Manjeshwar: In a deeply emotional moment, Pralhad Patel, also known as Jaisingh Kushwah, has finally been reunited with his family after 2 years and 10 months of being missing. The family, who had been searching tirelessly since the day he disappeared, was overwhelmed with joy and relief when they saw him again.
Pralhad, who had been battling mental illness for the past five years, had undergone treatment at Gwalior and Sagar mental hospitals. Despite receiving care, he had wandered away from home, leading to years of heartache for his loved ones. His family never gave up hope, filing a missing person’s report and continuing their search.
On January 9, 2025, a turning point came when Pralhad was found and taken into the care of Snehalaya Charitable Trust in Kasaragod, Kerala. After undergoing recovery and rehabilitation, he was transferred to Shraddha Foundation, an organization that specializes in reuniting lost individuals with their families. Finally, on March 24, 2025, Pralhad was brought back to his home in Madhya Pradesh, where his parents, brother, wife, and children embraced him after almost three years of separation. Villagers and neighbors also gathered to welcome him, adding to the warmth of the emotional reunion.
This heartwarming story is a testament to the unwavering hope of a family, the kindness of strangers, and the invaluable work of organizations like Snehalaya Charitable Trust and Shraddha Foundation. Their dedication helped bring Pralhad back home, proving that love and perseverance can overcome even the longest separations.
ಮೂರು ವರ್ಷಗಳ ದೀರ್ಘ ಬೇರ್ಪಡಿಕೆಯ ನಂತರ ಹೆತ್ತವರ ಅಕ್ಕರೆಯ ಮಡಿಲನ್ನು ಸೇರಿದ ಪ್ರಹ್ಲಾದ್:
ಸ್ನೇಹಾಲಯದ ಮಧ್ಯಸ್ಥಿಕೆಯಿಂದ ಅದ್ಭುತ ಪುನರ್‌ಸಂಗಮ.
ಎರಡು ವರ್ಷ ಹತ್ತು ತಿಂಗಳ ಹೃದಯವಿದ್ರಾವಕ, ನೋವಿನ ಅಗಲಿಕೆಯ ನಂತರ, ದೈವಾನುಗ್ರಹದ ಒಂದು ಭಾವನಾತ್ಮಕ ಕ್ಷಣದಲ್ಲಿ ಪ್ರಹ್ಲಾದ್ ಪಟೇಲ್ (ಜೈಸಿಂಗ್ ಕುಶ್ವಾಹ ಎಂಬ ಹೆಸರಿನಿಂದಲೂ ಪರಿಚಿತ) ತಮ್ಮ ಕುಟುಂಬದೊಂದಿಗೆ ಪುನರ್‌ಸಂಗಮಗೊಂಡರು. ಪ್ರಹ್ಲಾದ್‌ಗಾಗಿ ನಿರಂತರವಾಗಿ ಅವಿರತ ಹುಡುಕಾಟ ನಡೆಸಿದ ಕುಟುಂಬದವರು, ಆತ ಸುಕ್ಷೇಮವಾಗಿ ಮನೆಗೆ ಮರಳಿದಾಗ ಅಕಸ್ಮಾತ್ ಉಕ್ಕಿದ ಆನಂದವನ್ನು ಬಣ್ಣಿಸಲು ಮಾತುಗಳು ಸಾಕಾಗಲಿಲ್ಲ. ತಾಯಿಯ ಒಡಲನ್ನು ಮರೆತೇ ಹೋದ ಮಗನನ್ನು ಮತ್ತೆ ಜೀವಂತವಾಗಿ ಕಂಡಗಾ ಆಕೆ ತನ್ನ ಕಣ್ಣುಗಳನ್ನೇ ನಂಬಲಾಗದೆ ಬಹುತೇಕ ಕುಸಿದು ಬೀಳುವ ಸ್ಥಿತಿಯಲ್ಲಿದ್ದಳು; ತನ್ನ ಅಳಲುತೋಳಿನಲ್ಲಿ ಮಗನನ್ನು ಬಿಗಿಯಾಗಿ ಹಿಡಿದುಕೊಂಡು, ಮಮತೆಯ ಪರಾಕಾಷ್ಠೆಯನ್ನು ಅನುಭವಿಸಿದರು.
ಪ್ರಹ್ಲಾದ್ ಕಳೆದ ಐದು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರು ಗ್ವಾಲಿಯರ್ ಮತ್ತು ಸಾಗರದ ಮಾನಸಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಅಸ್ವಸ್ಥ ಮನಸ್ಸಿನ ನಿಯಂತ್ರಣ ಮತ್ತು ತಾಳ್ಮೆ ತಪ್ಪಿದ ಕ್ಷಣದಲ್ಲಿ ತಮ್ಮ ಮನೆ ಮತ್ತು ಕುಟುಂಬದಿಂದ ದೂರ ತೆರಳಿದ್ದರು. ಈ ಘಟನೆ ಪ್ರಹ್ಲಾದನ ಕುಟುಂಬಕ್ಕೆ ವರ್ಷಗಳಷ್ಟು ಕಠಿಣ ಆತಂಕ, ನಿರಾಶೆ, ಬೇಸರ ಉಂಟುಮಾಡಿತ್ತು—ಈ ಭಾವನೆಗಳ ಮಧ್ಯೆಯೂ ಅವರು ಭಗವಂತನ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಹೀಗಾಗಿ, ಅವರು ನಾಪತ್ತೆಯಾದವರ ಬಗ್ಗೆ ದೂರು ದಾಖಲಿಸಿ, ನಿರಂತರ ಹುಡುಕಾಟ ಮುಂದುವರಿಸಿದರು.
ಅದರ ಫಲವಾಗಿ, 2025ರ ಜನವರಿ 9ರಂದು ಪ್ರಹ್ಲಾದ್ ಕೇರಳದ ಕಾಸರಗೋಡಿನಲ್ಲಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಆರೈಕೆಗೆ ಸೇರಿಸಲ್ಪಟ್ಟರು. ಅಲ್ಲಿಂದ ಪುನಶ್ಚೇತನ ಮತ್ತು ಪುನರ್ವಸತಿ ಪೂರೈಸಿದ ನಂತರ, ಅವರು ನಾಪತ್ತೆಯಾಗಿರುವವರನ್ನು ಕುಟುಂಬದೊಂದಿಗೆ ಪುನರ್‌ಸಂಗಮಗೊಳಿಸುವಲ್ಲಿ ಪರಿಣತಿ ಹೊಂದಿರುವ ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲ್ಪಟ್ಟರು. ಕೊನೆಗೂ, 2025ರ ಮಾರ್ಚ್ 24ರಂದು ಪ್ರಹ್ಲಾದ್ ಅವರನ್ನು ಮಧ್ಯಪ್ರದೇಶದಲ್ಲಿರುವ ತಮ್ಮ ಮನೆಯೆಡೆಗೆ ಕರೆದೊಯ್ಯಲಾಯಿತು. ಮೂರು ವರ್ಷಗಳ ದೀರ್ಘ ಅಗಲಿಕೆಯ ಬಳಿಕ ತಂದೆ, ತಾಯಿ, ಸಹೋದರ, ಪತ್ನಿ ಮತ್ತು ಮಕ್ಕಳೊಂದಿಗೆ ಅವರ ಅತ್ಯದ್ಭುತ ಮಿಲನವು ಊರಿನ ಸಮಸ್ತ ಜನತೆಗೆ ಸಹ ಒಂದು ಭಾವುಕ ಕ್ಷಣವಾಯಿತು. ಗ್ರಾಮಸ್ಥರು, ಸ್ನೇಹಿತರು, ನೆರೆಹೊರೆಯವರು ಎಲ್ಲರೂ ಪ್ರಹ್ಲಾದನನ್ನು ಹೃದಯಪೂರ್ವಕವಾಗಿ ಬರಮಾಡಿಕೊಂಡರು.
ಪ್ರಹ್ಲಾದನ ಜೀವನದಲ್ಲಿ ಈ ದೈವಿಕ ಸಂಯೋಗದ ಕಥೆ ಕೇವಲ ಒಂದು ಪುನರ್‌ಸಂಗಮದ ಘಟನೆ ಮಾತ್ರವಲ್ಲ; ಇದು ಕುಟುಂಬದ ಭರವಸೆಯ ನಿರೀಕ್ಷೆ ಮತ್ತು ಛಲ ಬಿಡದೆ, ಸಿಗುವ ತನಕ ಹುಡುಕುವ ಪ್ರಯತ್ನಕ್ಕೆ ಸಾಕ್ಷ್ಯವಾಗಿದೆ. ಸಹಾನುಭೂತಿ, ಮತ್ತು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರದ್ಧಾ ಫೌಂಡೇಶನ್‌ನಂತಹ ಸಂಸ್ಥೆಗಳ ತ್ಯಾಗ, ಸೇವಾ ಮನೋಭಾವವನ್ನು ಕೂಡಾ ಇಲ್ಲಿ ಸ್ಮರಿಸಲಾಗುತ್ತದೆ. ಇಂತಹ ಪರೋಪಕಾರಿ, ಮಾನವೀಯ ಸಂಸ್ಥೆಗಳ ಬದ್ಧತೆ, ಕಾಳಜಿ, ಸೇವಾ ಮನೋಭಾವದ ಫಲವಾಗಿ ಪ್ರಹ್ಲಾದ್ ಮನೆಯ ಮಡಿಲಿಗೆ ಮರಳಿದರು. ಈ ಘಟನೆಯು, ಪ್ರೀತಿ, ಭರವಸೆ ಮತ್ತು ದೇವರ ಕೃಪೆ ಎಂಬುವು ಅತಿದೊಡ್ಡ ಸಂಕಟಗಳನ್ನೂ ಸೋಲಿಸಬಲ್ಲವು ಎಂಬ ಸತ್ಯವನ್ನು ಪುನರುಚ್ಛರಿಸುತ್ತದೆ.