After seven years of painful separation, 70-year-old Abhu Shiddik, fondly known as Abbu, was finally reunited with his family on December 23, 2024. The emotional reunion was made possible by the relentless efforts of Snehalaya and Shraddha Foundations.
Abbu, originally from Kathambari village in West Bengal’s Jalpaiguri district, had been struggling with mental health issues and was found wandering in Kerala. Rescued by Snehalaya Charitable Trust on November 15, 2024, he was admitted to their care facility just ten days later.
For Abbu’s family, the past seven years had been filled with heartbreak. Despite their tireless search efforts, they had lost hope of ever finding him. Over the years, Abbu’s mental health has deteriorated, making him increasingly dependent on his family.
The reunion was a profoundly emotional moment. Tears of joy flowed as Abbu’s brother, sister, sister-in-law, and nephew embraced him after so many years of absence. His family expressed overwhelming gratitude and pledged to care for him moving forward.
This touching reunion stands as a powerful testament to the compassion and dedication of Snehalaya and Shraddha Foundations, who work tirelessly to reunite lost individuals with their loved ones.


ಏಳು ವರ್ಷದ ದೀರ್ಘ ಬೇರ್ಪಡಿಕೆಯ ನಂತರ ಅಬ್ಬು ಶಿದ್ದಿಕ್ ರವರ ಬಾಳಿನಲ್ಲಿ ಬೆಳಗಿದ ಪುನರ್ಮಿಲನದ ಹೊಂಗಿರಣ
ಏಳು ವರ್ಷದ ದೀರ್ಘ ದುಖಾಃತೀತ ಅಗಲಿಕೆಯ ನಂತರ, 70 ವರ್ಷದ ಅಬ್ಬು ಶಿದ್ದಿಕ್, [ಅಬ್ಬು] 2024 ಡಿಸೆಂಬರ್ 23ರಂದು ತಮ್ಮ ಕುಟುಂಬದೊಂದಿಗೆ ಪುನರ್ಮಿಲನಗೊಂಡರು. ಈ ಭಾವನಾತ್ಮಕ ಕ್ಷಣವು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ಗಳ ನಿರಂತರ ಪ್ರಯತ್ನಗಳಿಂದ ಸಾಧ್ಯವಾಯಿತು.
ಅಬ್ಬು ಮೂಲತಃ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಕತಂಬಾರಿ ಗ್ರಾಮದಿಂದ ಬಂದವರಾಗಿದ್ದರು. ಮಾನಸಿಕ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಾ ಅವರು ಕೇರಳದಲ್ಲಿ ಅನಿರ್ಧಿಷ್ಟವಾಗಿ ಅಲೆಮಾರಿ ಜೀವನ ನಡೆಸುತ್ತಿದ್ದರು. ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಅವರನ್ನು 2024 ನವೆಂಬರ್ 15ರಂದು ರಕ್ಷಿಸಿ, ಮುಂದಿನ ಉಪಚಾರಕ್ಕಾಗಿ ಹತ್ತು ದಿನಗಳ ಒಳಗೆ ಸ್ನೇಹಾಲಯ ಕೇಂದ್ರಕ್ಕೆ ದಾಖಲಿಸಿತ್ತು.
ಅಬ್ಬು ಅವರ ಕುಟುಂಬಕ್ಕೆ, ಕಳೆದ ಏಳು ವರ್ಷಗಳು ಅತ್ಯಂತ ದುಃಖಭರಿತವಾಗಿದ್ದವು. ತೀವ್ರ ಶೋಧದ ನಂತರವೂ ಅವರನ್ನು ಹುಡುಕಲು ಸಾಧ್ಯವಾಗಲಿಲ್ಲ. ವರ್ಷಗಳು ಕಳೆದಂತೆ ಅಬ್ಬು ಅವರ ಮನೋಸ್ಥಿತಿ ಹೀನವಾಗುತ್ತಾ ಬಂದಿದ್ದು, ಅವರು ಸಂಪೂರ್ಣವಾಗಿ ತಮ್ಮ ಕುಟುಂಬದ ಮೇಲೆ ಅವಲಂಬಿತರಾಗಿದ್ದರು.
ಪುನರ್ಮಿಲನ ಕ್ಷಣವು ಭಾವಪೂರ್ಣವಾಗಿತ್ತು. ಅಬ್ಬು ಅವರ ಸಹೋದರ, ಸಹೋದರಿ, ಅಳಿಯಂದಿರು ಈ ಪುನರ್ಮಿಲನದಲ್ಲಿ ಹಾಜರಿದ್ದು ದೀರ್ಘ ಕಾಲದ ಅಂತರದ ನಂತರ ಪಡೆದ ಅವರನ್ನು ಪ್ರೀತಿಯ ಆಲಿಂಗನದಿಂದ ಬರಮಾಡಿಕೊಂಡರು. ಅಬ್ಬು ಅವರ ಕುಟುಂಬವು ಸ್ನೇಹಾಲಯದ ಪ್ರತಿ ತಮ್ಮ ಅಗಾಧ ಕ್ರತಜ್ನತೆಗಳನ್ನು ವ್ಯಕ್ತಪಡಿಸಿದರು ಹಾಗೂ ಅಬ್ಬು ರವರಿಗೆ ಮುಂದೆ ಬೇಕಾಗುವ ಎಲ್ಲಾ ನೆರವು ನೀಡಲು ತಾವು ಬದ್ಧರಿದ್ದೇವೆ ಎಂದು ಹೇಳಿದರು.
ಈ ಸ್ಪರ್ಶಕಥೆಯ ಪುನರ್ಮಿಲನ ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ಗಳ ಅಪರಿಮಿತ ಪರಿಶ್ರಮ ಮತ್ತು ಮಾನವೀಯ ಸೌಹಾರ್ಧತೆಯ ಜ್ವಲಂತ ಚಿಹ್ನೆಯಾಗಿದೆ.
