On April 30, 2025, a concerned citizen, Mr. Kabeer, informed the Kumble Police about a man found wandering the streets of Mogral in Kasaragod. The man, identified as approximately 40 years old, was later rescued and admitted to Snehalaya Psycho-Social Rehabilitation Home for Men, where he is currently receiving care and support.
The individual has been identified as Mr. Shahajan. At the time of rescue, he was in poor personal hygiene and exhibited signs of psychiatric distress, including self-smiling, self-talking, irrelevant speech, delusional thoughts, and disorientation. He communicates in Malayalam, and initial assessments suggest he is suffering from a psychiatric condition.
Authorities are urgently seeking any information regarding Mr. Shahajan’s identity, family, or background. If you have any details that could assist in reuniting him with his loved ones, please contact 9446547033 or 7994087033.
Your support in helping Mr. Shahajan return to his family is deeply appreciated. Let’s work together to bring him home.
ಶ್ರೀ ಶಹಜಾನ್ ಅವರನ್ನು ತಮ್ಮ ಕುಟುಂಬದೊಂದಿಗೆ ಮತ್ತೆ ಸೇರ್ಪಡಿಸಲು ಸಹಾಯ ಕೋರಿ ನಮ್ರ ಮನವಿ
2025 ರ ಏಪ್ರಿಲ್ 30 ರಂದು, ಕಾಸರಗೋಡಿನ ಮೊಗ್ರಾಲ್ ಬೀದಿಗಳಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ಸಾಮಾಜಿಕ ಕಾಳಜಿಯುಳ್ಳ ಓರ್ವ ನಾಗರಿಕ ಶ್ರೀ ಕಬೀರ್ ಅವರು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದರು. ಆ ವ್ಯಕ್ತಿ, ಸುಮಾರು 40 ವರ್ಷ ವಯಸ್ಸಿನವರೆಂದು ಗುರುತಿಸಲ್ಪಟ್ಟು, ನಂತರ ಸ್ನೇಹಾಲಯ ರಕ್ಷಣಾ ತಂಡದವರಿಂದ ರಕ್ಷಿಸಲ್ಪಟ್ಟು, ಇವರನ್ನು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಪುರುಷರ ವಿಭಾಗದಲ್ಲಿ ದಾಖಲಿಸಲಾಗಿದೆ. ಪ್ರಸ್ತುತಃ ಪ್ರಸ್ತುತ ಅಲ್ಲಿ ಅವರು ಸಂಪೂರ್ಣ ಆರೈಕೆ ಮತ್ತು ಬೆಂಬಲವನ್ನು ಪಡೆಯುತ್ತಿದ್ದಾರೆ.
ಈ ವ್ಯಕ್ತಿಯನ್ನು ಶ್ರೀ ಶಹಜಾನ್ ಎಂದು ಗುರುತಿಸಲಾಗಿದೆ. ರಕ್ಷಣೆಯಾದ ಸಮಯದಲ್ಲಿ, ಅವರು ವೈಯಕ್ತಿಕ ಸ್ವಚ್ಛತೆಯ ಕೊರತೆಯ ಸ್ಥಿತಿಯಲ್ಲಿದ್ದರು ಮತ್ತು ಸ್ವಯಂ-ನಗು, ಸ್ವಯಂ-ಮಾತು, ಅಸಂಬದ್ಧ ಭಾಷಣ, ಭ್ರಮಾತ್ಮಕ ಆಲೋಚನೆಗಳು ಮತ್ತು ದಿಕ್ಕುತೋಚದಿರುವಂತಹ ಮಾನಸಿಕ ಒತ್ತಡದ ಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದರು, ಶ್ರೀ ಶಹಜಾನ್ ಅವರು ಮಲಯಾಳಂ ಭಾಷೆ ಮಾತನಾಡುತ್ತಿದ್ದಾರೆ. ಆರಂಭಿಕ ಮೌಲ್ಯಮಾಪನದಲ್ಲಿ ಶ್ರೀ ಶಹಜಾನ್ ಅವರು ಮಾನಸಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಕಂಡುಬರುತ್ತದೆ.
ಶ್ರೀ ಶಹಜಾನ್ ಅವರ ಗುರುತು, ಕುಟುಂಬದ ಸುಳಿವು ಅಥವಾ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಕಂಡುಹಿಡಿಯಲು ಸ್ನೇಹಾಲಯ ಸಿಬ್ಬಂದಿಗಳು ತುರ್ತಾಗಿ ಪ್ರಯತ್ನಿಸುತ್ತಿದ್ದಾರೆ, ಇದರಿಂದ ಅವರನ್ನು ಅವರ ಪ್ರೀತಿಪಾತ್ರರೊಂದಿಗೆ ಮತ್ತೆ ಒಂದುಗೂಡಿಸಬಹುದು. ಈ ಪ್ರಯತ್ನದಲ್ಲಿ ಸಹಾಯ ಮಾಡಬಹುದಾದ ಯಾವುದೇ ವಿವರಗಳನ್ನು ನೀವು ಹೊಂದಿದ್ದರೆ, ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ.
ಶ್ರೀ ಶಹಜಾನ್ ಅವರನ್ನು ತಮ್ಮ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ನಿಮ್ಮ ಸಹಕಾರವು ಅತೀ ಅಗತ್ಯವಾಗಿದೆ. ಶ್ರೀ ಶಹಜಾನ್ ನಂತಹ ಕುಟುಂಬದಿಂದ ಬೇರ್ಪಟ್ಟ ನಿರ್ಗತಿಕರನ್ನು ಪುನಃ ತಮ್ಮ ಕುಟುಂಬದ ಜೊತೆ ಒಂದುಗೂಡಿಸುವಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ.