Snehalaya Charitable Trust Wins “NGO of the Year” Award”
We are delighted to share that Snehalaya Charitable Trust has been honoured with the prestigious “NGO of the Year” title by the Public Relations Council of India (PRCI).
The award was presented during the 19th Global Communication Conclave held on 26 September 2025 in Panaji, Goa, in recognition of Snehalaya’s unwavering commitment to rehabilitation services, mental health support, and community welfare irrespective of caste, creed, or background.
Representing Snehalaya, Mr. Jovial Crasta, Trustee, proudly received the award on behalf of the entire Snehalaya family, making this achievement a shared moment of pride for all of us.
This recognition reflects the collective dedication of our staff, volunteers, and donors who continue to transform lives and inspire positive social change every day.

ಈ ವರ್ಷದ ಪ್ರತಿಷ್ಟಿತ ಎನ್ ಜಿ ಒ ಪ್ರಶಸ್ತಿ ಪಡೆದ ಸ್ನೇಹಾಲಯ ಚ್ಯಾರಿಟಬಲ್ ಟ್ರಸ್ಟ್
ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ವತಿಯಿಂದ ಸ್ನೇಹಾಲಯ ಚ್ಯಾರಿಟಬಲ್ ಟ್ರಸ್ಟ್ ಗೆ ಗೌರವಾನ್ವಿತ “ಈ ವರ್ಷದ ಎನ್ಜಿಒ” ಪ್ರಶಸ್ತಿಯಿಂದ ಸನ್ಮಾನಿಸಲ್ಪಟ್ಟಿದ್ದು, ಇದು ಸಂಸ್ಥೆಯ ಸೇವಾ ಕ್ಷೇತ್ರದಲ್ಲಿ ಅಪಾರ ಗೌರವ ಮತ್ತು ಹೆಮ್ಮೆಯ ಸಾಧನೆಯಾಗಿದೆ.
ಈ ವಿಶಿಷ್ಟ ಹಾಗೂ ಪ್ರತಿಷ್ಠಿತ ಪ್ರಶಸ್ತಿ 26-27 ಸೆಪ್ಟೆಂಬರ್ 2025 ರಂದು ಗೋವಾ, ಪಣಜಿನಲ್ಲಿ ಆಯೋಜಿಸಲಾದ 19ನೇ ಗ್ಲೋಬಲ್ ಕಮ್ಯುನಿಕೇಶನ್ ಕಾಂಕ್ಲೀವ್ನಲ್ಲಿ ಸ್ನೇಹಾಲಯಕ್ಕೆ ನೀಡಲಾಯಿತು. ಧರ್ಮ, ಜಾತಿ, ವರ್ಗ, ಮತ್ತು ಬೇರೆಯೇ ಭೇದ ಭಾವವಿಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೆ ನಿಸ್ವಾರ್ಥವಾಗಿ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಸ್ನೇಹಾಲಯದ ಮಾನವೀಯ ಕಾರ್ಯಗಳಿಗೆ ಇದು ಒಂದು ಮಹತ್ವಪೂರ್ಣ ಪ್ರೋತ್ಸಾಹನೆಯಾಗಿದೆ.
ಸ್ನೇಹಾಲಯವನ್ನು ಪ್ರತಿನಿಧಿಸಿದ ಶ್ರೀ ಜೋವಿಯಲ್ ಕ್ರಾಸ್ತಾ (ಟ್ರಸ್ಟಿ) ಅವರು, ಈ ಪ್ರಶಸ್ತಿಯನ್ನು ಎಲ್ಲಾ ಸ್ನೇಹಾಲಯ ಕುಟುಂಬದ ಪರವಾಗಿ ಹೆಮ್ಮೆಯಿಂದ ಸ್ವೀಕರಿಸಿದರು. ಈ ಗೌರವ ಸ್ನೇಹಾಲಯದ ಎಲ್ಲಾ ಸಿಬ್ಬಂದಿ, ಸ್ವಯಂಸೇವಕರು ಮತ್ತು ಬೆಂಬಲಿಗರು ಪ್ರತಿದಿನವೂ ಜೀವನವನ್ನು ರೂಪಿಸಿ, ಸಕಾರಾತ್ಮಕ ಸಾಮಾಜಿಕ ಬದಲಾವಣೆಗೆ ಪ್ರೇರಣೆಯಾಗುತ್ತಿರುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.
ಈ ಪ್ರಮುಖ ಸಾಧನೆ ಸಂಸ್ಥೆಯ ಆರೋಗ್ಯಕರ, ಸಮಗ್ರ ಮತ್ತು ದಯಾಮಯ ಸೇವೆಯ ಕಾಣಿಕೆಯಾಗಿದ್ದು ಸ್ನೇಹಾಲಯದ ಸಿಬ್ಬಂದಿಗಳು, ಸ್ವಯಂಸೇವಕರು ಮತ್ತು ಬೆಂಬಲಿಗರ ಸೇವಾ ಮನೋಭಾವ ಮತ್ತು ಸಕಾರಾತ್ಮಕ ಸಮಾಜ ನಿರ್ಮಾಣದ ಹಾದಿಯನ್ನು ಅನುಸರಿಸುವ ಸಂಕಲ್ಪಕ್ಕೆ ಸ್ಪೂರ್ತಿ ನೀಡುವ ಸಾಕ್ಶಿಯಾಗಿದೆ.
