Manjeshwar: In a heartwarming and emotional moment, Santoshi, who had been missing for two years, has finally been reunited with her family.
Santoshi, a mother of three, had been battling mental illness for over 13 years. Her condition took a devastating turn after the tragic death of her husband in an accident, which caused a relapse, leaving her mentally unstable. For the past two years, she had been missing, and her family had tirelessly searched for her, filing a missing person’s report and praying for her return.
Her brother had taken on the responsibility of raising her children—one son and two daughters—while coping with the heartbreaking uncertainty of Santoshi’s fate.
On November 3, 2024, hope was restored when Santoshi was found near Mangalore Junction by Snehalaya Charitable Trust. She was provided with the necessary treatment and care before being transferred to Shraddha Foundation, which facilitated her reunion with her family. After months of rehabilitation, Santoshi was joyfully reunited with her loved ones on March 11, 2025.
The reunion was a deeply emotional occasion, with her family, neighbors, and villagers welcoming her back with open arms. Tears flowed as Santoshi embraced her children and brother after the long separation, a moment that marked the end of a painful chapter and the beginning of a hopeful future.
The selfless work of Snehalaya Charitable Trust and Shraddha Foundation played a crucial role in this miracle, ensuring Santoshi’s recovery and safe return. The family expressed immense gratitude for their relentless efforts and dedication to the cause of humanity.
This moving reunion stands as a testament to the power of compassion and community, giving hope to others who are still searching for their loved ones.
ಎರಡು ವರ್ಷಗಳ ಧೀರ್ಘ ಬೇರ್ಪಡಿಕೆಯ ನಂತರ ಸಂತೋಷಿಯನ್ನು ಚತ್ತೀಸ್ಗಢದಲ್ಲಿ ತನ್ನ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಿದ ಸ್ನೇಹಾಲಯ
ಮಂಜೇಶ್ವರ: ಹೃದಯ ಸ್ಪರ್ಶಿ ಕ್ಷಣದಲ್ಲಿ, ಎರಡು ವರ್ಷಗಳಿಂದ ಕಾಣೆಯಾಗಿದ್ದ ಸಂತೋಷಿ ಇದೀಗ ತನ್ನ ಕುಟುಂಬದೊಂದಿಗೆ ಮತ್ತೆ ಸೇರ್ಪಡೆಯಾಗಿದ್ದಾಳೆ. ಮೂವರು ಮಕ್ಕಳ ತಾಯಿಯಾದ ಸಂತೋಷಿ, 13 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಳು. ಒಂದು ದುರ್ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿ ತನ್ನ ಪತಿ ಮಡಿದ ದುರಂತದ ನಂತರ ಸಂತೋಷಿಯ ಮನಸ್ಸು ತೀವ್ರವಾಗಿ ನೊಂದು ಮಾನಸಿಕ ಅಸ್ಥಿರತೆ ಉಂಟಾಗಿತ್ತು. ಈ ಅಘಾತದಿಂದ ಕಳೆದ ಎರಡು ವರ್ಷಗಳಿಂದ ಅವಳು ಮನೆಯಿಂದ ಕಾಣೆಯಾಗಿದ್ದಳು, ಅವಳ ಕುಟುಂಬವು ಅವಳನ್ನು ಹುಡುಕಲು ನಿರಂತರವಾಗಿ ಪ್ರಯತ್ನಿಸಿದರೂ ಅವರ ಪ್ರಯತ್ನ ಫಲಕಾರಿಯಾಗಿರಲಿಲ್ಲ.
ಸಂತೋಷಿ ಜೀವಿತವಾಗಿ ಉಳಿದಿರುವ ಸಂಭವನೀಯತೆಯನ್ನು ಗಂಭೀರವಾಗಿ ಅನುಮಾನಿಸಿ, ಅವಳ ಸಹೋದರ ಅವಳ ಮೂರು ಮಕ್ಕಳನ್ನು — [ಒಂದು ಗಂಡು ಮತ್ತು ಎರಡು ಹೆಣ್ಣು] ಪೋಷಿಸುವ ಹೊಣೆಗಾರಿಕೆಯನ್ನು ಹೊತ್ತಿಕೊಂಡಿದ್ದನು. ಆದರೆ 3 ನವೆಂಬರ್ 2024 ರಂದು, ಅವಳ ಬಗ್ಗೆ ಎಲ್ಲ ಆಶೆಗಳೇ ಮುಗಿದಿದ್ದಂತಿದ್ದ ಸಂದರ್ಭದಲ್ಲಿ, ಸಂತೋಷಿ ಮಂಗಳೂರು ಜಂಕ್ಷನ್ ಹತ್ತಿರ ಕಂಡುಬಂದಳು. ಸ್ನೇಹಾಲಯಾ ಚಾರಿಟೇಬಲ್ ಟ್ರಸ್ಟ್ನ ರಕ್ಷಣಾ ತಂಡವು ಅವಳನ್ನು ಪತ್ತೆಹಚ್ಚಿ, ಅವಳಿಗೆ ಅಗತ್ಯವಿರುವ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡಿದ ನಂತರ, ಅವಳ ಪುನರ್ಮಿಲನ ಪ್ರಕ್ರಿಯೆಗೆ ಸಹಾಯ ಮಾಡಲು ಅವಳನ್ನು ಶ್ರದ್ಧಾ ಫೌಂಡೇಶನ್ಗೆ ವರ್ಗಾಯಿಸಲಾಗಿತ್ತು. ಕೆಲವು ತಿಂಗಳುಗಳ ಶ್ರಮಪೂರಿತ ಶೋಧನೆಯ ಬಳಿಕ, 11 ಮಾರ್ಚ್ 2025ರಂದು ಸಂತೋಷಿ ತನ್ನ ಪ್ರೀತಿಯವರೊಂದಿಗೆ ಸಂತೋಷದಿಂದ ಒಂದಾದಳು.
ಪುನರ್ಮಿಲನದ ಆ ಶುಭ-ದಿನವು ಒಂದು ಹೃದಯಸ್ಪರ್ಶಿ ಮತ್ತು ಭಾವನಾತ್ಮಕವಾದ ಕ್ಷಣವಾಗಿ ಮೂಡಿ ಬಂತು. ಅವಳ ಕುಟುಂಬದ ಸದಸ್ಯರು, ನೆರೆಕೆರೆಯವರು ಮತ್ತು ಹಳ್ಳಿವಾಸಿಗಳು ಅವಳನ್ನು ಅಪಾರ ಆದರದಿಂದ ಸ್ವಾಗತಿಸಿದರು. ದೀರ್ಘ ಕಾಲದ ಅಗಲಿಕೆಯ ನಂತರ, ಸಂತೋಷಿಯ ಮಕ್ಕಳು ಮತ್ತು ಆಕೆಯ ಸಹೋದರರ ಭಾವೋದ್ರಿಕ್ತ ಆಲಿಂಗನೊಂದಿಗೆ ಸಂತೋಷಿಯನ್ನು ಬರಮಾಡಿಕೊಂಡರು. ಅಂದು ಸಂತೋಷಿಯ ದುಃಖಕರ ಅಧ್ಯಾಯಕ್ಕೆ ನಾಂದಿಯನ್ನು ಹಾರೈಸಿ, ಆಕೆಯ ಉಜ್ವಲ ಭವಿಷ್ಯದ ಮತ್ತೊಂದು ಯಾತ್ರೆಯ ಶುಭಾರಂಭವಾಯಿತು.
ಸ್ನೇಹಾಲಯಾ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರದ್ಧಾ ಫೌಂಡೇಶನ್ಗಳ ನಿರಂತರ ಸೇವೆ ಈ ಅದ್ಭುತ ಘಟನೆಯಲ್ಲಿ ಪ್ರಮುಖ ಪಾತ್ರವಹಿಸಿತು, ಇದು ಸಂತೋಷಿಯ ಜೀವನದಲ್ಲಿ ಪುನಃ ಒಂದು ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿತು. ಸ್ನೇಹಾಲಯಾ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರದ್ಧಾ ಫೌಂಡೇಶನ್ಗಳ ಶ್ರದ್ಧೆಗೆ ಮತ್ತು ಮಾನವೀಯತೆಗೆ ಕುಟುಂಬವು ಕೃತಜ್ಞತೆಗಳನ್ನು ವ್ಯಕ್ತಪಡಿಸಿತು.
ಈ ಭಾವನಾತ್ಮಕ ಸೇರ್ಪಡೆಯು ಪರಸ್ಪರ ಸಹಾನುಭೂತಿ ಮತ್ತು ಸಮುದಾಯದ ಶಕ್ತಿಯ ಪ್ರತಿಬಿಂಬವಾಗಿದ್ದು, ಕುಟುಂಬದಿಂದ ಬಿರಿದು ಹೋದ ಇನ್ನೂ ಅನೇಕರನ್ನು ತಮ್ಮನ್ನು ಹುಡುಕುತ್ತಿರುವ ಪ್ರೀತಿಯ ಕುಟುಂಬದವರೊಂದಿಗೆ ಒಂದಾಗಿಸುವ ಉಜ್ವಲ ಪ್ರೇರಣೆಯನ್ನುನೀಡುತ್ತದೆ.