Manjeshwar, February 22, 2025: In an emotional reunion, Lalto, who had been missing for four years, was finally reunited with his mother and sister, thanks to the tireless efforts of Snehalaya Charitable Trust, Kripa Charitable trust and Shraddha Foundations.Tears of joy flowed as the family embraced him, ending years of heartache and uncertainty.
Lalto, who has struggled with mental illness for over two decades, had previously undergone treatment at Ranaghat Hospital. His sudden disappearance left his family devastated, fearing they might never see him again. However, on January 9, 2025, hope was renewed when Lalto was admitted to Snehalaya by the Kripa Charitable trust in Kannur. Following his recovery, he was transferred to the Shraddha Foundation, where the process of reuniting him with his family began.
After an exhaustive search, Lalto’s family was traced to Haldipara, Bagula, in the Nadia District of West Bengal. The reunion was filled with emotion as his father, a farmer, and his three married sisters welcomed him back with open arms. The family expressed deep gratitude to Snehalaya for their unwavering commitment to reuniting missing individuals with their loved ones.
Lalto’s story is a powerful testament to the work of Snehalaya Charitable Trust, whose mission to rescue, rehabilitate, and reintegrate vulnerable individuals continues to restore hope and reunite families, proving the enduring power of love and community.


ನಾಲ್ಕು ವರ್ಷಗಳ ಅಗಲಿಕೆಯ ನಂತರ ಪಶ್ಚಿಮ ಬಂಗಾಳದಲ್ಲಿ ತನ್ನ ಕುಟುಂಬದೊಡನೆ ಮರುಸೇರಿದ ಲಾಲ್ಟೊ
ಮಂಜೇಶ್ವರ: ಫೆಬ್ರವರಿ 22, 2025 , ಒಂದು ಆನಂದಭರಿತ ಮರುಸಂಯೋಜನೆಯಲ್ಲಿ, ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದವ್ ಲಾಲ್ಟೊ, ಕೊನೆಗೂ ತನ್ನ ತಾಯಿ ಮತ್ತು ಅಕ್ಕನೊಡನೆ ಮರುಸಂಯೋಜನೆಗೊಂಡರು. ಈ ಭಾವನಾತ್ಮಕ ಪುನರ್ಮಿಲನವು ಸ್ನೇಹಾಲಯದ ಅಪರಿಮಿತ ಶ್ರಮದ ಫಲವಾಗಿ ಸಾಧ್ಯವಾಯಿತು. ಅನೇಕ ವರ್ಷಗಳ ವಿಭಾಜನೆ ಮತ್ತು ಅಗಲಿಕೆಯಿಂದ ಬಳಲುತ್ತಿದ ಲಾಲ್ಟೊ ಅವರ ಕುಟುಂಬ, ಆನಂದ ಭಾಷ್ಪಗಳೊಂದಿಗೆ ಅವನನ್ನು ಮರು ಪಡೆಯುವ ಆ ಗಳಿಗೆ ನಿಜಕ್ಕೂ ಹ್ರದಯಸ್ಪರ್ಷಿಯಾಗಿತ್ತು.
ಲಾಲ್ಟೊ, ಎರಡು ದಶಕಗಳಿಗಿಂತ ಹೆಚ್ಚು ಕಾಲ ಮಾನಸಿಕ ರೋಗದಿಂದ ಬಳಲುತ್ತಿದ್ದರು, ಇದಕ್ಕಿಂತ ಮೊದಲು ಅವರು ರಾಣಘಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಅವರು ಅಕಸ್ಮಾತ್ ಕಣ್ಮರೆಯಾದ ದಿನದಿಂದ ಅವರ ಕುಟುಂಬದ ಮೇಲೆ ಭಾರಿ ದುಃಖ ಮತ್ತು ಆತಂಕದ ಮೋಡಗಳನ್ನು ತಂದಿತ್ತು. ಲಾಲ್ಟೊ ಅವರನ್ನು ಪುನಃ ಒಮ್ಮೆ ನೋಡಲಾರೆವು ಎಂದು ಕುಟುಂಬದವರು ಭಯಪಟ್ಟಿದ್ದರು. ಆದರೆ, 2025 ಜನವರಿ 9 ರಂದು, ಅವರು ಕಣ್ಣೂರಿನ ಕೃಪಾ ಭವನ ಸಂಸ್ಥೆಯ ಮೂಲಕ ಸ್ನೇಹಾಲಯಕ್ಕೆ ದಾಖಲಾದರು ಮತ್ತು ಅವನಿಗೆ ಅಗತ್ಯವಾದ ಆರೈಕೆ ಮತ್ತು ಪುನರುಜ್ಜೀವನ ಸೇವೆಗಳನ್ನು ಒದಗಿಸಿದಾಗ, ಅವರ ಪ್ರಾರ್ಥನೆಗಳಿಗೆ ಉತ್ತರ ದೊರಕಿತು.
ಒಂದು ವರ್ಷಕ್ಕಿಂತ ಮೇಲಾಗುತ್ತಿದ್ದಂತೆ ಸ್ನೇಹಾಲಯವು ಯಶಸ್ವಿಯಾಗಿ ಲಾಲ್ಟೊ ಅವರ ಕುಟುಂಬವನ್ನು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ, ಬಾಗುಲಾದ ಹಾಲ್ಡಿಪರ ಪ್ರದೇಶದಲ್ಲಿ ಪತ್ತೆ ಹಚ್ಚಲು ಯಶಸ್ವಿಯಾಯಿತು. . ಪುನರ್ಮಿಲನದ ದಿನ, ರೈತನಾದ ಆತನ ತಂದೆ ಮತ್ತು ಅವನ ಮೂರು ವಿವಾಹಿತ ಸಹೋದರಿಯರು ತೆರೆದ ಹೃದಯದಿಂದ ಲಾಲ್ಟೊ ಅವರನ್ನು ಮನೆಗೆ ಸ್ವಾಗತಿಸಿದರು. ಕಳೆದುಹೋದವರನ್ನು ತಮ್ಮ ಪ್ರಿಯಜನರೊಡನೆ ಮರುಸಂಯೋಜಿಸುವಲ್ಲಿ ಸ್ನೇಹಾಲಯ ತಂಡದ ನಿರಂತರ ಸಮರ್ಪಣೆಗೆ ಕರ ಜೋಡಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಲಾಲ್ಟೊ ಅವರ ಕಥೆ, ದೌರ್ಬಲ್ಯಗೊಳಗಾದ ವ್ಯಕ್ತಿಗಳನ್ನು ರಕ್ಷಿಸಿ, ಪುನರುಜ್ಜೀವನಗೊಳಿಸಿ ಮರುಸಂಯೋಜಿಸುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಸ್ನೇಹಾಲಯದ ನಿಸ್ವಾರ್ಥ ಸೇವೆಯು ಲಾಲ್ಟೊ ನಂತಹ ಅನೇಕ ಮಾನಸಿಕ ರೋಗಿಗಳ ಸ್ಥಳಾಂತರದಿಂದ ದುಃಖಿತ ಕುಟುಂಬಗಳಿಗೆ ಹೊಸ ಆಶೆಯನ್ನು ನೀಡುತ್ತದೆ ಮತ್ತು ಸಾಮಾಜಿಕ ಜನ ಜೀವನದಲ್ಲಿ ಹೇಗೆ ಮಹತ್ವಪೂರ್ಣವಾದ ಬದಲಾವಣೆಗಳನ್ನು ತರಬಹುದು ಎಂಬುದನ್ನು ದೃಢಪಡಿಸುತ್ತದೆ.
