Manjeshwar, August 31, 2025 : A man identified as Mr. Bhola Kumar, who was found in a distressed state at Mangalore Central Railway Station, has been successfully rescued by Snehalaya Charitable Trust. He has been admitted to the Snehalaya Psycho-Social Rehabilitation Center with the intention of providing temporary treatment and essential support.
During the rescue, Mr. Bhola Kumar was found in a disturbed mental condition, speaking incoherently. A preliminary medical check-up revealed signs of possible mental illness, and it was determined that he requires immediate medical attention and counseling.
The Snehalaya team has taken on the responsibility of gathering more information about Mr. Bhola Kumar and working towards reuniting him with his family. Anyone with any information about him or his family is kindly requested to contact Snehalaya Trust at the following mobile numbers: 9446547033 or 7994087033.
Established under the leadership of Br. Joseph Crasta, Snehalaya Charitable Trust has been a beacon of hope for over 16 years, rescuing and rehabilitating thousands of orphans, mentally ill individuals, and the homeless across Dakshina Kannada, Udupi, and Kasargod districts. The Trust now seeks public cooperation in reuniting Mr. Bhola Kumar with his family.

ಅಸಹಾಯ ಸ್ಥಿತಿಯಲ್ಲಿದ್ದ ಭೋಲಾ ಕುಮಾರ್ ಗೆ ಸ್ನೇಹಾಲಯದಿಂದ ಹೊಸ ಬದುಕಿನ ಆರಂಭ
ಮಂಜೇಶ್ವರ, ಆಗಸ್ಟ್ 31, 2025 : ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಕಟದ ಸ್ಥಿತಿಯಲ್ಲಿ ಕಂಡುಬಂದ ಶ್ರೀ ಭೋಲಾ ಕುಮಾರ್ ಎಂಬುವವರನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ತಂಡವು ಯಶಸ್ವಿಯಾಗಿ ರಕ್ಷಿಸಿದೆ. ತಾತ್ಕಾಲಿಕ ಚಿಕಿತ್ಸೆ ಮತ್ತು ಅಗತ್ಯ ಸಹಾಯವನ್ನು ಒದಗಿಸುವ ಉದ್ದೇಶದಿಂದ ಅವರನ್ನು ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ.ರಕ್ಷಣೆ ಸಂದರ್ಭದಲ್ಲಿ, ಶ್ರೀ ಭೋಲಾ ಕುಮಾರ್ ಅವರು ಅಸಂಬದ್ಧ ಮಾತುಗಳನ್ನು ನುಡಿಸುತ್ತಿರುವ ವಿಚಲಿತ ಮನಸ್ಥಿತಿಯಲ್ಲಿ ಕಂಡುಬಂದರು. ಪ್ರಾಥಮಿಕ ವೈದ್ಯಕೀಯ ಪರಿಶೀಲನೆಯ ವೇಳೆ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಸಾಧ್ಯತೆ ಕಂಡುಬಂದಿದ್ದು, ತಕ್ಷಣ ವೈದ್ಯಕೀಯ ಚಿಕಿತ್ಸೆ ಹಾಗೂ ಸಮಾಲೋಚನೆಯ ಅಗತ್ಯವಿದೆ ಎಂದು ತಿಳಿದುಬಂದಿದೆ.
ಶ್ರೀ ಭೋಲಾ ಕುಮಾರ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವಂತೆ ಹಾಗೂ ಅವರನ್ನು ಅವರ ಕುಟುಂಬದೊಂದಿಗೆ ಪುನರ್ಮಿಲನ ಗೊಳಿಸುವ ಕಾರ್ಯದಲ್ಲಿ ಸ್ನೇಹಾಲಯದ ತಂಡ ಜವಾಬ್ದಾರಿಯಿಂದ ತೊಡಗಿಸಿಕೊಂಡಿದೆ. ಯಾರಾದರೂ ಅವರ ಬಗ್ಗೆ ಅಥವಾ ಅವರ ಕುಟುಂಬದ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿದ್ದರೆ, ದಯವಿಟ್ಟು ಸ್ನೇಹಾಲಯ ಟ್ರಸ್ಟ್ನ ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ವಿನಂತಿಸಲಾಗುತಿದ್ದೇವೆ: 9446547033 ಅಥವಾ 7994087033.
ಬ್ರ. ಜೋಸೆಫ್ ಕ್ರಾಸ್ತಾ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಕಳೆದ 16 ವರ್ಷಗಳಿಂದ ದಕ್ಷಿಣ ಕನ್ನಡ,ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅನಾಥರು, ಮಾನಸಿಕ ಅಸ್ವಸ್ಥರು ಹಾಗೂ ಬೀದಿಗಿಳಿದಿರುವವರ ರಕ್ಷಣೆಗೆ ಸಾವಿರಕ್ಕೂ ಹೆಚ್ಚು ಉಜ್ವಲ ಉದಾಹರಣೆಗಳನ್ನು ನೀಡಿದ್ದು, ಈ ಸಲ ಭೋಲಾ ಕುಮಾರ್ ಅವರನ್ನು ಅವರ ಕುಟುಂಬದೊಂದಿಗೆ ಸೇರಿಸಲು ಸಾರ್ವಜನಿಕರ ಸಹಕಾರವನ್ನು ಕೋರುತ್ತಿದೆ.
