Manjeshwar, June 10, 2025: The Snehalaya team, led by Br. Joseph Crasta, rescued a 40-year-old man named Mr. Ankush near Milagres Church, Mangalore, following a tip-off from Mr. Naveen, an auto driver. Mr. Ankush, who speaks Marathi, was found wandering in a disoriented state. He exhibited symptoms such as irrational speech, muttering, inappropriate smiling, thought blocking, and disorientation. He was also using tobacco and wearing shabby clothes. He claims to be from Maharashtra.
He is currently receiving care at Snehalaya Psycho-Social Rehabilitation Home for Men.
Anyone with information about his identity or family is kindly requested to contact Snehalaya at 9446547033 or 7994087033. Your help could reunite him with his loved ones.

ಶ್ರೀ ಅಂಕುಶ್ ಅವರನ್ನು ಅವರ ಕುಟುಂಬದೊಂದಿಗೆ ಮರುಸೇರಿಸಲು ಸಹಾಯ ಕೋರಿ ನಮ್ರ ನಿವೇದನೆ.
ಮಂಜೇಶ್ವರ, ಜೂನ್ 10, 2025: ಬ್ರದರ್ ಜೋಸೆಫ್ ಕ್ರಾಸ್ತ ನೇತೃತ್ವದ ಸ್ನೇಹಾಲಯ ರಕ್ಷಣಾ ತಂಡವು, ಆಟೋ ಚಾಲಕ ಶ್ರೀ ನವೀನ್ ಅವರಿಂದ ಸಿಕ್ಕ ಮಾಹಿತಿಯ ಮೇರೆಗೆ, ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಬಳಿ 40 ವರ್ಷದ ಶ್ರೀ ಅಂಕುಶ್ ಎಂಬ ವ್ಯಕ್ತಿಯನ್ನು ರಕ್ಷಿಸಿತು. ಮರಾಠಿ ಮಾತನಾಡುವ ಶ್ರೀ ಅಂಕುಶ್ ಅವರು ಗೊಂದಲದ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಕಂಡುಬಂದಿತು.
ಪತ್ತೆಯಾದ ಸಮಯದಲ್ಲಿ ಅವರು ಅಸಂಗತ ಮಾತು, ಗೊಣಗಾಟ, ಅನುಚಿತವಾಗಿ ನಗುವುದು, ಸ್ವಚಿಂತನೆಯ ಅಡಚಣೆ ಮತ್ತು ದಿಕ್ಕು-ದಿಶೆ ಅರಿಯಲು ಅಸಾಧ್ಯವಾದ ಲಕ್ಷಣಗಳನ್ನು ತೋರಿಸುತ್ತಿದ್ದರು ಹಾಗೂ ಅವರು ತಂಬಾಕು ಸೇವನೆ ಮತ್ತು ಕೊಳಕಾದ ಬಟ್ಟೆ, ವಯಕ್ತಿಕ ನೈರ್ಮಲ್ಯದ ಕೊರತೆಯಲ್ಲಿ ಕಂಡುಬಂದರು. ತನ್ನನ್ನು ಮಹಾರಾಷ್ಟ್ರದವರು ಎಂದು ಅವರು ಹೇಳಿಕೊಳ್ಳುತ್ತಾರೆ.
ಪ್ರಸ್ತುತ ಅವರು ಸ್ನೇಹಾಲಯ ಪುರುಷರ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಅವರ ಗುರುತು ಅಥವಾ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಇದ್ದವರು ದಯವಿಟ್ಟು ಸ್ನೇಹಾಲಯವನ್ನು 9446547033 ಅಥವಾ 7994087033 ಸಂಖ್ಯೆಯಲ್ಲಿ ಸಂಪರ್ಕಿಸಿ. ನಿಮ್ಮ ಸಹಾಯವು ಅವರನ್ನು ಅವರ ಪ್ರೀತಿಪಾತ್ರರೊಂದಿಗೆ ಮರುಸೇರಿಸಲು ಸಹಾಯವಾಗಬಹುದು.
