ಸ್ನೇಹಾಲಯದಿಂದ ಶ್ರೀ ಸೋನಿ ತಮ್ಮ ಪತ್ನಿ ಮತ್ತು ಮಗನೊಂದಿಗೆ ಮಿಲನವಾದ ಕ್ಷಣ
ಮಂಜೇಶ್ವರ, ಏಪ್ರಿಲ್ 02, 2026: ಕರುಣೆ, ಸೇವಾ ಮನೋಭಾವ ಮತ್ತು ಮಾನವೀಯತೆಯ ಮತ್ತೊಂದು ಮನಮುಟ್ಟುವ ಉದಾಹರಣೆಯಲ್ಲಿ, ಬ್ರ. ಜೋಸೆಫ್ ಕ್ರಾಸ್ತಾ ಅವರ ಸಮರ್ಪಿತ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಛತ್ತೀಸ್‌ಗಢ ರಾಜ್ಯದ ಕೊರಿಯಾ ಜಿಲ್ಲೆಯ ಮನೇಂದ್ರಗಢದ ವಿವೇಕಾನಂದ ಕಾಲೋನಿಯ ಮೂಲದ ಶ್ರೀ ಸೋನಿ ಅವರನ್ನು ಸುಮಾರು ಒಂದು ವರ್ಷ ಎಂಟು ತಿಂಗಳ ದೀರ್ಘ ವಿಯೋಗದ ಬಳಿಕ ತಮ್ಮ ಪತ್ನಿ ಮತ್ತು ಮಗನೊಂದಿಗೆ ಯಶಸ್ವಿಯಾಗಿ ಗೋಳಿಸಲಗಿದೆ. ಈ ಮಿಲನವು ಅವರ ಕುಟುಂಬಕ್ಕೆ ಅಪಾರ ಸಂತೋಷ, ನೆಮ್ಮದಿ ಮತ್ತು ಹೊಸ ಆಶೆಯ ಬೆಳಕನ್ನು ತಂದಿದೆ.
ಹಿಂದೆ ಆಟೋ ರಿಕ್ಷಾ ಚಾಲಕರಾಗಿದ್ದ ಶ್ರೀ ಸೋನಿ ಅವರು ಕಳೆದ ಮೂರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಸೂಕ್ತ ಚಿಕಿತ್ಸೆ ಸಿಗದ ಕಾರಣ ಅವರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಟ್ಟಿತು. ಇದರ ಪರಿಣಾಮವಾಗಿ ಮಾದಕ ವಸ್ತುಗಳ ಬಳಕೆ, ಭಾವನಾತ್ಮಕ ಅಸ್ಥಿರತೆ, ಅನಿಯಂತ್ರಿತ ವರ್ತನೆ ಹಾಗೂ ಮನೆ ಬಿಟ್ಟು ಹೋಗುವ ಪ್ರವೃತ್ತಿ ಹೆಚ್ಚಾಯಿತು. ಈ ಪರಿಸ್ಥಿತಿಯಲ್ಲಿ ಅವರು ಮನೆತನದಿಂದ ಸಂಪೂರ್ಣವಾಗಿ ಕಾಣೆಯಾಗಿದ್ದು, ಕುಟುಂಬದವರು ಆತಂಕ ಮತ್ತು ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು.
2026ರ ಜನವರಿ 24ರಂದು, ಮಂಜೇಶ್ವರ ಬಸ್ ನಿಲ್ದಾಣದ ಬಳಿ ಅವರು ಅತ್ಯಂತ ಸಂಕಷ್ಟಕರ ಹಾಗೂ ನಿರ್ಗತಿಕ ಸ್ಥಿತಿಯಲ್ಲಿ ಕಂಡುಬಂದರು. ಆ ಸಮಯದಲ್ಲಿ ಅವರಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಅವರ ಸ್ಥಿತಿಯನ್ನು ಗಮನಿಸಿದ ಶ್ರೀಮತಿ ವಿಜಯಾ, ಶ್ರೀ ಜಕಾರಿಯಾ, ಶ್ರೀ ಮುಜಮ್ಮಿಲ್, ಶ್ರೀ ಬಶೀರ್ ಹಾಗೂ ಶ್ರೀ ಅಲಿ ಅವರು ಸ್ನೇಹಾಲಯದ ಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಪರಿಸ್ಥಿತಿಯ ಕುರಿತು ಜವಾಬ್ದಾರಿಯುತವಾಗಿ ಮಾಹಿತಿ ನೀಡಿದರು. ವಿಷಯದ ಗಂಭೀರತೆಯನ್ನು ಅರಿತ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ತಮ್ಮ ರಕ್ಷಣಾ ತಂಡದೊಂದಿಗೆ ತಕ್ಷಣವೇ ಕ್ರಮ ಕೈಗೊಂಡು ಮಾನವೀಯತೆ ಮತ್ತು ಕಾಳಜಿಯ ನಿಜವಾದ ಉದಾಹರಣೆಯಾಗಿ ಪರಿಣಮಿಸಿದರು.
ರಕ್ಷಣೆ ಬಳಿಕ, ಶ್ರೀ ಸೋನಿ ಅವರನ್ನು ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಸಮಗ್ರ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಆರೈಕೆ, ವೈಯಕ್ತಿಕ ಸಹಾಯ ಹಾಗೂ ಪುನರ್ವಸತಿ ಸೇವೆಗಳು ಒದಗಿಸಲಾಯಿತು.
ಬ್ರ. ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ, ತಂಡವು ಶ್ರದ್ಧೆಯಿಂದ ಕಾರ್ಯನಿರ್ವಹಿಸಿ, ಶ್ರೀ ಸೋನಿ ಅವರ ಕುಟುಂಬವನ್ನು ಛತ್ತೀಸ್‌ಗಢದಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು. ಹಲವು ದಿನಗಳ ಪರಿಶ್ರಮ, ಸಂಪರ್ಕ ಮತ್ತು ಮಾಹಿತಿ ಸಂಗ್ರಹದ ಮೂಲಕ ಅವರ ನಿಖರ ವಿಳಾಸವನ್ನು ದೃಢಪಡಿಸಲಾಯಿತು.
2026ರ ಏಪ್ರಿಲ್ 01ರಂದು, ಭಾವನಾತ್ಮಕ ಕ್ಷಣಗಳ ನಡುವೆ, ಶ್ರೀ ಸೋನಿ ಅವರು ತಮ್ಮ ಕುಟುಂಬದ ಅಪ್ಪುಗೆಯಲ್ಲಿ ಮತ್ತೆ ಸೇರಿದರು. ಈ ಮಿಲನದ ಕ್ಷಣದಲ್ಲಿ, ಅವರ ಪತ್ನಿ ಮತ್ತು ಮಗನ ಕಣ್ಣೀರಿನಲ್ಲಿ ಸಂತೋಷ, ನೋವು ಮತ್ತು ನಿರೀಕ್ಷೆಯ ಸಂಯೋಜನೆ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಬಹುಕಾಲದ ವಿಯೋಗದ ಬಳಿಕ ನಡೆದ ಈ ಮಿಲನವು ಎಲ್ಲರ ಮನಸ್ಸನ್ನು ಮುಟ್ಟಿತು.
ಕುಟುಂಬದವರು ಹಾಗೂ ಸ್ಥಳೀಯರು, ಬ್ರ. ಜೋಸೆಫ್ ಕ್ರಾಸ್ತಾ, ಸ್ನೇಹಾಲಯ ತಂಡ ಹಾಗೂ ಸಹಕಾರ ನೀಡಿದ ಶ್ರದ್ಧಾ ಫೌಂಡೇಶನ್‌ಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಈ ಘಟನೆ ಸಮಯೋಚಿತ ಹಸ್ತಕ್ಷೇಪ, ಸಮರ್ಪಿತ ಸೇವೆ ಮತ್ತು ಮಾನವೀಯತೆಯ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ.
ದಯವಿಟ್ಟು ಸಂಪರ್ಕಿಸಿ:
9446547033 / 8590339570 / 6282495137

Snehalaya Reunites Mr. Soni with His Wife and Son After Nearly Two Years
Manjeshwar, April 02, 2026: In a heart-touching act of compassion, Snehalaya Charitable Trust, under the leadership of Br. Joseph Crasta, successfully reunited Mr. Soni, a native of Vivekanand Colony, Manendragarh, Koriya District, Chhattisgarh, with his wife and son after 1 year and 8 months of separation, bringing immense relief to his family.
A former auto-rickshaw driver, Mr. Soni had a three-year history of mental illness without treatment, which led to substance use, emotional instability, and repeated episodes of leaving home before he went missing.
On January 24, 2026, he was found in a highly distressed and helpless condition near the Manjeshwar Bus Stand. At that time, clear symptoms of mental illness were observed in him.Recognizing his condition, Mrs. Vijaya, Mr. Zakaria, Mr. Mujammil, Mr. Basheer, and Mr. Ali responsibly informed Br. Joseph Crasta, the founder of Snehalaya, about the situation.Understanding the seriousness of the matter, Br. Joseph Crasta immediately took action along with his rescue team, setting a true example of humanity, compassion, and care.
Following the rescue, Mr. Soni received necessary care and rehabilitation through Snehalaya. Under the continued guidance of Br. Joseph Crasta, his family was successfully traced in Chhattisgarh.
On April 01, 2026, he was reunited with his wife and son, in an emotional moment filled with joy and gratitude. His family, along with neighbours, expressed heartfelt thanks to Br. Joseph Crasta, Snehalaya, and Shraddha Foundation for their dedicated efforts.
This reunion highlights the power of timely intervention and collaborative humanitarian service in restoring lives and rebuilding families.
📞 Contact Snehalaya: 9446547033 / 8590339570 / 6282495137
