Joyful Reunion of Pandyaraj with his family

/

Manjeshwar: July 22, 2025, After months of uncertainty and concern, 31-year-old Mr. Pandyaraj was finally reunited with his parents. This happy reunion took place at Snehalaya Psycho-Social Rehabilitation Center in Manjeshwar, Kasaragod, Kerala. The emotional reunion brought tears of joy to his parents, who had long awaited his safe return.

Mr. Pandyaraj, who had been experiencing mental health challenges including self-talk and wandering behavior, was initially led by Mrs. Nirmala Santosh, the founder of Kripa Charitable Trust in Nedumpoyil, Kannur, rescued Pandiraj. She was admitted to Snehalaya on February 21, 2025, where he received comprehensive psychiatric treatment, care, and rehabilitation support.

Thanks to the dedicated efforts of the Snehalaya team and his gradual recovery, Mr. Pandyaraj was eventually able to recall and provide the details of his whereabouts. This breakthrough enabled the staff to trace his family in Arunasalam Colony, Ramanathapuram, Coimbatore, Tamil Nadu.

On July 22, 2025, his parents, Mr. S. Sowndaraj and Mrs. Kasthuri, embraced him with overwhelming relief and gratitude. Their joy was shared by the entire rehabilitation team, who witnessed this powerful moment of healing and hope.

This reunion stands as a living witness of Snehalaya’s timely intervention, professional care, and loving concern in restoring lives and reuniting families torn apart by mental health crises.

snehalaya-pandiraj-reunion-22-july-2025-02. snehalaya-pandiraj-reunion-22-july-2025-03. snehalaya-pandiraj-reunion-22-july-2025-05. snehalaya-pandiraj-reunion-22-july-2025-06. snehalaya-pandiraj-reunion-22-july-2025-07.

ಪಾಂಡಿರಾಜ್‌ರವರು ತಮ್ಮ ಹೆತ್ತವರೊಂದಿಗೆ ಆನಂದಮಯ ಸಮಾಗಮ

ಮಂಜೇಶ್ವರ: ಜುಲೈ 22, 2025 ತಿಂಗಳು ಗಟ್ಟಲೆಯ ಅನಿಶ್ಚಿತತೆ ಮತ್ತು ಆತಂಕದ ನಂತರ ಕೊನೆಗೂ 31 ವರ್ಷದ ಶ್ರೀ ಪಾಂಡಿರಾಜ್‌ ಅವರು ತಮ್ಮ ತಂದೆ-ತಾಯಿಯೊಂದಿಗೆ ಪುನ ಒಂದಾದರು. ಈ ಭಾವನಾತ್ಮಕ ಪುನರ್ಮಿಲನವು ಕೇರಳದ ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ನಡೆಯಿತು. ತಮ್ಮ ಮಗನ ಸುರಕ್ಷಿತ ಮರಳುವಿಕೆಗಾಗಿ ಕಾಯುತ್ತಿದ್ದ ತಂದೆ-ತಾಯಿ ಆನಂದಭಾಷ್ಪಗಳೊಂದಿಗೆ ತಮ್ಮ ಮಗನನ್ನು ಅಪ್ಪಿಕೊಳ್ಳುವ ಕ್ಷಣವು ನಿಜವಾಗಿಯೂ ಮಾರ್ಮಿಕವಾಗಿತ್ತು.

ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪಾಂಡಿರಾಜ್‌ರನ್ನು, ಸ್ವಯಂ-ಮಾತುಕತೆ ಮತ್ತು ಅಲೆದಾಡುವ ವರ್ತನೆಯೊಂದಿಗೆ, ಕಣ್ಣೂರಿನ ನೆಡುಂಪೊಯಿಲ್‌ನ ಕೃಪಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿಯಾದಂತಹ ಶ್ರೀಮತಿ ನಿರ್ಮಲಾ ಸಂತೋಷ್ ರವರು ಪಾಂಡಿರಾಜ್ ರವರನ್ನು ರಕ್ಷಿಸಿದ್ದರು. ಅನಂತರ ಫೆಬ್ರವರಿ 21, 2025 ರಂದು ಅವರನ್ನು ಸ್ನೇಹಾಲಯಕ್ಕೆ ದಾಖಲಿಸಲಾಯಿತು, ಅಲ್ಲಿ ಅವರಿಗೆ ಸಮಗ್ರ ಮಾನಸಿಕ ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಬೆಂಬಲವನ್ನು ಒದಗಿಸಲಾಯಿತು.
ಸ್ನೇಹಾಲಯ ತಂಡದ ಸಮರ್ಪಿತ ಪ್ರಯತ್ನಗಳಿಂದ ಮತ್ತು ಅವರ ಕ್ರಮೇಣ ಚೇತರಿಕೆಯಿಂದ, ಪಾಂಡಿರಾಜ್‌ ಅವರು ತಮ್ಮ ವಿಳಾಸದ ವಿವರಗಳನ್ನು ನೆನಪಿಸಿಕೊಳ್ಳಲು ಶಕ್ತರಾದರು. ಇದರಿಂದಾಗಿ ಸ್ನೇಹಾಲಯದ ಸಿಬ್ಬಂದಿಗೆ ತಮಿಳುನಾಡಿನ ಕೊಯಮತ್ತೂರಿನ ರಾಮನಾಥಪುರಂನ ಅರುಣಾಸಲಂ ಕಾಲೋನಿಯಲ್ಲಿರುವ ಅವರ ಕುಟುಂಬವನ್ನು ಪತ್ತೆಹಚ್ಚಲು ಸಾಧ್ಯವಾಯಿತು.
ಜುಲೈ 22, 2025 ರಂದು, ಅವರ ತಂದೆ-ತಾಯಿ ಶ್ರೀ ಎಸ್. ಸೌಂದರಾಜ್ ಮತ್ತು ಶ್ರೀಮತಿ ಕಸ್ತೂರಿ ಅವರು ಸ್ನೇಹಾಲಯಕ್ಕೆ ಆಗಮಿಸಿ ತಮ್ಮ ಕಳೆದು ಹೋದ ಮಗನನ್ನು ಆನಂದದಿಂದ ಅಪ್ಪಿಕೊಂಡರು. ಈ ಭಾವನಾತ್ಮಕ ಕ್ಷಣವನ್ನು ಸ್ನೇಹಾಲಯದ ಸಿಬ್ಬಂದಿ ವರ್ಗವು ಸಂತೋಷದಿಂದ ವೀಕ್ಷಿಸಿತು.

ಈ ಸಮಾಗಮವು ಸ್ನೇಹಾಲಯದ ಸಕಾಲಿಕ ಹಸ್ತಕ್ಷೇಪ, ಸಮರ್ಪಿತ ಸೇವೆ, ವೃತ್ತಿಪರ ಆರೈಕೆ ಮತ್ತು ಪ್ರೀತಿಯ ಕಾಳಜಿಯಿಂದ ಮಾನಸಿಕ ಆರೋಗ್ಯ ಸಂಕಷ್ಟದಿಂದ ಬೇರ್ಪಟ್ಟ ಕುಟುಂಬಗಳನ್ನು ಒಂದುಗೂಡಿಸುವ ಜೀವಂತ ಸಾಕ್ಷಿಯಾಗಿ ಮೂಡಿಬಂತು.

 

Leave a Reply

Your email address will not be published. Required fields are marked *

Need Help?