Help Reunite Dharma: A 40-Year-Old Man in Need of Support

/

Manjeshwar: On March 7, 2025, the Snehalaya team rescued a 40-year-old man, Dharma, who was found aimlessly wandering the streets of Uppala. Dharma has since been admitted to the Snehalaya Psycho-Social Rehabilitation Home for Men, where he is receiving care and support.
Upon his arrival, Dharma was in a state of poor personal hygiene and exhibited signs of distress, including mutism and wandering behavior, hinting at a potential psychiatric condition. Initial assessments suggest that he may be suffering from severe mental health issues.
We are urgently seeking any information about Dharma’s identity, family, or background. If you recognize him or have any details that can help us reunite him with his loved ones, please contact us at 9446547033 or 7994087033.
Your assistance could make a world of difference in bringing Dharma back to his family. Please help us in this effort to restore hope and healing.

snehalaya-dharma-rescue-09march2025-02 snehalaya-dharma-rescue-09march2025-03 snehalaya-dharma-rescue-09march2025-04snehalaya-dharma-rescue-09march2025-05

40 ವರ್ಷ ಪ್ರಾಯದ ಧರ್ಮನ ಪುನರ್ಮಿಲನಕ್ಕೆ ಸಹಾಯ ಕೋರಿ ನಮ್ರ ನಿವೇದನೆ.

ಮಂಜೇಶ್ವರ: 2025ರ ಮಾರ್ಚ್ 7ರಂದು, ಸ್ನೇಹಾಲಯ ರಕ್ಷಣಾ ತಂಡವು 40 ವರ್ಷ ಪ್ರಾಯದ ಧರ್ಮ ಎಂಬ ವ್ಯಕ್ತಿಯನ್ನು ಉಪ್ಪಳದ ಬೀದಿಗಳಲ್ಲಿ ಗುರಿ ಇಲ್ಲದೆ ಅಲೆದಾಡುವ ಸ್ಥಿತಿಯಲ್ಲಿ ಕಂಡು ಆತನನ್ನು ರಕ್ಷಿಸಿತು. ಪ್ರಸ್ತುತಃ ಧರ್ಮನನ್ನು ಮಂಜೇಶ್ವರದ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದ ಪುರುಷರ ವಿಭಾಗದಲ್ಲಿ ದಾಖಲಿಸಲಾಗಿದ್ದುಅಲ್ಲಿಆತನಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು, ಉಪಚಾರ ಮತ್ತು ಶಾರೀರಿಕ-ಮಾನಸಿಕ ಆರೈಕೆಯನ್ನು ನೀಡಲಾಗುತ್ತದೆ.

ಪತ್ತೆಯಾದ ಸಂದರ್ಭದಲ್ಲಿ ಧರ್ಮ ಗೊಂದಲಭರಿತ ಸ್ಥಿತಿಯಲ್ಲಿ ಇದ್ದು, ಮೂಕನಂತೆ ವರ್ತಿಸುತ್ತಾ ಮಾನಸಿಕ ಅಶಾಂತಿಯ ಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದರು. ಶಾರೀರಿಕ ಶುಚಿತ್ವದ ಕೊರತೆಯಿಂದ ಆತ ದುರ್ಬಲಗೊಂಡು ತೊಂದರೆಗೆ ಒಳಗಾಗಿದ್ದರು. ಧರ್ಮನ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಸ್ನೇಹಾಲಯದ ಸಿಬ್ಬಂದಿಗಳು ಪರಿಶ್ರಮ ಪಡುತ್ತಿದ್ದಾರೆ, ಆದರೆ ಈವರೆಗೆ ಆತನ ಹಿಂದಿನ ಜೀವನದ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ.

ಧರ್ಮನವರು ತಮ್ಮ ಕುಟುಂಬ ಅಥವಾ ಆಪ್ತರೊಡನೆ ಪುನಃ ಐಕ್ಯಗೊಳ್ಳುವ ಅಗತ್ಯವಿದೆ, ಏಕೆಂದರೆ ಆತನ ಪ್ರೀತಿಪಾತ್ರರು ಅವರ ಸ್ಥಿತಿಗತಿಗಳ ಬಗ್ಗೆ ಅನಭಿಗ್ಯರಾಗಿರಬಹುದು. ಹೀಗಾಗಿ, ಧರ್ಮನ ಗುರುತು ಪತ್ತೆಹಚ್ಚಿ, ಆತ್ಮೀಯರ ಮಡಿಲಿಗೆ ಮರಳುವಂತೆ ಮಾಡುವುದು ಅತ್ಯಗತ್ಯ.

ಈ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ನಮ್ಮ ವಿನಮ್ರ ವಿನಂತಿ ಏನೆಂದರೆ— ಧರ್ಮನ ಕುರಿತು ಯಾರಿಗಾದರೂ ಯಾವುದೇ ಮಾಹಿತಿ ಅಥವಾ ಅವರ ಕುಟುಂಬ ಮತ್ತು ಹಿನ್ನಲೆ ಕುರಿತು ವಿವರಗಳು ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ: 9446547033 / 7994087033. ನಿಮ್ಮ ಸಹಕಾರದಿಂದ, ಧರ್ಮನನ್ನು ಅವರ ಪ್ರಿಯಜನರೊಡನೆ ಪುನರ್ಮಿಲನಗೊಳಿಸುವ ಮಹತ್ವದ ಸೇವೆಯಲ್ಲಿ ಕೈಜೋಡಿಸಲು ಸಾಧ್ಯವಾಗುತ್ತದೆ. ಪುನಶ್ಚೇತನ ಮತ್ತು ಭರವಸೆಯ ಈ ಪಯಣದಲ್ಲಿ ನಿಮ್ಮ ಬೆಂಬಲ ಅನಿವಾರ್ಯ.

Leave a Reply

Your email address will not be published. Required fields are marked *

Need Help?