ಪಡುಬಿದ್ರಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ತಮಿಳುನಾಡಿನ ಬಾಲ ಕುಮಾರ್ ಅವರಿಗೆ ಸ್ನೇಹಾಲಯದಲ್ಲಿ ಪುನರ್ವಸತಿ ಆರೈಕೆ
ಮಂಜೇಶ್ವರ, ಸೆಪ್ಟೆಂಬರ್ 22, 2026: ನಿರಾಶ್ರಿತರು, ಅಸಹಾಯಕರು ಹಾಗೂ ಮಾನಸಿಕ ಮತ್ತು ಸಾಮಾಜಿಕ ಸಂಕಷ್ಟದಲ್ಲಿರುವ ವ್ಯಕ್ತಿಗಳ ರಕ್ಷಣೆ, ಆರೈಕೆ ಮತ್ತು ಪುನರ್ವಸತಿಗಾಗಿ ಸೇವೆ ಸಲ್ಲಿಸುತ್ತಿರುವ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ, ತಮಿಳುನಾಡಿನ ತೇವರಂ ಮೂಲದ ಶ್ರೀ ಬಾಲ ಕುಮಾರ್ ಅವರನ್ನು ಸೆಪ್ಟೆಂಬರ್ 21, 2026ರಂದು ಸುರಕ್ಷಿತ ಆಶ್ರಯ, ಆರೈಕೆ ಮತ್ತು ಪುನರ್ವಸತಿಗಾಗಿ ದಾಖಲಿಸಿಕೊಳ್ಳಲಾಗಿದೆ. ಶ್ರೀ ಬಾಲ ಕುಮಾರ್ ಅವರು ಪಡುಬಿದ್ರಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಕಾರ್ಕಳದ ಖ್ಯಾತ ಉದ್ಯಮಿಯಾದಂತಹ ಶ್ರೀ ಕಿರಣ್ ಕುಮಾರ್ ಅವರ ಗಮನಕ್ಕೆ ಬಂದಿತ್ತು. ಅವರ ಸ್ಥಿತಿಯನ್ನು ಮನಗಂಡ ಶ್ರೀ ಕಿರಣ್ ಕುಮಾರ್ ಅವರು ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್, ಜೋಸೆಫ್ ಕ್ರಾಸ್ತಾ ರವರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ಬಳಿಕ, ಸ್ನೇಹಾಲಯ ತಂಡವು ಪಡುಬಿದ್ರಿಗೆ ತೆರಳಿ ಬಾಲ ಕುಮಾರ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಕೇಂದ್ರಕ್ಕೆ ಕರೆತಂದಿತು. ನಂತರ ಅವರಿಗೆ ಅಗತ್ಯವಾದ ಆರೈಕೆ ಮತ್ತು ಪುನರ್ವಸತಿ ಪ್ರಕ್ರಿಯೆಯನ್ನು ಆರಂಭಿಸಲಾಯಿತು.
ಸ್ನೇಹಾಲಯಕ್ಕೆ ದಾಖಲಾದ ಸಂದರ್ಭದಲ್ಲಿ ಶ್ರೀ ಬಾಲ ಕುಮಾರ್ ಅವರಲ್ಲಿ ವೈಯಕ್ತಿಕ ಸ್ವಚ್ಛತೆಯ ಕೊರತೆ, ಗುರಿಯಿಲ್ಲದೆ ಅಲೆದಾಡುವ ವರ್ತನೆ, ಸ್ವತಃ ಮಾತನಾಡಿಕೊಳ್ಳುವುದು ಹಾಗೂ ಸ್ವತಃ ನಗಿಕೊಳ್ಳುವ ಪ್ರವೃತ್ತಿ ಕಂಡುಬಂದಿದೆ. ಅಲ್ಲದೆ, ಅವರ ಬಲಗೈಯಲ್ಲಿ ಗಾಯದ ಗುರುತು ಕೂಡ ಕಂಡುಬಂದಿದೆ. ಸ್ನೇಹಾಲಯದಲ್ಲಿ ಅವರಿಗೆ ಸುರಕ್ಷಿತ ವಾತಾವರಣ, ಅಗತ್ಯ ಆರೈಕೆ, ದೈಹಿಕ ಆರೋಗ್ಯದ ಮೇಲ್ವಿಚಾರಣೆ ಹಾಗೂ ಮನೋಸಾಮಾಜಿಕ ಪುನರ್ವಸತಿ ನೆರವು ಒದಗಿಸಲಾಗುತ್ತಿದೆ. ಕುಟುಂಬದವರೊಂದಿಗೆ ಸಂಪರ್ಕ ಸಾಧಿಸುವುದು ಹಾಗೂ ಅವರ ಮುಂದಿನ ಪುನರ್ವಸತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಶ್ರೀ ಕಿರಣ್ ಕುಮಾರ್ ಅವರ ಸಮಯೋಚಿತ ಮಾಹಿತಿ ಹಾಗೂ ಸ್ನೇಹಾಲಯ ತಂಡದ ತ್ವರಿತ ಸ್ಪಂದನೆಯ ಮೂಲಕ, ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಬಾಲ ಕುಮಾರ್ ಅವರು ಇದೀಗ ಸುರಕ್ಷಿತ ಆರೈಕೆಯ ವಾತಾವರಣವನ್ನು ಪಡೆದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9446547033 / 8590339570 / 6282495137

Tamil Nadu Native Bala Kumar Found in Distressed Condition in Padubidri, Receives Rehabilitation Care at Snehalaya
Manjeshwar, September 22, 2026: Snehalaya Psychosocial Rehabilitation Centre, dedicated to the rescue, care, and rehabilitation of homeless, vulnerable, and socially distressed individuals, has provided safe shelter and rehabilitation support to Mr. Bala Kumar, a native of Thevaram, Tamil Nadu, who was found wandering in a vulnerable condition in Padubidri.
Mr. Bala Kumar was noticed by Mr. Kiran Kumar, a well-known businessman from Karkala, who observed his distressed condition and informed Br. Joseph Crasta, Founder of Snehalaya Charitable Trust. Following the information, the Snehalaya rescue team promptly travelled to Padubidri and safely brought Mr. Bala Kumar to the rehabilitation centre on September 21, 2026.
At the time of admission, Mr. Bala Kumar was observed to have poor personal hygiene, wandering behaviour, and a tendency to talk and laugh to himself. A visible injury was also noticed on his right hand. Following his admission, Snehalaya initiated the necessary care and rehabilitation process.
He is currently being provided with a safe and supportive environment, personal care, medical attention, and psychosocial rehabilitation assistance. Efforts are also being made to trace and establish contact with his family and to facilitate appropriate steps towards his long-term rehabilitation.
The timely intervention of Mr. Kiran Kumar and the prompt response of the Snehalaya rescue team helped ensure that Mr. Bala Kumar, who was found in a vulnerable condition, received immediate protection, care, and support.
For further information, contact:
9446547033 / 8590339570 / 6282495137
