Nazrin Reunited with Family After a Year of separation

/

Manjeshwar, March 16, 2025, – In a heart-warming moment of relief and reunion, Nazrin, now known as Sunitha, has been joyfully reunited with her family after a year of painful separation in Hathras, Uttar Pradesh. For twelve long months, her mother, brother, uncle, and aunt searched desperately, never losing hope, despite never filing an official missing person’s report.

Nazrin, a married woman and mother to a young son, had been silently battling severe mental health challenges for years. Without access to proper treatment, she slipped away from her family’s reach, leaving them in anguish as they searched tirelessly for her. Her son, meanwhile, was cared for by his grandmother during this difficult time.

On January 23, 2025, after months of uncertainty, Nazrin was found in Mangalore and through the dedicated efforts of the Snehalaya Charitable Trust, she was rescued and placed into care. At Snehalaya Nazrin received essential treatment and counselling, which played a pivotal role in her recovery. After healing under the compassionate guidance of Snehalaya, she was transferred to Shraddha Foundation, a key organization responsible for reuniting her with her family.

On March 16, 2025, the long-awaited reunion finally transpired, bringing tears of joy and relief to Nazrin’s family, who never stopped believing she would return. This heart-warming story highlights the importance of hope, perseverance, and the role that organizations like Snehalaya Charitable Trust and Shraddha Foundation play in reuniting families and offering support to those in need.

Nazrin’s story is a distressing reminder of the profound impact of mental health care and the life-changing power of community-driven efforts to restore broken bonds.

snehalaya-nazrin-reunioun-20mar2025-01 snehalaya-nazrin-reunioun-20mar2025-02 snehalaya-nazrin-reunioun-20mar2025-03 snehalaya-nazrin-reunioun-20mar2025-04 snehalaya-nazrin-reunioun-20mar2025-05

ನೋವಿನ ನಗ್ನ ಮರಳಿಗೆ ಪುನಃ ಪ್ರೀತಿಯ ತುಂತುರು ಮಳೆ ಬೀಳಿಸಿದ ಕ್ಷಣ
ಒಂದು ವರ್ಷದ ಬೇರ್ಪಡಿಕೆಯ ನಂತರ ನಜ್ರಿನ್ ಅವರನ್ನು ತನ್ನ ಕುಟುಂಬಕ್ಕೆ ಪುನರ್ವಿಲೀನಗೊಳಿಸಿದ ಸ್ನೇಹಾಲಯ

ಮಂಜೇಶ್ವರ, ಮಾರ್ಚ್ 16, 2025 – ಹೃದಯ ಮಿಡಿಯುವ ಒಂದು ಪುನರ್ಮಿಲನದ ಕ್ಷಣದಲ್ಲಿ, [ಈಗ ಸುನಿತಾ ಎಂಬ ಹೆಸರಿನಲ್ಲಿ ಕರೆಯಲ್ಪಡುವ] ನಜ್ರಿನ್, ಒಂದು ವರ್ಷದ ನೋವಿನ ಪ್ರತ್ಯೇಕತೆಯ ಜೀವನದ ಬಳಿಕ ಪುನಃ ತನ್ನ ಕುಟುಂಬದೊಂದಿಗೆ ಪುನರ್ವಿಲೀನಗೊಂಡರು. ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಜ್ರಿನ್ ಕಾಣೆಯಾಗಿದ್ದಾಗ, ಆಕೆಯ ತಾಯಿ, ಅಣ್ಣ, ಮಾವ ಮತ್ತು ಚಿಕ್ಕಮ್ಮ ನಿರಾಶೆಯಾಗದೇ, ಮಾತ್ರವಲ್ಲ ಅಧಿಕೃತವಾಗಿ ಕಾಣೆಯಾದ ವ್ಯಕ್ತಿಯ ದೂರು ಕೂಡಾ ಸಲ್ಲಿಸದೆ, ಅವಳಿಗಾಗಿ ದಿನರಾತ್ರಿ ಶೋಧಿಸಿದ್ದರು.

ವಿವಾಹಿತ ಮಹಿಳೆ ಮತ್ತು ಚಿಕ್ಕ ಮಗುವಿನ ತಾಯಿಯಾದ ನಜ್ರಿನ್, ಕಳೆದ ಕೆಲವು ವರ್ಷಗಳಿಂದ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಸರಿಯಾದ ಚಿಕಿತ್ಸೆ ದೊರಕದೆ, ಅವರು ಕುಟುಂಬದ ಸಂಪರ್ಕದಿಂದ ತೊಲಗಿದರು, ಇದರಿಂದಾಗಿ ಅವರ ಕುಟುಂಬ ಅಪಾರ ವೇದನೆಯನ್ನು ಅನುಭವಿಸಿತು. ಈ ಅವಧಿಯಲ್ಲಿ ಆಕೆಯ ಮಗನನ್ನು ಅಜ್ಜಿ ಆರೈಕೆ ಮಾಡುತ್ತಿದ್ದಳು.

ಅನೇಕ ತಿಂಗಳುಗಳ ಅಸ್ಥಿರತೆಯ ಬದುಕು ಮತ್ತು ಅನಿಶ್ಚಿತತೆಯ ನಂತರ, ಜನವರಿ 23, 2025 ರಂದು, ನಜ್ರಿನ್ ಮಂಗಳೂರಿನಲ್ಲಿ ಪತ್ತೆಯಾಗಿದರು. ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಅವರ ಧೃಢ ಪ್ರಯತ್ನದ ಫಲವಾಗಿ, ಅವರನ್ನು ರಕ್ಷಿಸಲಾಗಿದ್ದು, ಆಕೆಯನ್ನು ಸೂಕ್ತಶಾರೀರಿಕ, ಮಾನಸಿಕ ಮತ್ತು ವೈದ್ಯಕೀಯ ಆರೈಕೆಗೆ ಒಳಪಡಿಸಲಾಯಿತು. ಸ್ನೇಹಾಲಯದಲ್ಲಿ ನಜ್ರಿನ್ ಅತ್ಯಾವಶ್ಯಕ ಚಿಕಿತ್ಸೆಯ ಜೊತೆಗೆ ಕೌನ್ಸೆಲಿಂಗ್ ಪಡೆದರು, ಇದರಿಂದಾಗಿ ಅವರು ಬೇಗನೆ ಚೇತರಿಸಿಕೊಂಡರು. ಚೇತರಿಕೆಯ ಬಳಿಕ ಮುಂದಿನ ಪುನರ್ಮಿಲನದ ಪ್ರಕ್ರಿಯೆಗಾಗಿ ಆಕೆಯನ್ನು ಶ್ರದ್ಧಾ ಫೌಂಡೇಶನ್ ಗೆ ವರ್ಗಾಯಿಸಲಾಯಿತು.

2025 ಮಾರ್ಚ್ 16ರಂದು, ನಿರೀಕ್ಷಿತ ಪುನರ್ಮಿಲನವು ನೆರವೇರಿತು. ತಮ್ಮ ಪ್ರೀತಿಯ ನಜ್ರಿನ್ ಅವರನ್ನು ಮರಳಿ ಪಡೆದ ಕುಟುಂಬದವರ ಕಣ್ಣೀರು ಆನಂದ-ಭರವಸೆಯ ಹೊಳೆಯಾಗಿ ಹರಿದು ಬಂತು. ಈ ಹೃದಯಸ್ಪರ್ಶಿ ಘಟನೆಯು ಭರವಸೆ, ಧೈರ್ಯ ಹಾಗೂ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮತ್ತು ಶ್ರದ್ಧಾ ಫೌಂಡೇಶನ್ ನಂತಹ ಸಂಸ್ಥೆಗಳ, ಕುಟುಂಬಗಳನ್ನು ಪುನರ್ವಿಲೀನಗೊಳಿಸುವಲ್ಲಿ ಮತ್ತು ಅವರ ಬೆಂಬಲವಾಗಿ ನಿಲ್ಲುವಲ್ಲಿ ಮಹತ್ವವದ ಸಾಧನೆಯನ್ನು ತೋರಿಸುತ್ತದೆ.

ನಜ್ರಿನ್ ಅವರ ಕಥೆ ಬಿರಿದ ಕುಟುಂಬಗಳ ಒಂದಾಗುವ ಜೀವನದ ಒಂದು ಅಧ್ಯಾಯ ಮಾತ್ರವಲ್ಲ, ಅದು ಸಮಾಜದಲ್ಲಿ ಮಾನಸಿಕ ಆರೋಗ್ಯದ ಮಹತ್ವವನ್ನು ಪ್ರತಿಬಿಂಬಿಸುವ ಬದುಕಿನ ಕನ್ನಡಿಯಾಗಿದೆ. ನಿರಾಶೆಯಲ್ಲಿ ಬೆಂದುಹೋದ ಜೀವಗಳು ಮಾನವೀಯ ಸ್ಪಂದನೆಯ ಶಕ್ತಿ ಮತ್ತು ಆರೈಕೆಯಿಂದ ಮರಳಿ ಜೀವಂತಗೊಳ್ಳಲು ಸಾಧ್ಯ ಎಂದು ಸಾರಿ ಹೇಳುವ ಜೀವಂತ ಉದಾಹರಣೆಯಾಗಿದೆ. ಈ ಪುನರ್ಮಿಲನದ ಕಥೆ, ಒಡೆದ ಸಂಬಂಧಗಳನ್ನು ಮತ್ತೆ ಜೋಡಿಸುವಲ್ಲಿ ಸಂಕಲ್ಪಶಕ್ತಿ ಎಷ್ಟು ಮಹತ್ವದೆಯೆಂದು ನಮಗೆ ಸ್ಪಷ್ಟಪಡಿಸುತ್ತದೆ.

Leave a Reply

Your email address will not be published. Required fields are marked *

Need Help?