Mr. Jinder, Found at Bantwal’s Maani Bus Stand, Rescued by Snehalaya Team

/

Manjeshwar, August 9, 2025 : The Snehalaya team has successfully rescued a man named Jinder, who had been staying at the Maani, Bantwal bus stand for the past week. On August 8, 2025, local residents helped Jinder by giving him a bath, providing clothes, and offering him food. Mr. Victor Pinto then informed

Snehalaya’s founder, Br. Joseph Crasta, about the situation. Acting promptly, the Snehalaya team rushed to the spot and safely rescued him.

During the rescue, it was observed that Jinder spoke in Hindi, but no information could be obtained about his family or background. It is suspected that he may have been homeless for a long time. He appeared to prefer speaking to himself rather than engaging with others.

Snehalaya has appealed to the public for assistance in identifying Jinder or helping reunite him with his family. Anyone with information about him or his whereabouts is requested to contact 9446547033 or 7994087033. Your support could play a vital role in Jinder’s recovery and his reunion with his loved ones.

ಬಂಟ್ವಾಳದ ಮಾಣಿ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಶ್ರೀ ಜಿಂದರ್ ರನ್ನು ಸ್ನೇಹಾಲಯದ ತಂಡ ರಕ್ಷಿಸಿದೆ

ಮಂಜೇಶ್ವರ: 2025ರ ಆಗಸ್ಟ್ 9ರಂದು,

ಕಳೆದ ಒಂದು ವಾರದಿಂದ ಬಂಟ್ವಾಳದ ಮಾಣಿ ಬಸ್‌ಸ್ಟ್ಯಾಂಡ್‌ನಲ್ಲಿ ತಂಗಿದ್ದ ಜಿಂದರ್ ಎಂಬ ವ್ಯಕ್ತಿಯನ್ನು ಸ್ನೇಹಾಲಯ ತಂಡವು ಯಶಸ್ವಿಯಾಗಿ ರಕ್ಷಿಸಿದೆ. ಅಲ್ಲಿನ ಸ್ಥಳೀಯ ನಿವಾಸಿಗಳು 2025ರ ಆಗಸ್ಟ್ 8ರಂದು ಜಿಂದರ್‌ರವರನ್ನು ಸ್ನಾನ ಮಾಡಿಸಿ, ಬಟ್ಟೆ ಮತ್ತು ಊಟ ನೀಡಿದರು, ಮತ್ತು ಶ್ರೀ ವಿಕ್ಟರ್ ಪಿಂಟೋ ರವರು ಜಿಂದರ್‌ರವರ ಕುರಿತು ಸ್ನೇಹಾಲಯದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ನೇಹಾಲಯ ತಂಡ ಸ್ಥಳಕ್ಕೆ ತೆರಳಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದರು.

ರಕ್ಷಣೆಯ ಸಂದರ್ಭದಲ್ಲಿ ಜಿಂದರ್ ಅವರು ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು ಅವರ ಕುಟುಂಬ ಅಥವಾ ಹಿನ್ನೆಲೆ ಕುರಿತು ಮಾಹಿತಿ ಲಭ್ಯವಿಲ್ಲ, ಅವರು ಬಹುಶಃ ದೀರ್ಘಕಾಲದಿಂದ ನಿರ್ಗತಿಕ ಸ್ಥಿತಿಯಲ್ಲಿ ಇದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಒಬ್ಬರೇ ಮಾತನಾಡುವ ಸ್ವಭಾವ ಹೊಂದಿರುವುದು ಕಂಡುಬಂದಿದೆ.

ಸ್ನೇಹಾಲಯ ಜಿಂದರ್ ಅವರ ಗುರುತನ್ನು ಪತ್ತೆಹಚ್ಚಲು ಅಥವಾ ಅವರ ಕುಟುಂಬದೊಂದಿಗೆ ಪುನಃ ಐಕ್ಯಗೊಳಿಸಲು ಸಾರ್ವಜನಿಕರ ಸಹಾಯವನ್ನು ವಿನಂತಿಸುತ್ತಿದೆ.

ಈ ವ್ಯಕ್ತಿಯ ಕುರಿತು ಮಾಹಿತಿ ಇರುವವರು ಅಥವಾ ಅವರ ನೆಲೆಯನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಬಲ್ಲವರು ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಲು ವಿನಂತಿಸಲಾಗಿದೆ. ನಿಮ್ಮ ಸಹಾಯ ಜಿಂದರ್ ಅವರ ಚೇತರಿಕೆಗೆ ಮತ್ತು ಅವರ ಪ್ರಿಯಜನರೊಂದಿಗೆ ಪುನಃ ಸೇರಲು ಮಹತ್ವದ್ದಾಗಿದೆ.

Leave a Reply

Your email address will not be published. Required fields are marked *

Need Help?