Snehalaya rescues a young man and seeks help to reunite him with his family

/

Manjeshwar, March 15, 2025: A 24-year-old man, identified as Mr. Ali, was found wandering in distress at the Kasaragod Bus Stand and rescued by local authorities. He was brought to Snehalaya, a shelter dedicated to rehabilitation and care, where he is currently receiving treatment and support.
When discovered, Mr. Ali appeared neglected, with poor personal hygiene and signs of diminished intellectual functioning. His condition suggests he may have been living in vulnerable circumstances for some time.
Snehalaya is working tirelessly to uncover Mr. Ali’s background and reunite him with his family. In the meantime, they are providing him with the care he desperately needs.
If you have any information regarding Mr. Ali’s identity or family, please contact: 9446547033 or 7994087033.
Let’s bring Ali home and give him the chance to heal with the love and support he deserves.

snehalaya-ali-rescue.-16mar2025-02 snehalaya-ali-rescue.-16mar2025-03 snehalaya-ali-rescue.-16mar2025-04

ತೊಂದರೆಗೊಳಗಾದ ಶ್ರೀ ಅಲಿಗೆ ಸ್ನೇಹಾಲಯದ ಶ್ರೀರಕ್ಷೆಯ ಕವಚ

ಮಂಜೇಶ್ವರ, ಮಾರ್ಚ್ 15, 2025: ಕಾಸರಗೋಡು ಬಸ್ ನಿಲ್ದಾಣದಲ್ಲಿ, ಓರ್ವ 24 ವರ್ಷದ ಶ್ರೀ ಅಲಿ ಎನ್ನುವ ಯುವಕನನ್ನು ತೊಂದರೆಗೊಳಗಾದ ಸ್ಥಿತಿಯಲ್ಲಿ ಕಂಡು ಯುವಕ ಸ್ಥಳೀಯ ಪೊಲೀಸ್ ಅಧಿಕಾರಿಗಳ ಕಣ್ಣಿಗೆ ಬಿದ್ದಾಗ, ಮಾನವೀಯತೆಯ ಗೆಲುವು ಮತ್ತೊಮ್ಮೆ ಕಾಣಿಸಿಕೊಂಡಿತು. ಅಧಿಕಾರಿಗಳು ಆತ್ಮೀಯತೆ ಮತ್ತು ಜವಾಬ್ದಾರಿಯೊಂದಿಗೆ, ಅವರ ಸ್ಥಿತಿಯನ್ನು ಅರಿತು, ಅವಶ್ಯಕ ನೆರವು ನೀಡಿ ಮುಂದಿನ ಸುಧೀರ್ಘ ಆರೈಕೆ, ವೈದ್ಯಕೀಯ ಸಹಾಯ ಮತ್ತು ಪುನರ್ವಸತಿಗಾಗಿ ಶ್ರೀ ಅಲಿ ಅವರನ್ನು ಸ್ನೇಹಾಲಯದಲ್ಲಿ ದಾಖಲಿಸಿದರು.

ಪ್ರಸ್ತುತ, ಶ್ರೀ ಅಲಿ ಅವರು ಸ್ನೇಹಾಲಯದಲ್ಲಿ ಸೂಕ್ತ ಚಿಕಿತ್ಸೆಯೊಂದಿಗೆ ಪುನರುಜ್ಜೀವನವನ್ನು ಪಡೆಯುತ್ತಿದ್ದಾರೆ. ಅವರ ಬದುಕಿಗೆ ಹೊಸ ಬೆಳಕಿನ ಕಿರಣ ಬೆಳಗಿಸಿರುವ ಸ್ನೇಹಾಲಯದ ಈ ಕಾರ್ಯವು, ಮಾನವೀಯತೆಯು ಸದಾ ಜೀವಂತವಾಗಿರುವ ಸಂದೇಶವನ್ನು ಸಾರುತ್ತದೆ.

ಶ್ರೀ ಅಲಿ ಅವರು ಪತ್ತೆಯಾದಾಗ, ಅವರ ವೈಯಕ್ತಿಕ ಸ್ವಚ್ಛತೆ ತೀರ ದುರ್ಬಲವಾಗಿದ್ದು, ಮಾನಸಿಕ ಅನಾರೋಗ್ಯದ ಲಕ್ಷಣಗಳೂ ಗೋಚರಿಸುತ್ತಿದ್ದವು. ನಿರ್ಲಕ್ಷಿತ ಮತ್ತು ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ದೀರ್ಘ ಸಮಯವನ್ನು ಅವರು ಕಳೆದಿರಬೇಕು ಎಂಬ ಅನುಮಾನ ಪಡಲಾಗಿದೆ.

ಪ್ರಸ್ತುತಃ ಶ್ರೀ ಅಲಿ ಅವರ ಹಿಂದಿನ ವಿವರಗಳನ್ನು ಪತ್ತೆಹಚ್ಚಿ ಅವರನ್ನು ತಮ್ಮ ಕುಟುಂಬದೊಂದಿಗೆ ಪುನರ್‌ಜೋಡಿಸುವ ಕಾರ್ಯದಲ್ಲಿ ಸ್ನೇಹಾಲಯ ಶ್ರಮಿಸುತ್ತಿದೆ. ಶ್ರೀ ಅಲಿ ಅವರ ಕುಟುಂಬ, ಹಿನ್ನಲೆ ಅಥವಾ ಗುರುತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯಿದ್ದರೆ ಸಾರ್ವಜನಿಕರು ದಯವಿಟ್ಟು ಸಹಕರಿಸಿ – ನಮ್ಮನ್ನು 9446547033 ಅಥವಾ 7994087033 ಸಂಪರ್ಕಿಸಬೇಕಾಗಿ ನಮ್ರ ವಿನಂತಿ. ನಿಮ್ಮ ಸಹಾಯ ಮತ್ತು ಹಸ್ತಕ್ಷೇಪ ಶೀ ಅಲಿ ಅವರನ್ನು ತನ್ನ ಪ್ರೀತಿಪಾತ್ರರ ಜೊತೆ ಮತ್ತೆ ಸೇರಿಸಲು ಅಗತ್ಯವಾಗಿದೆ.

 

Leave a Reply

Your email address will not be published. Required fields are marked *

Need Help?