Deepchandh From Patna Found Wandering in Mangalore,Surathkal

/

Manjeshwar, July 15, 2025: A 42-year-old man named Deepchandh, originally from Patna, Bihar, was found wandering near Surathkal Junction in Mangalore, displaying signs of severe mental instability. Witnessing the situation, Mr. Kiran, a resident of Karkala, immediately alerted Br. Joseph Crasta, the founder of Snehalaya.
In a compassionate act, entrepreneur Mr. Kiran personally transported Deepchandh in his own vehicle to the Snehalaya Psycho-Social Rehabilitation Centre in Manjeshwar, where he was safely admitted.
According to Mr. Kiran, Deepchandh appeared highly disoriented and exhibited symptoms of serious psychiatric illness at the time of the rescue. Preliminary medical evaluations confirmed that Deepchandh requires dedicated treatment and ongoing care. He is a Hindi-speaking individual.
Currently, the Snehalaya team is actively working to trace Deepchandh’s family and facilitate his reunion with them. If you have any information that could help identify or locate his family, you are kindly requested to contact the following numbers: 94465 47033 or 79940 87033.
Your support can help reunite this man with his loved ones. Let us come together in the spirit of humanity and be part of this noble mission of reunion.

snehalaya-deepchandh-rescue-27-july-2025-02. snehalaya-deepchandh-rescue-27-july-2025-03. snehalaya-deepchandh-rescue-27-july-2025-05.

ಪಟ್ನಾ ಮೂಲದ ದೀಪಚಂದ್ ರವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಮಂಜೇಶ್ವರದ ಸ್ನೇಹಾಲಯಕ್ಕೆ ಸೇರಿಸಿದ ಉದ್ಯಮಿ ಕಿರಣ್ ಕಾರ್ಕಳ

ಮಂಜೇಶ್ವರ, ಜುಲೈ 15, 2025: ಪಟ್ನಾ, ಬಿಹಾರ ಮೂಲದ 42 ವರ್ಷದ ದೀಪಚಂದ್ ವರು ಮಂಗಳೂರು ಸುರತ್ಕಲ್ ಜಂಕ್ಷನ್ ಬಳಿ ಮಾನಸಿಕ ಅಸ್ಥಿರತೆಯ ಲಕ್ಷಣಗಳೊಂದಿಗೆ ಅಲೆದಾಡುತ್ತಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡರು. ಈ ದೃಶ್ಯವನ್ನು ನೋಡಿದ ಕಾರ್ಕಳದ ನಿವಾಸಿ ಕಿರಣ್ ಅವರು ತಕ್ಷಣವೇ ಸ್ನೇಹಾಲಯ ಸಂಸ್ಥೆಯ ಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡಿದರು. ಮಾನವೀಯತೆ ಮೆರೆದ ಉದ್ಯಮಿ ಕಿರಣ್ ಅವರು, ತಮ್ಮದೇ ವಾಹನದಲ್ಲಿ ದೀಪಚಂದ್ ವರನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆದೊಯ್ದು ದಾಖಲಿಸಿದರು.

ದೀಪಚಂದ್ ರವರನ್ನು ರಕ್ಷಿಸುವ ವೇಳೆ ತೀವ್ರ ಗೊಂದಲದ ಸ್ಥಿತಿಯಲ್ಲಿದ್ದು, ಗಂಭೀರ ಮಾನಸಿಕ ತೊಂದರೆಗಳಿಂದ ಬಳಲುತ್ತಿರುವ ಲಕ್ಷಣಗಳನ್ನು ತೋರಿಸುತ್ತಿದ್ದರು ಎಂಬುದಾಗಿ ಉದ್ಯಮಿ ಕಿರಣ್ ಅವರು ತಿಳಿಸಿದ್ದಾರೆ. ಪ್ರಾಥಮಿಕ ವೈದ್ಯಕೀಯ ತಪಾಸಣೆಯಲ್ಲಿ, ಅವರಿಗೆ ಸಮರ್ಪಿತ ಚಿಕಿತ್ಸೆ ಹಾಗೂ ನಿರಂತರ ಆರೈಕೆ ಅಗತ್ಯವಿದೆ ಎಂಬುದು ದೃಢಪಟ್ಟಿದೆ. ಅವರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ.

ಸದ್ಯ, ದೀಪಚಂದ್ ರವರ ಕುಟುಂಬವನ್ನು ಪತ್ತೆ ಹಚ್ಚಿ ಅವರನ್ನು ಪುನರ್ಮಿಲನಗೊಳಿಸಲು ಸ್ನೇಹಾಲಯ ತಂಡ ಶ್ರಮಿಸುತ್ತಿದೆ. ಅವರ ಗುರುತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯು ನಿಮ್ಮಲ್ಲಿ ಇದ್ದರೆ, ದಯವಿಟ್ಟು ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬೇಕಾಗಿ ವಿನಂತಿ: 94465 47033 ಅಥವಾ 79940 87033.

ಈ ವ್ಯಕ್ತಿಯನ್ನು ತನ್ನ ಕುಟುಂಬಕ್ಕೆ ಮರಳಿಸಲು ನಿಮ್ಮ ಸಹಕಾರ ಅಮೂಲ್ಯವಾಗಿದೆ. ಬನ್ನಿ, ಮಾನವೀಯತೆಯ ಶಕ್ತಿಯಿಂದ ಈ ಕುಟುಂಬದ ಪುನರ್ಮಿಲನಕ್ಕೆ ಕೈಜೋಡಿಸೋಣ.

Leave a Reply

Your email address will not be published. Required fields are marked *

Need Help?