Rudra’s Miraculous Reunion: A Story of Hope and Redemption After 18months

/

Manjeshwar, March 3, 2025: After a harrowing separation of 18 months, Narsimha Swamy, fondly known as Rudra, has finally reunited with his wife in a heartwarming moment that brought tears of joy to his family and community. Rudra, who had gone missing from Mahabubnagar, Andhra Pradesh, was rescued and rehabilitated by the relentless efforts of Snehalaya Charitable Trust and Shraddha Foundation.

Rudra disappeared from his home, leaving his family in despair and uncertainty. His whereabouts were unknown until January 14, 2025, when a concerned citizen, Zakharaya, alerted the Snehalaya team about Rudra’s condition. He was found struggling on the streets, lost and battling mental health challenges. Snehalaya, known for their unwavering dedication to rescuing the lost and vulnerable, swiftly intervened.

After a successful rehabilitation period with Snehalaya, Rudra was transferred to Shraddha Foundation, who took charge of reuniting him with his loved ones. On March 3, 2025, Rudra’s long journey came full circle as he embraced his wife once more.

The entire village, along with neighbors and friends, gathered to celebrate the reunion, showering Rudra with love and support. The moment symbolized not only the joy of a family reunited but also the power of compassion and community in helping individuals overcome adversity.

This reunion is a testament to the tireless efforts of organizations like Snehalaya and Shraddha Foundation, who continue to work with those who have been displaced or are struggling with mental health issues, giving them a chance at redemption and reconnection with their families.

snehalaya-rudra-reunion-07march2025-02 snehalaya-rudra-reunion-07march2025-03 snehalaya-rudra-reunion-07march2025-04 snehalaya-rudra-reunion-07march2025-05 snehalaya-rudra-reunion-07march2025-06

ರುದ್ರನ ಅದ್ಭುತ ಪುನರ್ಮಿಲನ: ಹದಿನೆಂಟು ತಿಂಗಳುಗಳ ಬಳಿಕ ಜೀವನದಲ್ಲಿ ವಿಮೋಚನೆಯ ಜ್ಯೋತಿರ್ಮಯ ದೀಪ ಬೆಳಗಿದ ಸ್ನೇಹಾಲಯ

ಮಂಜೇಶ್ವರ, ಮಾರ್ಚ್ 3, 2025: ಹದಿನೆಂಟು ತಿಂಗಳ ನೋವಿನ ವಿಭಜನೆಯ ನಂತರ, ನರಸಿಂಹ ಸ್ವಾಮಿ, [ರುದ್ರ ಎಂದು ಕರೆಯಲ್ಪಡುವವರು], ತಮ್ಮ ಪ್ರೀತಿಯ ಪರಿವಾರದ ಜೊತೆ ಪುನಃ ಸೇರುವ ಹೃದಯ ಸ್ಪರ್ಶಿಯಾದ ಕ್ಷಣವನ್ನು ಅನುಭವಿಸಿದರು. ಈ ಮಧುರ ಕ್ಷಣವು ಅವರ ಕುಟುಂಬದವರ ಮತ್ತು ಸಮುದಾಯದವರ ಕಣ್ಣಲ್ಲಿ ಸಂತೋಷದ ಕಣ್ಣೀರನ್ನು ತಂದಿತು. ಆಂಧ್ರಪ್ರದೇಶದ ಮಹಬೂಬನಗರದಿಂದ ಕಾಣೆಯಾಗಿದ್ದ ರುದ್ರನನ್ನು, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರದ್ಧಾ ಫೌಂಡೇಶನ್‌ನ ಅವಿರತ ಶ್ರಮದಿಂದ ರಕ್ಷಿಸಲಾಗಿತ್ತು ಹಾಗೂ ಪುನರ್ವಸತಿ ಮಾಡಲಾಗಿತ್ತು.

ರುದ್ರ ನಾಪತ್ತೆಯಾಗಿದ್ದರಿಂದ ಅವರ ಕುಟುಂಬ ತೀವ್ರ ಚಿಂತೆಗೊಳಗಾಗಿತ್ತು. ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ, ಆದರೆ 2025ರ ಜನವರಿ 14ರಂದು ಜಕರಾಯ ಎಂಬ ವ್ಯಕ್ತಿ ರುದ್ರನ ಬಗ್ಗೆ ಸ್ನೇಹಾಲಯಕ್ಕೆ ಸ್ವಲ್ಪ ಮಾಹಿತಿ ನೀಡಿದರು. ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದ ರುದ್ರನನ್ನು ಬೀದಿಗಳಲ್ಲಿ ಅಲೆದಾಡುವ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು.

ಹದಿನೆಂಟು ತಿಂಗಳ ಆರೈಕೆ, ವೈದ್ಯಕೀಯ ಉಪಚಾರ ಮತ್ತು ಯಶಸ್ವಿ ಪುನರ್ವಸತಿಯ ನಂತರ, ಪಾರಿವಾರಿಕ ಪುನರ್ಮಿಲನಕ್ಕಾಗಿ ರುದ್ರನನ್ನು ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲಾಯಿತು,. 2025ರ ಮಾರ್ಚ್ 3ರಂದು, ರುದ್ರ ತನ್ನನ್ನು ಅತಿಯಾಗಿ ಪ್ರೀತಿಸುವ ಪತ್ನಿ, ಮತ್ತು ಪರಿವಾರದ ಜೊತೆ ಒಂದಾದಾಗ ಆತನ ಯಾತನೆ ಮತ್ತು ಅಗಲಿಕೆಯ ದೀರ್ಘ ಯಾನ ಪೂರ್ಣವಾಯಿತು.

ಈ ಅದ್ಭುತ ಪುನರ್ಮಿಲನವನ್ನು ವೀಕ್ಷಿಸಲು ಇಡೀ ಗ್ರಾಮದ ಜನರು, ಹತ್ತಿರದ ಸ್ನೇಹಿತರು ಮತ್ತು ನೆರೆಹೊರೆಯವರು ಸೇರಿದ್ದರು. ಇದು ಕೇವಲ ಒಂದು ಕುಟುಂಬದ ಪುನಃ ಸೇರುವ ಹರ್ಷವಷ್ಟೇ ಆಗಿರದೆ ಜೀವನದಲ್ಲಿ ಬರುವ ಸಂಕಟಗಳನ್ನು ಜಯಿಸಲು ಸಮುದಾಯದ ಶಕ್ತಿ ಎಷ್ಟು ಮಹತ್ವದ್ದೆಂಬುದರ ಸಾಕ್ಷಿಯಾಗಿತ್ತು.

ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ಮಾನವೀಯತೆಯ ದೀಪಗಳನ್ನು ಪ್ರಜ್ವಲಿಸುತ್ತಿದ್ದು, ತಮ್ಮ ಮನೆತನವನ್ನು ಕಳೆದುಕೊಂಡವರಿಗೂ, ಜೀವನದ ಕತ್ತಲಲ್ಲಿ ದಾರಿ ತಪ್ಪಿದವರಿಗೂ, ಮಾನಸಿಕ ಸಂಕುಲಕ್ಕೆ ಸಿಲುಕಿದವರಿಗೂ ಹೊಸ ಬೆಳಕಿನ ಆಶಾಕಿರಣವನ್ನು ತುಂಬುತ್ತಿರುವ, ಬರವಸೆಯ ಬೆಳಕನ್ನು ಹರಡುತ್ತಿರುವ ದಿವ್ಯ ಜ್ಯೋತಿರ್ಮಯ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳ ಸ್ಪರ್ಶವೇ ಆಶಾದೀಪ, ಅವರ ಸೇವೆಯೇ ನವಜೀವನದ ಬೆಳಕು!.

Leave a Reply

Your email address will not be published. Required fields are marked *

Need Help?