಗಿಸುವುದರ ಜೊತೆಗೆ, ಅವರನ್ನು ಮತ್ತೆ ತಮ್ಮ ಕುಟುಂಬದೊಂದಿಗೆ ಸೇರಿಸುವ ಸ್ನೇಹಾಲಯದ ನಿರಂತರ ಸೇವಾ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಸ್ನೇಹಾಲಯದಲ್ಲಿ ಪ್ರತಿಯೊಂದು ರಕ್ಷಣೆಯೂ ಹೊಸ ಆರಂಭ, ಪ್ರತಿಯೊಂದು ಚೇತರಿಕೆಯೂ ಹೊಸ ಭರವಸೆ, ಪ್ರತಿಯೊಂದು ಪುನರ್ಮಿಲನವೂ ಒಂದು ಕುಟುಂಬದ ಸಂತೋಷದ ಕ್ಷಣ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

94465 47033 / 85903 39570 / 62824 95137

snehalaya-gangamma-08-nov-2026-03snehalaya-gangamma-08-nov-2026-03 snehalaya-gangamma-08-nov-2026-01. snehalaya-gangamma-08-nov-2026-02 snehalaya-gangamma-08-nov-2026-04. snehalaya-gangamma-08-nov-2026-06.

Gangamma Reunited with Her Daughter After Nine Months of Care and Rehabilitation

Manjeshwar, November 8, 2026: In a heartwarming story of compassion, recovery and family reunion, 46-year-old Gangamma, a native of Yelburga Taluk in Koppal District, Karnataka, was successfully reunited with her daughter after receiving nine months of care and rehabilitation at Snehalaya Charitable Trust.

Gangamma, who had been missing since January 2026, was found wandering in a helpless and neglected condition on Attavara Road in Mangaluru. Mr. M. B. Basheer, a well-wisher of Snehalaya, brought her situation to the attention of the organisation. Responding promptly, Snehalaya Founder Br. Joseph Crasta and his team reached the location and carried out the rescue operation, bringing her safely to the centre.

On February 28, 2026, Gangamma was admitted to Snehalaya for medical assessment, personal care and psychosocial rehabilitation. At the time of admission, she was experiencing poor personal hygiene and alcohol-related difficulties. Understanding her condition and needs, the Snehalaya team provided her with appropriate medical treatment, counselling, continuous care and rehabilitation support.

Through nine months of dedicated care, patience and compassionate support from the Snehalaya team, Gangamma showed remarkable improvement in her health and overall well-being. Alongside her recovery, efforts were also made to trace her family members and reconnect her with her loved ones.

Finally, in an emotional and memorable moment, Gangamma was successfully reunited with her daughter. The long months of separation came to an end as mother and daughter came together once again, bringing happiness, relief and renewed hope to their family.

This heartwarming reunion reflects Snehalaya’s continued commitment to rescuing vulnerable and abandoned individuals from the streets, providing them with appropriate treatment, love, dignity and rehabilitation, and helping them reunite with their families.

At Snehalaya, every rescue is a new beginning, every recovery is a new hope, and every reunion is a moment of happiness for a family.

For more information, contact:

94465 47033 / 85903 39570 / 62824 95137

Leave a Reply

Your email address will not be published. Required fields are marked *

Need Help?