ಸ್ನೇಹಾಲಯದಿಂದ ಶ್ರೀ ಬಾಬುಲಾಲ್ ಚವ್ಹಾನ್ ಕುಟುಂಬದೊಂದಿಗೆ ಮರುಸೇರಿಕೆ
ಮಂಜೇಶ್ವರ, ಏಪ್ರಿಲ್ 20, 2026: ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ತಂಡವು ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರ ಕರುಣಾಮಯ ಮಾರ್ಗದರ್ಶನದಲ್ಲಿ, ಹಲವು ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ಶ್ರೀ ಬಾಬುಲಾಲ್ ಚವ್ಹಾನ್ ಅವರನ್ನು ಅವರ ಕುಟುಂಬದೊಂದಿಗೆ ಯಶಸ್ವಿಯಾಗಿ ಮರುಸೇರಿಸಲಾಗಿದೆ . ಈ ಮರುಸೇರಿಕೆ ಕುಟುಂಬದವರಿಗೆ ಅಪಾರ ಸಂತೋಷ, ಕಣ್ಣೀರಿನ ಕ್ಷಣಗಳು ಮತ್ತು ಹೊಸ ಆಶೆಯನ್ನು ನೀಡಿತು.
ಮಧ್ಯಪ್ರದೇಶದ ಭುರಾನ್ಪುರ್ ಮೂಲದ ಶ್ರೀ ಬಾಬುಲಾಲ್ ಚವ್ಹಾನ್ ಅವರು ಸುರತ್ಕಲ್ ರಸ್ತೆಯಲ್ಲಿ ಅಲೆದಾಡುತ್ತಿರುವ ಅಸಹಾಯಕ ಮತ್ತು ಸಂಕಷ್ಟದ ಸ್ಥಿತಿಯಲ್ಲಿ ಕಂಡುಬಂದರು. ಅವರ ಪರಿಸ್ಥಿತಿಯನ್ನು ಗಮನಿಸಿದ ಶ್ರೀ ಕಿರಣ್ ಕಾರ್ಕಳ ಅವರು ಈ ವಿಷಯವನ್ನು ಸ್ನೇಹಾಲಯ ತಂಡಕ್ಕೆ ತಿಳಿಸಿದರು. ತಕ್ಷಣವೇ ಸ್ಪಂದಿಸಿದ ಸ್ನೇಹಾಲಯ ತಂಡವು ಅವರನ್ನು ರಕ್ಷಿಸಿ,
ನವೆಂಬರ್ 13, 2025 ರಂದು ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿತು.
ದಾಖಲಾದ ಸಮಯದಲ್ಲಿ, ಅವರು ಗಂಭೀರ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಅಲೆದಾಟದ ವರ್ತನೆ, ಆಕ್ರಮಣಕಾರಿ ಸ್ವಭಾವ, ತಮಗೇ ಮಾತಾಡಿಕೊಳ್ಳುವುದು, ಭ್ರಮೆಗಳು, ಮನನೊಂದು ಸ್ಥಿತಿ ಹಾಗೂ ದೀರ್ಘಕಾಲದ ತಂಬಾಕು ವ್ಯಸನ ಇವುಗಳ ಲಕ್ಷಣಗಳು ಕಂಡುಬಂದವು. ಅವರ ಸ್ಥಿತಿಯನ್ನು ಗಮನಿಸಿ, ಅವರಿಗೆ ಅಗತ್ಯವಾದ ಆರೈಕೆ, ರಕ್ಷಣೆ ಮತ್ತು ಮನೋವೈದ್ಯಕೀಯ ಸಹಾಯವನ್ನು ಸ್ನೇಹಾಲಯದಲ್ಲಿ ನೀಡಲಾಯಿತು.
ಸ್ನೇಹಾಲಯ ತಂಡವು ಅವರ ಕುಟುಂಬವನ್ನು ಹುಡುಕಲು ನಿರಂತರ ಪ್ರಯತ್ನಗಳನ್ನು ನಡೆಸಿತು. ಈ ವೇಳೆ ತಿಳಿದುಬಂದಂತೆ, ಶ್ರೀ ಬಾಬುಲಾಲ್ ಅವರು ಬಿ.ಇ. ಇಂಜಿನಿಯರಿಂಗ್ ಪದವಿ ಪಡೆದಿದ್ದು, ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ 2023ರಲ್ಲಿ ಅವರು ಕಾಣೆಯಾಗಿದ್ದು, ಕುಟುಂಬವು ಮಹಾರಾಷ್ಟ್ರದ ಭುಸಾವಲ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿತ್ತು. ತಮ್ಮ ಮಗ ಸತ್ತಿರಬಹುದು ಎಂದು ಭಾವಿಸಿ ಕುಟುಂಬವು ದುಃಖದಲ್ಲಿತ್ತು.
ತಂಡದ ಪರಿಶ್ರಮ ಫಲವಾಗಿ, ಫೆಬ್ರವರಿ 12, 2026 ರಂದು ಶ್ರೀ ಬಾಬುಲಾಲ್ ಅವರನ್ನು ಅವರ ತಂದೆ-ತಾಯಿ ಮತ್ತು ಸಹೋದರರೊಂದಿಗೆ ಮರುಸೇರಿಸಲಾಯಿತು. ಈ ಕ್ಷಣ ತುಂಬಾ ಭಾವನಾತ್ಮಕವಾಗಿದ್ದು, ತಮ್ಮ ಮಗನನ್ನು ಮತ್ತೆ ಜೀವಂತವಾಗಿ ಕಂಡ ಕುಟುಂಬದವರು ಸಂತೋಷದಿಂದ ಕಣ್ಣೀರಿಟ್ಟರು. ದುಃಖದ ಕಥೆಯು ಸಂತೋಷದ ಕ್ಷಣವಾಗಿ ಮಾರ್ಪಟ್ಟಿತು.
ಕುಟುಂಬದವರು ಸ್ನೇಹಾಲಯ ತಂಡಕ್ಕೆ ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಅವರ ನಿರಂತರ ಸೇವೆ, ಕರುಣೆ ಮತ್ತು ಪರಿಶ್ರಮದಿಂದ ತಮ್ಮ ಮಗನನ್ನು ಮತ್ತೆ ಕಂಡುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು. ಈ ಘಟನೆ ಮಾನವೀಯತೆ, ಸಮಯೋಚಿತ ಸಹಾಯ ಮತ್ತು ಸಹಕಾರದ ಮಹತ್ವವನ್ನು ತೋರಿಸುತ್ತದೆ. ಬ್ರ. ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಸ್ನೇಹಾಲಯವು ಹಲವಾರು ಜೀವಗಳಿಗೆ ಆಶಾಕಿರಣವಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 9446547033 / 85903 39570 / 6282495137

Family Reunion Brings Hope: Snehalaya Reunites Mr. Babulal Chawhan with His Family After Years of Separation
Manjeshwar, April 20, 2026: In a deeply emotional and heart-touching moment, the team of Snehalaya Charitable Trust, under the compassionate leadership of Br. Joseph Crasta, successfully reunited Mr. Babulal Chawhan with his family after years of uncertainty and painful separation bringing immense relief, tears of joy, and renewed hope to his loved ones.
Mr. Babulal Chawhan, a native of Bhuranpur, Madhya Pradesh, was found wandering in a vulnerable and distressed condition at Sirathkal Street. His situation came to attention through timely information provided by Mr. Kiran Karkala. Responding swiftly with compassion and care, the Snehalaya team safely brought him under protection, where he was admitted on November 13, 2025.
At the time of admission, Mr. Babulal was experiencing significant psychological distress, including aggressive behavior, self-muttering, delusional thoughts, depressive mood, and long-term tobacco dependency indicating the urgent need for structured care and rehabilitation. He was received with dignity at the Snehalaya Psycho-Social Rehabilitation Centre, where he was provided continuous care, protection, and emotional support in a safe and nurturing environment.
With unwavering dedication to restoring lives and reconnecting families, the Snehalaya team worked persistently to trace his roots. Their efforts revealed a heartbreaking story Mr. Babulal, a B.E. Engineering graduate who had been working in Mumbai, had gone missing in 2023. His family, believing they had lost him forever, had even filed a missing complaint at Bhusawal Police Station in Maharashtra.
After months of committed efforts, the team’s mission bore fruit on February 12, 2026, when Mr. Babulal was finally reunited with his parents and siblings. The reunion was overwhelmingly emotional—his family, who had once feared the worst, broke down in tears of joy upon seeing him alive and safe. What was once a story of despair transformed into a powerful moment of healing, love, and hope.
The family expressed their heartfelt gratitude to Snehalaya for their relentless efforts, compassion, and dedication in bringing their beloved son back home safely.
This inspiring reunion stands as a shining example of humanity in action guided by the vision and leadership of Br. Joseph Crasta, whose mission continues to restore dignity, rebuild broken lives, and reunite families with love and care.
For further information, please contact:
📞 9446547033 / 85903 39570 / 6282495137
