Manjeshwar: In collaboration with Snehalaya Charitable Trust and Shraddha Foundation Mumbai, Mr. Ramdeep, who had been missing for nearly a year, was successfully reunited with his uncle and brother in Bharatpur, Rajasthan.
Mr. Ramdeep’s difficult journey began after separating from his wife. Normally a hardworking daily wage labourer, he fell into mental instability following the separation. He has a six-year-old son and an eight-year-old daughter. With him being the sole breadwinner, his disappearance had placed the family in deep distress.
OOn April 27, 2025, the Snehalaya Charitable Trust team immediately rescued Ramdeep from Manjeshwar Junction based on information provided by auto driver Mr. zakhariya. Although he was struggling with mental health issues at the time, with continuous medical, psychological, and emotional support, he gradually began to recover.
Through consistent counselling and compassionate care, Mr. Ramdeep was able to recall significant details about his home and family. The Snehalaya team worked diligently to locate his family in Rajasthan. After two months of rehabilitation and coordination, an emotional reunion was organised on July 6, 2025, with the support of Snehalaya and Shraddha Foundation. His uncle and brother welcomed him with love, expressing immense happiness and gratitude.
This reunion stands as a testament to the dedication of Snehalaya in Manjeshwar and Shraddha Foundation in Mumbai. Their efforts restored humanity, hope, and a sense of belonging in Mr. Ramdeep’s life. This incident reminds us of the enduring power of family and care.

ಪತ್ನಿಯ ಬೇರ್ಪಡಿಕೆಯಿಂದ ತೊಂದರೆಗೊಳಗಾದ ರಾಮದೀಪ್ ಒಂದು ವರ್ಷದ ಬಳಿಕ ಕುಟುಂಬಕ್ಕೆ ಮರಳಿದ ಕ್ಷಣ
ಮಂಜೇಶ್ವರ: ಸ್ನೇಹಾಲಯ ಮತ್ತು ಶ್ರದ್ದಾ ಫೌಂಡೇಶನ್ ಸಂಸ್ಥೆಗಳ ಸಹಯೋಗದೊಂದಿಗೆ ಸುಮಾರು ಒಂದು ವರ್ಷಗಳಿಂದ ಕಾಣೆಯಾಗಿದ್ದ ಶ್ರೀ ರಾಮದೀಪ್ ಅವರನ್ನು ರಾಜಸ್ಥಾನದ ಭರತ್ ಪುರದಲ್ಲಿರುವ ಅವರ ಮಾವ ಮತ್ತು ಸಹೋದರರೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಿದೆ.
ಶ್ರೀ ರಾಮದೀಪ್ ಅವರ ಕಷ್ಟಕರ ಪ್ರಯಾಣವು ಪತ್ನಿಯಿಂದ ಬೇರ್ಪಟ್ಟ ನಂತರ ಆರಂಭವಾಯಿತು. ಸಾಮಾನ್ಯವಾಗಿ ದಿನ ಕೂಲಿ ಕಾರ್ಮಿಕರಾಗಿದ್ದು ಇವರು, ಪತ್ನಿಯ ಬೇರ್ಪಡಿಕೆಯ ಬಳಿಕ ಮಾನಸಿಕ ಅಸ್ಥಿರತೆಗೆ ಒಳಗಾದರು. ಆತನಿಗೆ ಆರು ವರ್ಷದ ಮಗನೂ, ಎಂಟು ವರ್ಷದ ಮಗಳೂ ಇದ್ದರು. ಕುಟುಂಬದ ಏಕೈಕ ಆದಾಯಸ್ತೋತ್ರರಾಗಿದ್ದ ಇವರು ಕಾಣೆಯಾದ ಬಳಿಕ ಕುಟುಂಬವು ಸಂಕಷ್ಟದಲ್ಲಿ ಇತ್ತು.
2025ರ ಏಪ್ರಿಲ್ 27 ರಂದು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ರಕ್ಷಣ ತಂಡವು ಮಂಜೇಶ್ವರ ಜಂಕ್ಷನ್ನಿಂದ ಆಟೋ ಚಾಲಕರಾದ ಶ್ರೀ ಜೆಕಾರಿಯಾರವರ ಮಾಹಿತಿಯ ಮೇರೆಗೆ ರಾಮದೀಪ್ ಅವರನ್ನು ರಕ್ಷಿಸಿದರು. ಅವರು ಮಾನಸಿಕ ಸ್ಥಿತಿಯಲ್ಲಿ ಹೋರಾಡುತ್ತಿದ್ದರೂ, ನಿರಂತರ ವೈದ್ಯಕೀಯ, ಮಾನಸಿಕ ಮತ್ತು ಭಾವನಾತ್ಮಕ ಬೆಂಬಲದಿಂದ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಾರಂಭಿಸಿದರು.
ನಿರಂತರ ಕೌನ್ಸೆಲಿಂಗ್ ಮತ್ತು ಕರುಣೆಯ ಆರೈಕೆಯಿಂದ ಶ್ರೀ ರಾಮದೀಪ್ ಅವರಿಗೆ ತಮ್ಮ ಮನೆ ಮತ್ತು ಕುಟುಂಬದ ಕುರಿತು ಪ್ರಮುಖ ಮಾಹಿತಿಗಳು ನೆನಪಿಗೆ ಬರುವಂತಾಯಿತು. ಸ್ನೇಹಾಲಯ ತಂಡವು ರಾಜಸ್ಥಾನದಲ್ಲಿ ಅವರ ಕುಟುಂಬವನ್ನು ಹುಡುಕಲು ಶ್ರಮಪಟ್ಟು ಕೆಲಸ ಮಾಡಿತು. 2 ತಿಂಗಳ ಪುನರ್ವಸತಿ ಮತ್ತು ಸಮನ್ವಯದ ನಂತರ, 2025ರ ಜುಲೈ 6 ರಂದು ಸ್ನೇಹಾಲಯ ಮತ್ತು ಶ್ರದ್ದಾ ಫೌಂಡೇಶನ್ ಸಹಕಾರದೊಂದಿಗೆ ಭಾವನಾತ್ಮಕ ಪುನರ್ಮಿಲನ ನಡೆಯಿತು. ಶ್ರೀ ರಾಮದೀಪ್ ರವರ ಮಾವ ಮತ್ತು ಸಹೋದರರು ಅವರನ್ನು ಪ್ರೀತಿಯಿಂದ ಸ್ವಾಗತಿಸಿ, ಅಪಾರ ಸಂತೋಷ ಮತ್ತು ಕೃತಜ್ಞತೆ ವ್ಯಕ್ತಪಡಿಸಿದರು.
ಈ ಪುನರ್ಮಿಲನವು ಮಂಜೇಶ್ವರದ ಸ್ನೇಹಾಲಯ ಹಾಗೂ ಮುಂಬೈನ ಶ್ರದ್ದಾ ಫೌಂಡೇಶನ್ ಸಂಸ್ಥೆಗಳ ಬದ್ಧತೆಗೆ ದೃಢ ಸಾಕ್ಷಿಯಾಗಿದೆ. ಅವರ ಪರಿಶ್ರಮವು ಶ್ರೀ ರಾಮದೀಪ್ ಅವರ ಜೀವನಕ್ಕೆ ಮಾನವೀಯತೆ, ಆಶೆ ಮತ್ತು ಸೇರಿಕೆಯ ಭಾವನೆಗಳನ್ನು ಮರಳಿ ತಂದಿತು. ಕುಟುಂಬ ಮತ್ತು ಆರೈಕೆ ಎಂಬುದರ ಶಾಶ್ವತ ಶಕ್ತಿಯನ್ನು ಈ ಘಟನೆ ನಮಗೆ ನೆನಪಿಸುತ್ತದೆ.
