After nine months of silence and despair, 38-year-old Guriya Devi (formerly Hemlata Devi) has been joyfully reunited with her mother, daughters, and brother in Bokaro, Jharkhand.
Once a bright student and President of her village’s Women’s Committee, Guriya’s life took a tragic turn following her father’s death. Forced into an early marriage, she endured years of abuse for not bearing a male child. Despite being educated up to Class 12, she faced repeated trauma, including the loss of two infant daughters and the untimely death of her husband, which triggered a severe mental health crisis.
With limited means, her mother sought treatment in Ranchi, but it was short-lived. Guriya went missing, plunging the family into months of anxiety.
Hope was restored when Snehalaya Charitable Trust, Kasaragod, Kerala, rescued her on April 10, 2025. After two months of psychiatric care and counseling, she was transferred to Shraddha Foundation, where her final journey home was facilitated.
On June 16, 2025, Guriya was welcomed back with open arms a moment of healing and reunion.

ಒಂಬತ್ತು ತಿಂಗಳ ದುಃಖದಾಯಕ ಬೇರ್ಪಡಿಕೆಯ ನಂತರ ಮತ್ತೆ ಮನೆಗೆ ಮರಳಿದ ಗುರಿಯಾ ದೇವಿ.
ಒಂಬತ್ತು ತಿಂಗಳ ದುಃಖಭರಿತ ಅಗಲಿಕೆ ಮತ್ತು ನಿರಾಶಾದಾಯಕ ಜೀವನದ ನಂತರ, 38 ವರ್ಷದ ಗುರಿಯಾ ದೇವಿ (ಹಿಂದೆ ಹೇಮಲತಾ ದೇವಿ) ಜಾರ್ಖಂಡ್‌ನ ಬೊಕಾರೊದಲ್ಲಿ ತನ್ನ ತಾಯಿ, ಮಕ್ಕಳು ಮತ್ತು ಸಹೋದರನೊಂದಿಗೆ ಸಂತೋಷದಿಂದ ಮತ್ತೆ ಒಂದಾಗಿದ್ದಾರೆ.
ಒಂದು ಸಮಯದಲ್ಲಿ ಉತ್ತಮ ವಿದ್ಯಾರ್ಥಿನಿಯಾಗಿದ್ದ ಮತ್ತು ತನ್ನ ಗ್ರಾಮದ ಮಹಿಳಾ ಸಮಿತಿಯ ಅಧ್ಯಕ್ಷೆಯಾಗಿದ್ದ ಗುರಿಯಾ ಅವರ ಜೀವನ ತಂದೆಯ ಮರಣದ ನಂತರ ದುರಂತದತ್ತ ತಿರುಗಿತು. ಬಾಲ್ಯದಲ್ಲೇ ವಿವಾಹಕ್ಕೆ ಒಳಗಾದ ಅವರು, ಗಂಡು ಮಗುವಿಗೆ ಜನ್ಮ ನೀಡದ ಕಾರಣಕ್ಕೆ ವರ್ಷಗಟ್ಟಲೆ ಕಿರುಕುಳವನ್ನು ಸಹಿಸಿದರು. 12ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದರೂ, ಎರಡು ಶಿಶು ಮಕ್ಕಳ ಸಾವು ಮತ್ತು ಪತಿಯ ಅಕಾಲಿಕ ಮರಣದಿಂದ ಉಂಟಾದ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲಿದರು. ಸೀಮಿತ ಸಂಪನ್ಮೂಲಗಳೊಂದಿಗೆ, ಅವರ ತಾಯಿ ರಾಂಚಿಯಲ್ಲಿ ಚಿಕಿತ್ಸೆ ಕೊಡಿಸಿದರೂ ಅದು ಕಡಿಮೆ ಕಾಲದವರೆಗೆ ಮಾತ್ರವೇ ಇತ್ತು. ಗುರಿಯಾ ಕಾಣೆಯಾದರು, ಇದರಿಂದ ಕುಟುಂಬವು ತಿಂಗಳುಗಟ್ಟಲೆ ಆತಂಕದಲ್ಲಿತ್ತು.
ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಏಪ್ರಿಲ್ 10, 2025 ರಂದು ಅವರನ್ನು ರಕ್ಷಿಸಿತು. ಎರಡು ತಿಂಗಳ ಮಾನಸಿಕ ಚಿಕಿತ್ಸೆ ಮತ್ತು ಸಮಾಲೋಚನೆಯ ನಂತರ, ಅವರನ್ನು ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲಾಯಿತು, ಅಲ್ಲಿ ಅವರ ಮನೆಗೆ ಮರಳುವ ಅಂತಿಮ ಪಯಣವನ್ನು ಸುಗಮಗೊಳಿಸಲಾಯಿತು. ಜೂನ್ 16, 2025 ರಂದು, ಗುರಿಯಾ ಅವರನ್ನು ತೆರೆದ ಬಾಹುಗಳಿಂದ ಸ್ವಾಗತಿಸಲಾಯಿತು. ಇದು ಅವರು ಗುಣಮುಖರಾಗಿ ಪುನ ತನ್ನ ಕುಟುಂಬದೊಂದಿಗೆ ಒಂದಾಗುವ ಸಂತೋಷಭರಿತ ಕ್ಷಣವಾಗಿತ್ತು.
