After Three Years of Wandering, Abdul Kasim Reunites with His Family

/

Manjeshwar: After three long years, Abdul Kasim, also known as Kallu, has finally been reunited with his family at Varanasi, Uttar Pradesh in an emotional gathering that brought joy and relief to all who witnessed it.
Kasim, who has struggled with a long history of mental illness, frequently wandered away from home, leaving his family heartbroken and in constant search for him. Without access to proper treatment, he would disappear for days at a time, leading his loved ones through years of worry and uncertainty.
His family’s prayers were finally answered on January 2, 2025, when Kasim was rescued by Snehalaya Charitable Trust in Kasaragod, Kerala. Found near Wenlock Hospital, Kasim was brought to safety and cared for by the organization until the long-awaited reunion could take place.
On March 7, 2025, in a heartwarming moment, Kasim’s brother and sister embraced him, overjoyed to see their long-lost sibling alive and safe. His brother, the sole breadwinner of the family, who works in a loom factory, had never given up hope. Kasim himself had once been a talented weaver, using his skills to earn money. The family, who lives in a modest lower-middle-class household, was overwhelmed with emotion and gratitude as their community rallied around them, offering support and valuable insights about Kasim’s past.
The efforts of Snehalaya Charitable Trust, along with Shraddha Foundation, have not only brought Kasim back to his family but have highlighted the power of community and dedication in reuniting missing individuals with their loved ones.
As his family promises to care for him, this heartwarming story stands as a testament to the resilience of love and the importance of helping those in need.

snehalaya-abdulkasim-rescue-11mar2025-02 snehalaya-abdulkasim-rescue-11mar2025-03 snehalaya-abdulkasim-rescue-11mar2025-04 snehalaya-abdulkasim-rescue-11mar2025-05 snehalaya-abdulkasim-rescue-11mar2025-06

ನಾವಿಕನಿಲ್ಲದ ಹಡಗು; ದಿಕ್ಕಿಲ್ಲದ ಪಯಣ. ಮೂರು ವರ್ಷಗಳ ನಂತರ ಕೊನೆಗೂ ಮನೆ ಸೇರಿದ ಅಬ್ದುಲ್ ಕಾಸಿಂ

ಮಂಜೇಶ್ವರ: ಮೂರು ದೀರ್ಘ ವರ್ಷಗಳ ವೇದನೆ ಮತ್ತು ನಿರಾಶೆಯ ಕತ್ತಲೆಯಲ್ಲಿ ಅಲೆಯುತ್ತಿದ್ದ ಅಬ್ದುಲ್ ಕಾಸಿಂ, [ಪ್ರೀತಿಯಿಂದ ಕಲ್ಲು ಎಂದು ಕರೆಯಲ್ಪಡುವ] ಕೊನೆಗೂ ತನ್ನ ಕುಟುಂಬದ ಆಲಿಂಗನದಲ್ಲಿ ಮರಳಿಬಂದ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ತನ್ನ ಕುಟುಂಬದ ಮಡಿಲು ಸೇರುವ ಕ್ಷಣ, ಕೇವಲ ಪುನರ್ಮಿಲನವಲ್ಲ, ಅದು ಭಾವನೆಗಳ ಉನ್ಮಾದದಲ್ಲಿ ತೇಲುವ ಸಂಭ್ರಮದ ಕ್ಷಣವಾಗಿತ್ತು. ಸ್ನೇಹಾಲಯದ ಸಮರ್ಪಿತ ಸೇವೆ ಮತ್ತು ಅವಿರತ ಪರಿಶ್ರಮದ ಫಲವಾಗಿ, ಕಾಸಿಂನ ಬದುಕಿನ ಕತ್ತಲು ಮಾಯವಾಗಿ, ನೂತನ ಸಂಕಲ್ಪದ ಸೂರ್ಯೋದಯವೂ, ನಂಬಿಕೆಯ ಹೊಂಗಿರಣವೂ ಆತನ ಹೃದಯದಲ್ಲಿ ಬೆಳಗಿತು. ವರ್ಷಗಳ ವಿಯೋಗದ ಬಿರುಕುಗಳನ್ನು ಭಾವೋದ್ರಿಕ್ತ ಕ್ಷಣಗಳ ಸಂತಸದಿಂದ ಪೂರೈಸಿದ ಈ ಪುನರ್ಮಿಲನ, ಕೇವಲ ಒಂದು ಕುಟುಂಬದ ಸಂಯೋಜನೆ ಮಾತ್ರವಲ್ಲ, ಅದು ಸಹಾನುಭೂತಿ, ಸೇವಾ ಮನೋಭಾವ ಮತ್ತು ಮಾನವೀಯತೆಯ ಅಮೃತವೇಣಿಯು ಹರಿಯುವ ಒಂದು ಮಹಾನ್ ಕ್ಷಣವಾಗಿ ಮೂಡಿಬಂತು

ಕಾಸಿಂನಿಗೆ ಮನೋವಿಕಾರಗಳ ಕಹಿ ನೆರಳು ದೀರ್ಘಕಾಲದಿಂದ ಎದುರಾಗಿತ್ತು. ಈ ಅನಿಶ್ಚಿತ ದಶೆಯಿಂದಾಗಿ, ಅವನು ಹತ್ತಾರು ಬಾರಿ ಮನೆ ತೊರೆದು, ನಿರ್ದಿಷ್ಟ ಗುರಿಯಿಲ್ಲದೆ ಅಲೆಮಾಡುತ್ತಿದ್ದ. ಅವನ ಈ ಅಪ್ರತ್ಯಾಶಿತ ನಾಪತ್ತೆಯಿಂದ, ಮನೆಯವರ ಜೀವನವು ನಿರಂತರ ಆತಂಕದ ನೆರಳಲ್ಲಿ ಮುಳುಗಿತ್ತು; ಜೊತೆಗೆ ಸೂಕ್ತ ಚಿಕಿತ್ಸೆಯ ನೆರವಿಲ್ಲದೆ, ಅನೇಕ ದಿನಗಳವರೆಗೆ ಕಾಣೆಯಾಗುವ ಅವನ ಸ್ವಭಾವ ಕುಟುಂಬದವರಿಗೆ ಭಯ, ಸಂಕಟ, ಮತ್ತು ನಿರಾಶೆಯ ಚಿಹ್ನೆಯಾಗಿ ಪರಿಣಮಿಸಿತು. ಆದರೆ 2025… ಜನವರಿ 2, ರ ದಿನಾಂಕ ಕಾಸಿಂನ ಬದುಕಿಗೆ ಹೊಸ ಬೆಳಕಿನ ಹರಿವು ತಂದುಕೊಟ್ಟಿತು. ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ತನ್ನ ಮಾನವೀಯತೆಗೆ ಮೆರಗು ನೀಡಿ ಕಾಸಿಂನಿಗೆ, ಪುನಃ ಜೀವನದ ದಾರಿಗೆ ತೋರುವ ದೀಪದಂತೆ ಈ ಸಂಸ್ಥೆಯು ಬೆಳಕಾಯಿತು.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಪರಿಸರದಲ್ಲಿ ಗುರಿಯಿಲ್ಲದೆ ಅಲೆದಾಡುತ್ತಿದ್ದ ಆತನನ್ನು ಮಂಜೇಶ್ವರ ಸ್ನೇಹಾಲಯ ರಕ್ಷಣಾ ತಂಡ ಗಮನಿಸಿ, ಆತಂಕದ ಅನಿರ್ದಿಷ್ಟತೆಯಿಂದ ಮುಕ್ತಗೊಳಿಸಿತು. ಅವರ ಸಮರ್ಪಿತ ಪ್ರಯತ್ನದಿಂದ, ಕಾಸಿಂ ಕೇವಲ ರಕ್ಷಿಸಲ್ಪಟ್ಟುದಲ್ಲ, ಅವನಿಗೆ ಅಗತ್ಯ ವೈದ್ಯಕೀಯ ನೆರವು, ಸಮರ್ಪಿತ ಶಾರೀರಿಕ-ಮಾನಸಿಕ ಆರೈಕೆ ಮತ್ತು ಬಿಗಿಯಾದ ಆಶ್ರಯ ಲಭಿಸಿತು.

ಮಾರ್ಚ್ 7, 2025 ರಂದು, ಒಂದು ಹೃದಯಸ್ಪರ್ಶಿ ಕ್ಷಮಿಲನದಲ್ಲಿ, ಕಾಸಿಂನ ಸಹೋದರ ಮತ್ತು ಸಹೋದರಿ ಕಾಸಿಂರವರನ್ನು ಆನಂದಭಾಷ್ಪಗಳಿಂದ ಸ್ವಾಗತಿಸಿದರು. ಕಾಸಿಂನ ಸಹೋದರ, ಕೈಮಗ್ಗ ಕಾರ್ಖಾನೆಯಲ್ಲಿ ಕೆಲಸ ಮಾಡಿ ಇಡೀ ಕುಟುಂಬವನ್ನು ಪಾಲಿಸಿಕೊಂಡು ಹೋಗುವ ಒಬ್ಬನೇ ಸಂಪಾದಕ. ಕೆಲವು ವರ್ಷಗಳ ಹಿಂದೆ ಕಾಸಿಂ ಕೂಡಾ ಪ್ರತಿಭಾನ್ವಿತ ನೂಲಗಾರನಾಗಿದ್ದನು. ತನ್ನ ಕೈಗಾರಿಯ ಕೌಶಲ್ಯದಿಂದ ಹಣ ಸಂಪಾದಿಸುತ್ತಿದ್ದ. ಮಿಲನದ ಸಮಯದಲ್ಲಿ ಕಾಸಿಂನ ಅತಿ ಸಾಧಾರಣ ಕುಟುಂಬ ಮತ್ತು ಸಮಾಜದ ಜನರು ಭಾವೋದ್ರೇಕರಾಗಿ ಪರಸ್ಪರ ಧೈರ್ಯ ಭರವಸೆಯನ್ನು ಕೊಡುವ ಹಾಗೂ ಭವಿಷ್ಯದಲ್ಲಿ ಕಾಸಿಂಮನಿಗೆ ಅಗತ್ಯವಿರುವ ಸೂಕ್ತ ಚಿಕಿತ್ಸೆ ಒದಗಿಸುವ ಭರವಸೆ ವ್ಯಕ್ತಪಡಿಸಿದ್ದು, ಈ ಕಥೆ ಪ್ರೀತಿಯ ಶಕ್ತಿಗೆ ಮತ್ತು ಸಹಾಯ ಮಾಡುವ ದ್ರಷ್ಯ ಹ್ರದಯಸ್ಪರ್ಷಿಯಾಗಿತ್ತು.

ಕಾಸಿಂನ ಪುನರ್ಮಿಲನದ ಕಥೆ, ದೌರ್ಬಲ್ಯಗೊಳಗಾದ ವ್ಯಕ್ತಿಗಳನ್ನು ರಕ್ಷಿಸಿ, ಪುನರುಜ್ಜೀವನಗೊಳಿಸಿ ಮರುಸಂಯೋಜಿಸುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಸ್ನೇಹಾಲಯದ ನಿಸ್ವಾರ್ಥ ಸೇವೆಯು ಕಾಸಿಂ ನಂತಹ ಅನೇಕ ಮಾನಸಿಕ ರೋಗಿಗಳ ಸ್ಥಳಾಂತರದಿಂದ ದುಃಖಿತ ಕುಟುಂಬಗಳಿಗೆ ಹೊಸ ಆಸೆಯನ್ನು ನೀಡುತ್ತದೆ ಮತ್ತು ಸಾಮಾಜಿಕ ಜನ ಜೀವನದಲ್ಲಿ ಹೇಗೆ ಮಹತ್ವಪೂರ್ಣವಾದ ಬದಲಾವಣೆಗಳನ್ನು ತರಬಹುದು ಎಂಬುದನ್ನು ದೃಢಪಡಿಸುತ್ತದೆ.

Leave a Reply

Your email address will not be published. Required fields are marked *

Need Help?