Manjeshwar, March 22, 2025: Eshwar Malpe, widely celebrated as the “Aqua Man” of Udupi and a proud son of Karnataka, paid an unexpected yet momentous visit to Snehalaya Psycho-Social and De-addiction Centre. A self-taught underwater search and recovery specialist, Malpe has spent over two decades undertaking daring and unparalleled rescue missions, saving lives and retrieving nearly 1,000 remains from water bodies. His expertise extends beyond human rescues; whether it be mobile phones, jewellery, or even drones lost in the depths, Malpe’s unparalleled diving skills have earned him widespread acclaim. A testament to his precision and dedication was the retrieval of a high-end mobile phone from a depth of ten feet at Malpe Port—a feat that further cemented his reputation as a master diver.
Malpe’s visit to Snehalaya was purely incidental, as he accompanied the family of a mentally ill individual seeking admission to the center’s renowned psycho-social care and rehabilitation program. However, what began as a routine accompaniment soon turned into a profound experience for the veteran diver. Witnessing first-hand the compassionate and tireless service rendered by Snehalaya in rehabilitating the destitute and mentally ill, Malpe was deeply moved. He wholeheartedly lauded the institution’s mission, emphasizing the dire need for more such centres dedicated to alleviating human suffering.
In a heartfelt gesture, Snehalaya’s founder, Br. Joseph Crasta, along with the entire staff, extended a warm and reverent welcome to the esteemed guest. As a token of appreciation, Malpe was felicitated with a bouquet and a traditional shawl. Addressing the gathering, Malpe articulated his deep concerns about the growing struggles faced by marginalized communities and reiterated the indispensable role of institutions like Snehalaya in fostering hope and healing.
Snehalaya remains profoundly grateful for Eshwar Malpe’s visit, his unwavering support, and his expression of solidarity towards its humanitarian cause. His presence and encouragement serve as an inspiration to continue the noble endeavour of caring for the abandoned and mentally ill, reinforcing the belief that acts of kindness, whether on land or underwater, create ripples of change in the world.
ಕರ್ನಾಟಕದ ‘ಆಕ್ವಾ ಮ್ಯಾನ್’ ಈಶ್ವರ ಮಲ್ಪೆ ಸ್ನೇಹಾಲಯಕ್ಕೆ ಭೇಟಿ – ಮಾನವೀಯ ಸೇವೆಗೆ ಮೆಚ್ಚುಗೆಯ ಹಾರೈಕೆ
ಮಂಜೇಶ್ವರ, ಮಾರ್ಚ್ 22, 2025: ಉಡುಪಿ ಜಿಲ್ಲೆಯ ಹೆಮ್ಮೆ, ಕರ್ನಾಟಕದ ‘ಆಕ್ವಾ ಮ್ಯಾನ್’ ಎಂದು ಪ್ರಸಿದ್ಧಿ ಪಡೆದ ಈಶ್ವರ ಮಲ್ಪೆ, ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಮತ್ತು ವ್ಯಸನಮುಕ್ತ ಕೇಂದ್ರಕ್ಕೆ ಅಪ್ರತೀಕ್ಷಿತ ಆದರೆ ಸ್ಮರಣೀಯ ಭೇಟಿ ನೀಡಿದರು. ಸ್ವಯಂ ಕಲಿತ ಜಲಾಂತರ್ಗತ ಹುಡುಕು ಮತ್ತು ಪತ್ತೆಮಾಡುವ ತಜ್ಞರಾದ ಮಲ್ಪೆ, ಕಳೆದ ಎರಡು ದಶಕಗಳ ಕಾಲ ಅಪರೂಪದ ಮತ್ತು ಸಾಹಸಿಕ ರಕ್ಷಣಾ ಕಾರ್ಯಗಳನ್ನು ನೆರವೇರಿಸಿ, ಸಾವಿರಕ್ಕೂ ಹೆಚ್ಚು ಮೃತದೇಹಗಳನ್ನು ಜಲಸಮಾಧಿಯಿಂದ ಹೊರತೆಗೆದು, ಅನೇಕರಿಗೆ ಹೊಸ ಜೀವ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಾನವ ರಕ್ಷಣೆಯಷ್ಟೇ ಅಲ್ಲ, ನೀರಿನಲ್ಲಿ ಕಳೆದುಹೋದ ಮೊಬೈಲ್ಗಳು, ಆಭರಣಗಳು, ಡ್ರೋನ್ಗಳಂತಹ ಅಮೂಲ್ಯ ವಸ್ತುಗಳೂ ಸಹ ಅವರ ಅಪೂರ್ವ ಈಜು ತಂತ್ರಗಳ ಮೂಲಕ ಮರಳಿ ದೊರೆತಿವೆ. ಮಲ್ಪೆ ಬಂದರಿನಲ್ಲಿ ಹತ್ತು ಅಡಿ ನೀರಿನ ಆಳದಿಂದ ದುಬಾರಿ ಮೊಬೈಲ್ನ್ನು ಪತ್ತೆಹಚ್ಚಿದ ಘಟನೆಯು ಅವರ ನಿಖರತೆ ಮತ್ತು ಕೌಶಲ್ಯಕ್ಕೆ ಮತ್ತಷ್ಟು ಮಾನ್ಯತೆ ತಂದಿದೆ.
ಮಲ್ಪೆಯವರ ಸ್ನೇಹಾಲಯಕ್ಕೆ ಆಗಮಿಸುವುದು ಪೂರ್ವನಿಗದಿತವಾದದ್ದಲ್ಲ; ಮಾನಸಿಕ ಅಸ್ವಸ್ಥರೊಬ್ಬರ ಕುಟುಂಬಕ್ಕೆ ಕೇಂದ್ರದಲ್ಲಿ ದಾಖಲಾಗುವ ಸಂದರ್ಬದಲ್ಲಿ ಸಂಗ ನೀಡುವ ಉದ್ದೇಶದಿಂದ ಅವರು ಇಲ್ಲಿ ಹಾಜರಾಗಿದ್ದರು. ಆದರೆ ಈ ಭೇಟಿ ಅವರ ಜೀವನದ ಒಂದು ಪ್ರಭಾವಶಾಲಿ ಅನುಭವವಾಗಿ ಮಾರ್ಪಟ್ಟಿತು. ಅನಾಥರು ಮತ್ತು ಮಾನಸಿಕ ಅಸ್ವಸ್ಥರನ್ನು ಪುನರ್ವಸತಿ ಮಾಡುವ ಸ್ನೇಹಾಲಯದ ಅಮೋಘ ಸೇವೆಯನ್ನು ಕಣ್ಣಾರೆ ಕಂಡು, ಅವರು ಆಳವಾಗಿ ಸ್ಪಂದಿಸಿದರು. ಇಂತಹ ಮಾನವೀಯ ಸೇವಾ ಕೇಂದ್ರಗಳ ಅಗತ್ಯವನ್ನು ಒತ್ತಿ ಹೇಳಿದ ಮಲ್ಪೆ, ಸ್ನೇಹಾಲಯದ ಧ್ಯೇಯಕ್ಕೆ ಹೃತ್ಪೂರ್ವಕವಾಗಿ ಶ್ಲಾಘನೆ ಸಲ್ಲಿಸಿದರು.
ಸ್ನೇಹಾಲಯದ ಸಂಸ್ಥಾಪಕ ಬ್ರ. ಜೋಸೆಫ್ ಕ್ರಾಸ್ಟಾ ಹಾಗೂ ಸಂಪೂರ್ಣ ಸಿಬ್ಬಂದಿ ಈಶ್ವರ ಮಲ್ಪೆಯವರಿಗೆ ಆದರದ ಸ್ವಾಗತ ನೀಡಿದರು. ಮಾನವೀಯ ಸೇವೆಗೆ ಅವರ ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸುವ ನಿರೀಕ್ಷೆಯಲ್ಲಿ, ಭಾವಪೂರ್ಣ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಹೂಗುಚ್ಛದ ಸುವಾಸನೆ ಮತ್ತು ಪರಂಪರೆಯ ಶಾಲು ಸನ್ಮಾನದ ಸಂಕೇತವಾಗಿದ್ದು, ಸ್ನೇಹಾಲಯದ ಕೃತಜ್ಞತೆಯನ್ನು ಪ್ರತಿಬಿಂಬಿಸುತ್ತಿತ್ತು. ಸಮಾರಂಭದಲ್ಲಿ ಮಾತನಾಡಿದ ಮಲ್ಪೆ, ಸಮಾಜದ ಅಂಚಿನಲ್ಲಿರುವ ನಿರಾಶ್ರಿತರು, ಮನೋನೋಯಿತರ ಜೀವನದಲ್ಲಿ ಬೆಳಕು ತುಂಬುವಂತಹ ಸೇವಾ ಸಂಸ್ಥೆಗಳ ಅವಶ್ಯಕತೆಯನ್ನು ಗಂಭೀರವಾಗಿ ಒತ್ತಿಹೇಳಿದರು. ಈ ದಾರಿಯಲ್ಲಿ ಶ್ರಮಿಸುತ್ತಿರುವ ಸ್ನೇಹಾಲಯದ ಕಾರ್ಯಕ್ಕೆ ಹೃತ್ಪೂರ್ವಕ ಶ್ಲಾಘನೆ ಸಲ್ಲಿಸಿ, ಇಂತಹ ಸಂಸ್ಥೆಗಳ ಪ್ರಭಾವ ಮತ್ತು ಅವುಗಳ ಸಾಮಾಜಿಕ ಹೊಣೆಗಾರಿಕೆಯನ್ನು ಪರಿಕಲ್ಪಿಸಲು ಸಮುದಾಯವು ಇನ್ನಷ್ಟು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಈಶ್ವರ ಮಲ್ಪೆಯ ಈ ಭೇಟಿ, ಅವರ ಬೆಂಬಲ, ಹಾಗೂ ಸ್ನೇಹಾಲಯದ ಕಾರ್ಯದ ಮೇಲಿನ ಅವರ ಪ್ರೋತ್ಸಾಹ, ಸಂಸ್ಥೆಗೆ ಅನನ್ಯ ಕೊಡುಗೆಯಾಗಿದೆ. ಅವರ ಅಮೋಘ ಬೆಂಬಲ, ಹಾಗೂ ಸ್ನೇಹಾಲಯದ ಮಾನವೀಯ ಕಾರ್ಯಪದ್ಧತಿಗೆ ನೀಡಿದ ಉಜ್ಜೀವನಕರ ಪ್ರೋತ್ಸಾಹ, ಸಂಸ್ಥೆಗೆ ಹೊಸ ಉತ್ಸಾಹ ಮತ್ತು ಸ್ಫೂರ್ತಿಯನ್ನು ತುಂಬಿತು. ಅವರು ವ್ಯಕ್ತಪಡಿಸಿದ ಸಹಾನುಭೂತಿ ಮತ್ತು ಹೃತ್ಪೂರ್ವಕ ಮೆಚ್ಚುಗೆಯು, ಈ ಪವಿತ್ರ ಸೇವೆಯನ್ನು ಇನ್ನಷ್ಟು ಉತ್ಸಾಹದೊಂದಿಗೆ ಮುಂದುವರಿಸುವ ಸಂಕಲ್ಪವನ್ನು ಮತ್ತಷ್ಟು ದೃಢಪಡಿಸಿತು. ಭೂಮಿಯ ಮೇಲೋ, ಸಮುದ್ರದ ತಳವೋ ಮಾನವೀಯತೆಗೂ, ಕಾಳಜಿಗೂ ಆಸ್ತಿ ಪಾಸ್ತಿ, ಗಡಿಗಳು, ತಡೆಗಳು ಇಲ್ಲ. ನೀರಿನಡಿಗಾಗಲೀ, ಭೂಮಿಯ ಮೇಲಾಗಲೀ ಎಲ್ಲೆಡೆ ಉದಾತ್ತ ಸೇವೆಯ ಮೂಲಕ ಸಮಾಜದಲ್ಲಿ ಆಳವಾದ ಬದಲಾವಣೆಯನ್ನು ತರಬಹುದೆಂಬ ನಂಬಿಕೆಗೆ ಈಶ್ವರ ಮಲ್ಪೆಯ ಸಂದೇಶ ಶಕ್ತಿ ತುಂಬಿದ್ದು, ಸಮಾಜದ ಅಂಚಿನಲ್ಲಿರುವ ಜನರ ಸಂಕಷ್ಟದ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡು, ಸ್ನೇಹಾಲಯದಂತಹ ಸಂಸ್ಥೆಗಳ ಅಗತ್ಯವನ್ನು ಪುನಃ ಒತ್ತಿ ಹೇಳಿದರು.