Manjeshwar : In an extraordinary tale of endurance and hope, Saraswati Devi has finally been reunited with her family Umaria in Madya Pradesh after 19 long years of separation.
Saraswati, who once worked as a daily laborer on the farms in her village, vanished without a trace nearly two decades ago. Her family was left devastated. During her absence, her husband remarried, believing her to be lost forever. Yet, life took an unexpected turn when Saraswati’s whereabouts were discovered earlier this year.
Thanks to the unwavering efforts of Sneha Bhavan in Kozhikode, she was transferred to Snehalaya Charitable Trust, where the search for her family began. After receiving crucial information, she was sent to Shraddha Foundation on February 24, 2025, and finally, on March 26, 2025, Saraswati was reunited with her family.
Though her husband initially hesitated, counseling from the local police and village elders helped him overcome his reservations. With their support, he accepted Saraswati back into the family. Her return was met with joy by villagers and neighbors, who welcomed her with open arms.
Saraswati’s story is one of resilience, a testament to the power of hope, and a shining example of how organizations like Snehalaya Charitable Trust and Shraddha Foundation work tirelessly to reunite families and bring comfort to those lost and forgotten.
The reunion, filled with emotion and gratitude, marks the beginning of a new chapter for Saraswati and her family.
19 ವರ್ಷಗಳ ಧೀರ್ಘ ಪ್ರತ್ಯೇಕತೆಯ ನಂತರ, ಮನೆಗೆ ಮರಳಿದ ಸರಸ್ವತಿ ದೇವಿಃ
ಮಂಜೇಶ್ವರ: ಸಹನಶೀಲತೆ ಮತ್ತು ಭರವಸೆಯ ಪ್ರಯಾಣದಲ್ಲಿ, 19 ದೀರ್ಘ ವರ್ಷಗಳ ಬೇರ್ಪಡಿಕೆಯ ನಂತರ, ಸರಸ್ವತಿ ದೇವಿ ಅಂತಿಮವಾಗಿ ಮಧ್ಯಪ್ರದೇಶದಲ್ಲಿರುವ ಉಮರಿಯಾದ ತಮ್ಮ ಕುಟುಂಬದ ಜೊತೆ ಪುನರ್ಮಿಲನ ಹೊಂದಿದರು.
ತಮ್ಮ ಹಳ್ಳಿಯ ಕೃಷಿಕ್ಷೇತ್ರದಲ್ಲಿ ದಿನಗೂಲಿ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದ ಸರಸ್ವತಿ, ಸುಮಾರು ಎರಡು ದಶಕಗಳ ಹಿಂದೆ ಆಕಸ್ಮಿಕವಾಗಿ ಕಾಣೆಯಾಗಿದ್ದರು. ಈ ದುಃಖಕರ ಘಟನೆಯಿಂದ ಅವರ ಕುಟುಂಬ ತೀವ್ರ ಸಂಕಟಕ್ಕೀಡಾಯಿತು. ಅವರ ಪತಿ, ಸರಸ್ವತಿಯನ್ನು ಸದಾ ಕಾಲಕ್ಕಾಗಿ ಕಳಕೊಂಡೆನೆಂದು ನಂಬಿ, ಮತ್ತೊಂದು ಮದುವೆ ಮಾಡಿಕೊಂಡರು. ಆದರೆ, ವರ್ಷ 2025ರ ಪ್ರಾರಂಭದಲ್ಲಿ ಸರಸ್ವತಿಯ ತಾಣ ಪತ್ತೆಯಾಗಿದಾಗ, ಅವರ ಜೀವನದಲ್ಲಿ ಅಪ್ರತೀಕ್ಷಿತ ತಿರುವು ಉಂಟಾಯಿತು.
ಕೋಝಿಕೋಡು ಸ್ನೇಹ ಭವನದ ದಿಟ್ಟ ಪ್ರಯತ್ನಗಳ ಫಲವಾಗಿ, ಅವರನ್ನು ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ಗೆ ವರ್ಗಾಯಿಸಲಾಯಿತು, ಸ್ನೇಹಾಲಯದ ನುರಿತ ತಂಡ ಅವರ ಕುಟುಂಬವನ್ನು ಹುಡುಕುವ ಕಾರ್ಯವನ್ನು ಪ್ರಾರಂಭ ಮಾಡಿತು. ಅಗತ್ಯ ಮಾಹಿತಿ ದೊರೆತ ನಂತರ, 24 ಫೆಬ್ರವರಿ 2025 ರಂದು ಅವರನ್ನು ಶ್ರದ್ಧಾ ಫೌಂಡೇಶನ್ಗೆ ಕಳುಹಿಸಲಾಯಿತು, ಅಲ್ಲಿಂದ 26 ಮಾರ್ಚ್ 2025 ರಂದು ಸರಸ್ವತಿ ಅವರ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾದರು.
ಮೊದಲಿಗೆ ಅವರ ಪತಿ ಅವರನ್ನು ಮರಳಿ ಸ್ವೀಕರಿಸಲು ಹಿಂಜರಿದರು, ಆದರೆ ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಹಳ್ಳಿಯ ಹಿರಿಯರ ಸಮಾಲೋಚನೆಯ ಪರಿಣಾಮವಾಗಿ ಅವರು ತಮ್ಮ ಸಂದೇಹಗಳನ್ನು ಜಯಿಸಿ, ಸರಸ್ವತಿಯನ್ನು ಪುನಃ ಕುಟುಂಬದಲ್ಲಿ ಇಟ್ಟುಕೊಳ್ಳಲು ಒಪ್ಪಿಕೊಂಡರು. ಗ್ರಾಮಸ್ಥರು ಹಾಗೂ ನೆರೆಹೊರೆಯವರು ಹರ್ಷಭರಿತವಾಗಿ ಅವರನ್ನು ಬರಮಾಡಿಕೊಂಡರು.
ಸರಸ್ವತಿಯ ಈ ಕಥೆ ಸಹನಶೀಲತೆ, ನಿರೀಕ್ಷೆಯ ಶಕ್ತಿಯ ಒಂದು ಉದಾಹರಣೆಯಾದರೆ, ಕಳೆದು ಹೋದವರನ್ನು ಕುಟುಂಬಗಳಿಗೆ ಪುನರ್ಮಿಲನ ಮಾಡಿಸುವ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರದ್ಧಾ ಫೌಂಡೇಶನ್ ನಂತಹ ಸಂಸ್ಥೆಗಳ ಅಪ್ರತಿಮ ಸೇವೆಗಳ ಮಾದರಿಯಾಗಿದೆ. ಭಾವನಾತ್ಮಕತೆಯಿಂದ ತುಂಬಿದ ಈ ಪುನರ್ಮಿಲನದಿಂದಾಗಿ ಸರಸ್ವತಿ ಹಾಗೂ ಅವರ ಕುಟುಂಬ ಒಂದು ಹೊಸ ಜೀವನ ಅಧ್ಯಾಯವನ್ನು ಪ್ರಾರಂಭಿಸಿದೆ.