Manjeshwar: In an emotional and inspiring reunion, Raj Shaker, also known as Ravenna, has returned home to his wife after a heart-wrenching 12-year separation. His absence, driven by a devastating struggle with drug addiction and resulting mental illness, left a painful void in their lives. However, on March 3, 2025, this long journey finally came to a joyful conclusion at their home in Eeshamma Village, Kurkunda, Karnataka.
Raj’s battle with addiction had led him to leave his home, wandering lost for over a decade. His fate took a fortunate turn when he was rescued from the streets of Bantwala Mangalore by the compassionate team at Snehalaya, on December 27, 2024. After undergoing rehabilitation and recovery, Raj was transferred to Shraddha Foundation, where the final steps of his reintegration process were carefully guided.
The reunion was a profoundly moving event, greeted by joy and tears, not only from his wife but from neighbors and the entire community, who welcomed Raj back with open arms. His return symbolizes hope, resilience, and the power of compassion and support for those suffering from addiction and mental illness.
Thanks to the dedicated efforts of Snehalaya Charitable Trust and Shraddha Foundation, Raj’s story is a reminder that healing is possible, and families can be made whole once again.
ಕನಸುಗಳು ನನಸಾಗಿ ಅರುಣೋದಯ ಬೆಳಗಿದ ಸ್ನೇಹಾಲಯಃ 12 ವರ್ಷಗಳ ವಿಭಜನೆಯ ಬಳಿಕ ರಾಜ್ ಶೇಖರನ ತನ್ನ ಪತ್ನಿಯ ಜೊತೆ ಪುನರ್ಮಿಲನ
ಮಂಜೇಶ್ವರ: 2025 ಮಾರ್ಚ್ 3 ರ ಒಂದು ಭಾವನಾತ್ಮಕ ಹಾಗೂ ಹ್ರದಯಸ್ಪರ್ಷಿ ಪುನರ್ಮಿಲನದ ಕ್ಷಣದಲ್ಲಿ, ರಾಜ್ ಶೇಖರ್ (ರವೇನ್ನಾ ಎಂಬ ಹೆಸರಿನಿಂದ ಪರಿಚಿತ) 12 ವರ್ಷಗಳ ದೀರ್ಘಕಾಲದ ಅಗಲಿಕೆಯ ಬಳಿಕ ತಮ್ಮ ಪತ್ನಿಯ ಬಳಿಗೆ ಮರಳಿದರು. ಮಾದಕ ವಸ್ತುಗಳಿಗೆ ಬಲಿಯಾಗಿ ಅದರ ಜೊತೆ ಸೆಣಸಾಡುತ್ತಾ ಗಂಭೀರ ಹೋರಾಟ ನಡೆಸಿ ತದನಂತರ ಅದರ ಪರಿಣಾಮವಾಗಿ ಉಂಟಾದ ಮಾನಸಿಕ ಅಸ್ವಸ್ಥತೆ ಅವರ ಜೀವನದಲ್ಲಿ ಅಗಾಧ ನೋವನ್ನು ಉಂಟುಮಾಡಿತ್ತು. ಆದರೆ 2025 ಮಾರ್ಚ್ 3 ರಂದು, ಈ ದುಃಖದಾಯಕ ದೀರ್ಘಯಾನ ಕೊನೆಗೂ ಕರ್ನಾಟಕದ ಕುರ್ಕುಂಡ ಗ್ರಾಮದ ಈಶಮ್ಮಾ ವಸತಿಯಲ್ಲಿ ಸಂತಸದ ಅಂತ್ಯಕ್ಕೆ ತಲುಪಿತು.
ಮಾದಕ ಪದಾರ್ಥಗಳ ಚಟಕ್ಕೆ ಬಲಿಯಾದ ಕಾರಣದ ರಾಜ್ ತಮ್ಮ ಮನೆಯಿಂದ ದೂರ ತೆರಳಿ, ಅನೇಕ ವರ್ಷಗಳು ದಿಕ್ಕು ತಪ್ಪಿದ ಜೀವನವನ್ನು ಕಳೆದಿದ್ದರು. ಅವರ ದುರ್ದೈವ ಅದೃಷ್ಟಕ್ಕೆ ತಿರುಗಿದುದು 2024 ಡಿಸೆಂಬರ್ 27 ರಂದು. ಬಂಟ್ವಾಳ, ಮಂಗಳೂರಿನ ಬೀದಿಗಳಲ್ಲಿ ತಿರುಗಾಡುತ್ತಿದ್ದ ರಾಜ್ ಶೇಖರ್ ಅವರನ್ನು ಸ್ನೇಹಾಲಯದ ಸಹಾನುಭೂತಿಪೂರ್ಣ ತಂಡ ರಕ್ಷಿಸಿ. ಪುನರ್ವಸತಿ ಮತ್ತು ಪುನಶ್ಚೇತನದ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಅವರನ್ನು ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲಾಯಿತು, ಅಲ್ಲಿಂದ ಮುಂದೆ ಅವರನ್ನು ತಮ್ಮ ಪರಿವಾರಕ್ಕೆ ಪುನಃ ಸೇರಿಸುವ ಪ್ರಕ್ರಿಯೆಗೆ ಸೂಕ್ಷ್ಮ ಮಾರ್ಗದರ್ಶನ ನೀಡಲಾಯಿತು.
ಪುನರ್ಮಿಲನದ ಕ್ಷಣವು ಭಾವನಾತ್ಮಕ ಕ್ಷಣವಾಗಿ, ಸಂತೋಷ ಮತ್ತು ಕಣ್ಣೀರಿನ ಸಂಯೋಜನೆಯಾಗಿತ್ತು. ಅವರ ಪತ್ನಿಯಷ್ಟೇ ಅಲ್ಲ, ನೆರೆಹೊರೆಯವರು ಹಾಗೂ ಸಮುದಾಯದ ಜನರು ಸಹ ರಾಜ್ ಶೇಖರ್ ಅವರನ್ನು ತಮ್ಮ ಮನೆಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಅವರ ಈ ಮರಳುವಿಕೆ ಆಶೆಯ ಸಂಕೇತ, ಸಹನಶೀಲತೆಯ ಶಕ್ತಿ, ಹಾಗು ಮಾದಕವಸ್ತು ಮತ್ತು ಮಾನಸಿಕ ಅಸ್ವಸ್ಥತೆಯಿಂದ ಪೀಡಿತರಿಗೆ ಸಹಾಯ ಮಾಡಬಲ್ಲ ಸ್ನೇಹಾಲಯದ ಬದ್ದತೆ ಮತ್ತು ಕಾರ್ಯಪ್ರಣಾಳಿಯ ಮಹತ್ವವನ್ನು ಸೃಷ್ಟಿಸುವ ಉದಾಹರಣೆಯಾಗಿ ಮೂಡಿಬಂತು.
ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ಮತ್ತು ಶ್ರದ್ಧಾ ಫೌಂಡೇಶನ್ ಅವರ ಅನವರತ ಪ್ರಯತ್ನಗಳು ಹಾಗೂ ಸೇವಾ ಮನೋಭಾವದ ಫಲವಾಗಿ, ರಾಜ್ ಶೇಖರ್ ನಂತವರ ಬಿರಿದ ಕುಟುಂಬಗಳು ಪುನಃ ಒಂದಾಗಬಹುದು ಎನ್ನುವ ಈ ಜ್ವಲಂತ ಉದಾಹರಣೆ ಜನರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಯನ್ನು ಉಂಟುಮಾಡಿದೆ.