
ಸ್ನೇಹಾಲಯದಲ್ಲಿ ಪೋಸ್ಟ್-ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಜಾಗೃತಿ (ಆಘಾತಾನಂತರದ ಒತ್ತಡ ಅಸ್ವಸ್ಥತೆಯ ಜಾಗೃತಿ ದಿನ) ದಿನಾಚರಣೆ
ಮಂಜೇಶ್ವರ, ಜೂನ್ 27: ಪಾವೂರಿನ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಪೋಸ್ಟ್-ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಜಾಗೃತಿ ದಿನವನ್ನು ಆಚರಿಸಲಾಯಿತು. ಈ ಅಂಗವಾಗಿ ಆಘಾತ, ಬೆಂಬಲ ಮತ್ತು ಚೇತರಿಕೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. PTSD ಬಗ್ಗೆ ಅರಿವು ಮೂಡಿಸುವುದು, ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಹಾಗೂ ಸಮಯೋಚಿತ ಚಿಕಿತ್ಸೆ ಮತ್ತು ಸಹಾನುಭೂತಿಯ ಆರೈಕೆಯ ಮಹತ್ವವನ್ನು ಒತ್ತಿಹೇಳುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮವು ಕುಮಾರಿ ಮಾನ್ಯಾ ಎಂ, ಮಾನಸಿಕ ಸಾಮಾಜಿಕ ಕಾರ್ಯಕರ್ತೆ, ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ನಂತರ ಮನೋವೈದ್ಯಕೀಯ ತಜ್ಞೆ ಡಾ. ಐಶ್ವರ್ಯ ವಿ. ರಾವ್ ಅವರು ಜಾಗೃತಿ ಸಂದೇಶ ನೀಡಿದರು. ಅವರು PTSD ಯ ಕಾರಣಗಳು, ಲಕ್ಷಣಗಳು ಮತ್ತು ನಿರ್ವಹಣೆಯ ಬಗ್ಗೆ ವಿವರವಾಗಿ ತಿಳಿಸಿ, ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮತ್ತು ಮಾನಸಿಕ-ಸಾಮಾಜಿಕ ಬೆಂಬಲದ ಅಗತ್ಯತೆಯನ್ನು ಒತ್ತಿಹೇಳಿದರು.
ಕ್ಲಿನಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀ ಕ್ಲಿಂಟ್ ಜೋಸೆಫ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಆಘಾತದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಬಹುಶಾಖಾ (Multidisciplinary) ಆರೈಕೆಯ ಪಾತ್ರದ ಕುರಿತು ವಿವರಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಸ್ನೇಹಾಲಯದ ನಿರ್ದೇಶಕರಾದ ಬ್ರ ಜೋಸೆಫ್ ಕ್ರಾಸ್ತಾ ಅವರು, ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಬದುಕುತ್ತಿರುವವರಿಗಾಗಿ ಬೆಂಬಲದಾಯಕ ಮತ್ತು ಕಳಂಕರಹಿತ ವಾತಾವರಣವನ್ನು ನಿರ್ಮಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ವಂದನೀಯ ಫಾ. ಸಿರಿಲ್ ಡಿಸೋಜಾ ( ಸ್ನೇಹಾಲಯದ ಚಾಪ್ಲೈನ್), ಟ್ರಸ್ಟಿ ಶ್ರೀ ಜೋವಿಯಲ್ ಕ್ರಾಸ್ತಾ, ಟ್ರಸ್ಟಿ ಹಾಗೂ ಸ್ನೇಹಾಲಯ ಡಿ-ಅಡಿಕ್ಷನ್ ಕೇಂದ್ರದ ಆಡಳಿತಾಧಿಕಾರಿಣಿ ಕುಮಾರಿ ಸರಿತಾ ಕ್ರಾಸ್ತಾ, ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಆಡಳಿತಾಧಿಕಾರಿ ಶ್ರೀಮತಿ ವೀಣಾ ಡಿಸೋಜಾ, ಸಂಸ್ಥೆಯ ಉಸ್ತುವಾರಿ ಶ್ರೀಮತಿ ಲವಿಟ ಡಿ’ಸೋಜಾ ಸೇರಿದಂತೆ ಸಿಬ್ಬಂದಿವರ್ಗ, ವಿದ್ಯಾರ್ಥಿಯವರು ಹಾಗೂ ನಿವಾಸಿಯವರು ಉಪಸ್ಥಿತರಿದ್ದರು.
ಡಾ. ಐಶ್ವರ್ಯ ವಿ. ರಾವ್ ಅವರು ನಡೆಸಿದ ಮಾಹಿತಿ ಪ್ರಧಾನ ಜಾಗೃತಿ ಅಧಿವೇಶನದಲ್ಲಿ ಭಾಗವಹಿಸಿದವರು ಆಘಾತವನ್ನು ಅರ್ಥಮಾಡಿಕೊಳ್ಳುವುದು, ಅದನ್ನು ಎದುರಿಸುವ ವಿಧಾನಗಳು ಹಾಗೂ ಚೇತರಿಕೆ ಪ್ರಕ್ರಿಯೆಯಲ್ಲಿ ವೃತ್ತಿಪರ ಸಹಾಯದ ಮಹತ್ವದ ಬಗ್ಗೆ ಅಮೂಲ್ಯ ಮಾಹಿತಿಯನ್ನು ಪಡೆದರು.
ಕಾರ್ಯಕ್ರಮದ ಕೊನೆಯಲ್ಲಿ ನರ್ಸಿಂಗ್ ಸೂಪರಿಂಟೆಂಡೆಂಟ್ ಶ್ರೀಮತಿ ಸ್ಪಂದನಾ ಅವರು ವಂದನಾರ್ಪಣೆ ಸಲ್ಲಿಸಿ, ಗಣ್ಯ ಅತಿಥಿಗಳು, ಸಂಪನ್ಮೂಲ ವ್ಯಕ್ತಿ, ಸಿಬ್ಬಂದಿ ಹಾಗೂ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅವರ ಸಹಕಾರದಿಂದ ಕಾರ್ಯಕ್ರಮ ಅರ್ಥಪೂರ್ಣ ಮತ್ತು ಯಶಸ್ವಿಯಾಗಿ ನೆರವೇರಿತು.
Snehalaya Marks Post-Traumatic Stress Disorder Awareness Day
Manjeshwar, June 27: Snehalaya Psycho-Social Rehabilitation Centre, Pavoor, observed Post-Traumatic Stress Disorder (PTSD) Awareness Day by organizing an awareness programme focused on trauma, support, and healing. The programme aimed to create awareness about PTSD, promote understanding of its impact, and emphasize the importance of timely intervention and compassionate care.
The programme commenced with a welcome address by Ms. Manya M, Psychiatric Social Worker. This was followed by an awareness message delivered by Dr. Aishwarya V. Rao, Psychiatric Specialist, who highlighted the causes, symptoms, and management of PTSD, stressing the importance of early diagnosis and psychosocial support.
Mr. Clint Joseph, Head of the Clinical Department, addressed the gathering and spoke about the role of multidisciplinary care in supporting individuals affected by trauma.
The presidential address was delivered by Bro. Joseph Crasta, Executive Director, who emphasized the need to foster a supportive and stigma-free environment for people living with mental health conditions.
The programme was graced by Fr. Cyril (Chaplain), Mr. Jovial Crasta (Trustee), Ms. Saritha Crasta (Trustee and Administrator, Snehalaya De-addiction Centre), Mrs. Veena D’Souza (Administrator, Snehalaya Psycho-Social Rehabilitation Centre), and Ms. Lavita D’Souza (Institutional In-charge), along with staff members, residents, and well-wishers.
An informative awareness session was conducted by Dr. Aishwarya V. Rao, during which participants gained valuable insights into understanding trauma, coping strategies, and the significance of professional support in the healing process.
The programme concluded with a vote of thanks proposed by Mrs. Spandana, Nursing Superintendent, who expressed gratitude to the dignitaries, resource person, staff, and participants for making the programme a meaningful and successful event.
