Manjeshwar: On March 22, 2025, the Snehalaya team, led by Mrs. Olivia Crasta, Secretary cum Trustee of Snehalaya Charitale Trust (R), successfully rescued a 35-year-old woman, Pooja, and her 1-year-old child from Mangalore Junction Railway Station. Pooja was found in a vulnerable state, has been admitted to Snehalaya Women’s block, where she is receiving vital care and support.
Upon rescue, Pooja was found in a state of poor personal hygiene and communicated primarily in Hindi. Initial assessments indicate that she might be suffering from psychiatric issues. The Snehalaya team is providing her with necessary medical attention and emotional support.
We urgently appeal to the public for any information regarding Pooja’s identity, family, or background. Your assistance could be crucial in reuniting Pooja with her loved ones and helping her move toward healing.
If you have any information, please contact us at 9446547033 or 7994087033. Any details, no matter how small, could make a significant difference in Pooja’s life. Let’s come together to give her the chance she deserves for a better future.
ಸ್ನೇಹಾಲಯ ರಕ್ಷಣಾ ತಂಡದವರಿದಿಂದ ರಕ್ಷಿಸಲ್ಪಟ್ಟ ತಾಯಿ ಮತ್ತು ಮಗು:
ಪುನರ್ಮಿಲನಕ್ಕಾಗಿ ಸಾರ್ವಜನಿಕ ಸಹಾಯಕ್ಕೆ ಮನವಿ
ಮಂಜೇಶ್ವರ: 2025ರ ಮಾರ್ಚ್ 22ರಂದು, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ (ರಿ) ನ ಕಾರ್ಯದರ್ಶಿ ಹಾಗೂ ಟ್ರಸ್ಟಿ ಶ್ರೀಮತಿ ಒಲಿವಿಯಾ ಕ್ರಾಸ್ಟಾ ಅವರ ನೇತೃತ್ವದಲ್ಲಿ ಸ್ನೇಹಾಲಯ ರಕ್ಷಣಾ ತಂಡವು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ 35 ವರ್ಷದ ಪೂಜಾ ಮತ್ತು ಅವಳ 1 ವರ್ಷದ ಮಗುವನ್ನು ರಕ್ಷಿಸಿದೆ. ನಾಜೂಕಾದ ಸ್ಥಿತಿಯಲ್ಲಿದ್ದ ಪೂಜಾ ಈಗ ಸ್ನೇಹಾಲಯದ ಮಹಿಳಾ ವಿಭಾಗದಲ್ಲಿ ತಂಗಿದ್ದು, ಅಗತ್ಯ ಆರೋಗ್ಯ ಸೇವೆ ಹಾಗೂ ಮನೋಸಾಮಾಜಿಕ ಬೆಂಬಲವನ್ನು ಪಡೆಯುತ್ತಿದ್ದಾರೆ.
ಪತ್ತೆಯಾದ ಸಮಯದಲ್ಲಿ ಪೂಜಾ ಅಸ್ವಚ್ಛ ಪರಿಸ್ಥಿತಿಯಲ್ಲಿ ಇದ್ದರು ಮತ್ತು ಹಿಂದಿಯಲ್ಲೇ ಮುಖ್ಯವಾಗಿ ಮಾತನಾಡುತ್ತಿದ್ದರು. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, ಅವಳಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರಬಹುದು ಎಂದು ಅಂದಾಜಿಸಲಾಗಿದೆ. ಸ್ನೇಹಾಲಯ ತಂಡವು ತಾಯಿ ಮತ್ತು ಮಗುವಿಗೆ ಆವಶ್ಯಕ ವೈದ್ಯಕೀಯ ಚಿಕಿತ್ಸೆ ಹಾಗೂ ಸಂಪೂರ್ಣ ಆರೈಕೆ ನೀಡುವುದರ ಜೊತೆಗೆ ಭಾವನಾತ್ಮಕ ಬೆಂಬಲವನ್ನು ಒದಗಿಸುತ್ತಿದೆ.
ಸ್ನೇಹಾಲಯವು ಸಾರ್ವಜನಿಕರಲ್ಲಿ ಪೂಜಾ ಮತ್ತು ಆಕೆಯ ಮಗುವಿನ ಕುರಿತು ಯಾರಿಗಾದರೂ ಯಾವುದೇ ಮಾಹಿತಿ ಇದ್ದರೆ ಸ್ನೇಹಾಲಯವನ್ನು ಸಂಪರ್ಕಿಸಲು ತುರ್ತು ಮನವಿ ಮಾಡುತ್ತದೆ. ಪೂಜಾಳ ಗುರುತು, ಕುಟುಂಬದ ಹಿನ್ನಲೆ ಅಥವಾ ಇನ್ಯಾವುದೇ ಸುಳಿವು ತಿಳಿದಿದ್ದರೆ, ದಯವಿಟ್ಟು 📞 9446547033 / 7994087033 ಸಂಪರ್ಕಿಸಿ. ನಿಮ್ಮ ಸಹಾಯದಿಂದ ಪೂಜಾ ತನ್ನ ಪ್ರಿಯಜನರೊಂದಿಗೆ ಪುನಃ ಸೇರುವ ಅವಕಾಶ ಪಡೆಯಬಹುದು ಮತ್ತು ಹೊಸ ಬದುಕಿನತ್ತ ಪಯಣ ಬೆಳೆಸಬಹುದು. ನಿಮ್ಮ ಸಣ್ಣ ಸಹಾಯವೂ ಪೂಜಾ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು.