Manjeshwar, July 4, 2025: The Snehalaya team successfully rescued a 38-year-old woman named Rajuni from Mangalore Central Railway Station after being informed by the railway staff. She has been admitted to Snehalaya’s Psycho-Social Rehabilitation Home for Women, where she is receiving essential care and support.
Upon rescue, Rajuni was found in poor personal hygiene and was communicating primarily in Assamese. Initial assessments indicate that she is experiencing psychiatric symptoms. The Snehalaya team is ensuring that she receives the necessary medical attention, emotional support, and safe accommodation.
We urgently appeal to the public for any information regarding Rajuni’s identity, family, or background. Your assistance could play a crucial role in reuniting her with her loved ones and supporting her journey towards recovery.
If you have any information, please contact us at 9446547033 or 7994087033. Any details, no matter how small, could make a significant difference in Rajuni’s life. Let’s come together to give her the hope and dignity she deserves for a better future.

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥೆಯಾಗಿ ತಿರುಗಾಡುತ್ತಿದ್ದ ಮಹಿಳೆಗೆ ಸ್ನೇಹಾಲಯ ತಂಡದಿಂದ ರಕ್ಷಣೆ
ಮಂಜೇಶ್ವರ, ಜುಲೈ 4, 2025. ಸ್ನೇಹಾಲಯ ರಕ್ಷಣಾ ತಂಡವು ರೈಲ್ವೆ ಸಿಬ್ಬಂದಿಯಿಂದ ಪಡೆದ ಮಾಹಿತಿ ಮೇರೆಗೆ, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ 38 ವರ್ಷದ ರಾಜುನಿ ಎಂಬ ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. ಪ್ರಸ್ತುತ: ಅವಳನ್ನು ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗದಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಅವಳಿಗೆ ಅಗತ್ಯವಿರುವ ಸಂಪೂರ್ಣ ಆರೈಕೆ ಮತ್ತು ಬೆಂಬಲವನ್ನು ನೀಡಲಾಗುತ್ತಿದೆ.
ರಕ್ಷಣೆಯ ಸಂದರ್ಭದಲ್ಲಿ, ರಾಜುನಿ ವೈಯಕ್ತಿಕ ಸ್ವಚ್ಛತೆಯ ಕೊರತೆಯಲ್ಲಿದ್ದಳು ಮತ್ತು ಮುಖ್ಯವಾಗಿ ಅಸ್ಸಾಮೀ ಭಾಷೆಯಲ್ಲಿ ಮಾತುಕತೆ ನಡೆಸುತ್ತಿದ್ದಳು. ಆರಂಭಿಕ ಮೌಲ್ಯಮಾಪನದಲ್ಲಿ ರಾಜುನಿ ಮಾನಸಿಕ ರೋಗಲಕ್ಷಣಗಳನ್ನು ಅನುಭವಿಸುತ್ತಿರುವುದು ತಿಳಿದುಬಂದಿದೆ. ಸ್ನೇಹಾಲಯ ತಂಡವು ಅವಳಿಗೆ ಅಗತ್ಯವಿರುವ ವೈದ್ಯಕೀಯ ಗಮನ, ಭಾವನಾತ್ಮಕ ಬೆಂಬಲ ಮತ್ತು ಸುರಕ್ಷಿತ ವಸತಿಯನ್ನು ಒದಗಿಸುತ್ತಿದೆ.
ರಾಜುನಿಯ ಗುರುತು, ಕುಟುಂಬದ ಸುಳಿವು ಅಥವಾ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ ನಾವು ಸಾರ್ವಜನಿಕರಿಗೆ ಮನವಿ ಮಾಡುವುದೇನೆಂದರೆ ರಾಜುನಿಯನ್ನು ಅವಳ ಪ್ರೀತಿಪಾತ್ರರೊಂದಿಗೆ ಒಂದುಗೂಡಿಸಲು ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ. ನಿಮ್ಮ ಸಹಾಯ, ಬೆಂಬಲ ಎಷ್ಟೇ ಸಣ್ಣದಾದರೂ ಅದು ರಾಜುನಿಯ ಜೀವನದಲ್ಲಿ ಗಮನಾರ್ಹ ಬದಲಾವಣೆ ತರಬಹುದು. ಅವಳಿಗೆ ಭರವಸೆ ಮತ್ತು ಗೌರವದೊಂದಿಗೆ ಉತ್ತಮ ಭವಿಷ್ಯವನ್ನು ನೀಡಲು ಒಟ್ಟಾಗಿ ಕೈಜೋಡಿಸೋಣ.
