Ranjit Reunites with Family in Bihar, after 18 months of Seperation

/

Manjeshwar: In a heartwarming turn of events, Ranjit has finally returned home after a long 18 months of separation on March 15, 2025, coinciding with the joyous festival of Holi.

Ranjit had been struggling with mental illness for the past six years, spending five years under treatment at a private hospital in Darbhanga, followed by two months of care at Ranchi Mental Hospital. Before his illness, he had been employed as a helper at a local village shop, a simpler time when his family’s world was still intact.
After his disappearance, his family relentlessly searched for him, holding onto hope despite the challenges they faced.

Their prayers were finally answered when the Snehalaya Charitable Trust, based in Kasaragod, Kerala, rescued Ranjit on December 29, 2024. He was subsequently transferred to Shraddha Foundation, which facilitated the reunion with his family.

The moment of Ranjit’s return was one of the greatest moment of overwhelming joy and emotion. His family, overcome with relief, embraced him, while the entire village came together to welcome him back with open arms and warmth.

This reunion underscores the vital role that organizations like Snehalaya Charitable Trust and Shraddha Foundations play in restoring hope and healing for families affected by mental illness. Through their unwavering dedication, Ranjit’s family is whole again, just in time for the festival of colors, a true celebration of life and love.

snehalaya-ranjith-reunioun-21mar2025-01 snehalaya-ranjith-reunioun-21mar2025-02 snehalaya-ranjith-reunioun-21mar2025-03 snehalaya-ranjith-reunioun-21mar2025-04

18 ತಿಂಗಳ ಬೇರ್ಪಡಿಕೆಯ ಬಳಿಕ ಬಿಹಾರದಲ್ಲಿ ಪುನಃ ತಾಯಿಯ ಮಡಿಲನ್ನು ಸೇರಿಕೊಂಡ ರಂಜಿತ್

ಮಂಜೇಶ್ವರ: ಹೃದಯಸ್ಪರ್ಶಿ ಘಟನೆಯೊಂದರಲ್ಲಿ, 18 ತಿಂಗಳ ಅಗಲಿಕೆಯ ನಂತರ ರಂಜಿತ್ ಮರಳಿ ತನ್ನ ಮನೆಗೆ ಮರಳಿದಾನೆ. ಈ ಪುನರ್ಮಿಲನವು ಮಾರ್ಚ್ 15, 2025 ರಂದು, ಹಬ್ಬಗಳಲ್ಲಿ ಮಹೋನ್ನತ ಹಬ್ಬ ಹೋಳಿಯ ಶುಭ ಸಂದರ್ಭದಲ್ಲಿ ಜರುಗಿದ್ದು, ಅದೊಂದು ಅದ್ಭುತ ಸಂತೋಷದ ಕ್ಷಣವಾಗಿತ್ತು.

ರಂಜಿತ್ ಕಳೆದ ಆರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಐದು ವರ್ಷಗಳಿಂದ ದರ್ಭಾಂಗಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದನು ಅಲ್ಲದೆ, ಎರಡು ತಿಂಗಳು ರಾಂಚಿ ಮಾನಸಿಕ ಆಸ್ಪತ್ರೆಯಲ್ಲಿ ಕಳೆದಿದ್ದನು. ಅನಾರೋಗ್ಯಕ್ಕೆ ಮೊದಲು, ಅವನು ತನ್ನ ಊರಿನ ಒಂದು ಸಣ್ಣ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆ ಸಮಯದಲ್ಲಿ ಅವನ ಕುಟುಂಬ ಸುಖ-ಸಂತೋಷಗಳಿಂದ ಕೂಡಿತ್ತು.

ಆದರೆ, ಆತ ನಾಪತ್ತೆಯಾದ ನಂತರ, ಕುಟುಂಬದವರು ಆತಂಕಕ್ಕೆ ಒಳಪಟ್ಟು ರಂಜಿತನನ್ನು ನಿರಂತರವಾಗಿ ಹುಡುಕುತ್ತಿದ್ದರು, ಪರಿಸ್ಥಿತಿಗಳು ಸಂದಿಗ್ಧವಾಗಿ ಅನುಕೂಲಕರವಾಗಿ ಇಲ್ಲದಿದ್ದರೂ ಅವರು ತಮ್ಮ ಭರವಸೆ ಮತ್ತು ನಿರೀಕ್ಷೆಯನ್ನು ಕಳೆದುಕೊಂಡಿರಲಿಲ್ಲ.

ಕೊನೆಗೂ ಅವರ ಪ್ರಾರ್ಥನೆಗಳು ಫ‌ಲಿಸಿದವು. ಮಂಜೇಶ್ವರದ ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ 2024ರ ಡಿಸೆಂಬರ್ 29ರಂದು ರಂಜಿತ್ ರನ್ನು ಪತ್ತೆ ಹಚ್ಚಿ ರಕ್ಷಿಸಿತು. ನಂತರ, ಶ್ರದ್ಧಾ ಫೌಂಡೇಶನ್ ಅವರ ನೆರವಿನಿಂದ, ಅವನನ್ನು ತನ್ನ ಕುಟುಂಬದೊಂದಿಗೆ ಪುನಃ ಸೇರಿಸುವ ಕಾರ್ಯ ನಡೆಯಿತು.

ರಂಜಿತ್ ಮರಳಿದ ಕ್ಷಣ, ಅವನ ಕುಟುಂಬ ಅತೀ ಭಾವನಾತ್ಮಕ ಹಾಗೂ ಆನಂದದಾಯಕವಾಗಿ ಕಣ್ಣೀರನ್ನು ಸುರಿಸಿ. ರಂಜಿತನನ್ನು ಅಪ್ಪಿಕೊಂಡರು, ಇಡೀ ಗ್ರಾಮ ಒಟ್ಟಾಗಿ ಸೇರಿ ಆತ್ಮೀಯ ಸ್ವಾಗತ ನೀಡಿ ಸಂಭ್ರಮಿಸಿತು.

ಈ ಪುನರ್ಮಿಲನವು ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ಮತ್ತು ಶ್ರದ್ಧಾ ಫೌಂಡೇಶನ್ ನಂತಹ ಸಂಸ್ಥೆಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಮಾನಸಿಕ ಅಸ್ವಸ್ಥತೆಯಿಂದ ಪ್ರಭಾವಿತ ಕುಟುಂಬಗಳಿಗೆ ಹೊಸ ಭರವಸೆಯನ್ನು ನೀಡುವ ಈ ಸಂಸ್ಥೆಗಳ ಧೈರ್ಯ ಮತ್ತು ತ್ಯಾಗದ ಮಹತ್ವ ಅತೀ ಪ್ರಶಂಸನೀಯ. ಪಾವನ ಹೋಳಿ ಹಬ್ಬದ ಈ ಸಂದರ್ಭ, ಕುಟುಂಬ ಮತ್ತೆ ಒಗ್ಗೂಡಿದ್ದು, ಪ್ರೀತಿ ಹಾಗೂ ಜೀವನದ ನಿಜವಾದ ಸಂಭ್ರಮವನ್ನು ಒಳ್ಳೆಯದಾಗಿ ಆಚರಿಸುವ ಸೂಕ್ತ ಸಮಯವಾಗಿದೆ.

Leave a Reply

Your email address will not be published. Required fields are marked *

Need Help?