Rescue of Nangan Babu: A Journey Toward Healing and Hope

/

Manjeshwar : February 11, 2025 — In a compassionate effort, the Snehalaya team rescued Nangan Babu, a 37-year-old man, found wandering aimlessly at the Mangalore Bus Stand. Disheveled and showing signs of distress, he had been grappling with alcohol dependency and poor hygiene. Speaking only in Telugu, he identified his hometown as Rajahmundry, Andhra Pradesh.

Nangan Babu has been admitted to Snehalaya Psycho-Social Rehabilitation Home for Men, where he will receive much-needed care and support for his physical, emotional, and psychological well-being. His troubling journey, compounded by substance use, will be met with specialized rehabilitation services aimed at restoring his health and dignity.

For any information, please contact Snehalaya: Phone: 9446547033 or 7994087033

Your help can make a difference in bringing Nangan Babu back to his family and offering him a chance at a brighter future.

snehalaya-nangan-Babu-rescue-14feb2025-02 snehalaya-nangan-Babu-rescue-14feb2025-03 snehalaya-nangan-Babu-rescue-14feb2025-04

ನಂಗನ್ ಬಾಬುರವರನ್ನು ರಕ್ಷಸಿ ಜೀವನದ ಭರವಸೆಯ ದೀಪ ಬೆಳಗಿದ ಸ್ನೇಹಾಲಯ

ಮಂಜೇಶ್ವರ : ಫೆಬ್ರವರಿ 11, 2025 — ಮಾನವೀಯ ಸೇವೆಯ ಮೂರ್ತರೂಪವಾದ ಸ್ನೇಹಾಲಯ ತಂಡವು ಮಂಗಳೂರಿನ ಬಸ್ ನಿಲ್ದಾಣದಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ 37 ವರ್ಷದ ನಂಗನ್ ಬಾಬು ಅವರನ್ನು ರಕ್ಷಿಸಿದೆ. ಪತ್ತೆಯಾದ ಸಮಯದಲ್ಲಿ ನಂಗನ್ ಬಾಬು ಅವರು ಅಸ್ಥಿರ ಸ್ಥಿತಿಯಲ್ಲಿದ್ದು, ಮಲಿನ ಬಟ್ಟೆಗಳನ್ನು ಧರಿಸಿ, ತೀವ್ರ ಮಾನಸಿಕ ಒತ್ತಡದ ಲಕ್ಷಣಗಳನ್ನು ತೋರಿಸುತ್ತಿದ್ದರು. ಅತಿಯಾದ ಮದ್ಯಪಾನದ ಚಟಕ್ಕೆ ಬಲಿಯಾಗಿ ಶಾರೀರಿಕ ಸ್ವಚ್ಚತೆಯ ಕೊರತೆಯಿಂದ ಅವರು ಸಂಕಷ್ಟಕ್ಕೆ ಒಳಗಾಗಿದ್ದರು. ಅವರು ಕೇವಲ ತೆಲುಗು ಭಾಷೆಯಲ್ಲಿ ಮಾತನಾಡುತ್ತ, ತಮ್ಮ ಸ್ವಗ್ರಾಮವನ್ನು ಆಂಧ್ರಪ್ರದೇಶದ ರಾಜಮಹೇಂದ್ರವರಂ ಎಂದು ತಿಳಿಸಿದ್ದಾರೆ..

ಪ್ರಸ್ತುತಃ ನಂಗನ್ ಬಾಬು ಅವರನ್ನು ಸ್ನೇಹಾಲಯ ಪುರುಷರ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಗಿದೆ. ಅವರಿಗೆ ಶಾರೀರಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯವನ್ನು ಲಭ್ಯಗೊಳಿಸಲು ಅಗತ್ಯವಿರುವ ಎಲ್ಲಾ ತರದ ಆರೈಕೆ ಮತ್ತು ಬೆಂಬಲವನ್ನು ಅವರು ಸ್ನೇಹಾಲಯದಲ್ಲಿ ಪಡೆಯುತ್ತಿದ್ದಾರೆ. ಅವರು ಅನುಭವಿಸಿದ ಸಂಕಷ್ಟಮಯ ಜೀವನಯಾತ್ರೆ, ಅಳವಡಿಸಿಕೊಂಡಿದ್ದ ವ್ಯಸನದ ಪರಿಣಾಮಗಳಿಂದ ಚೇತರಿಸಲು ಪುನರ್ವಸತಿ ಮತ್ತು ಅತುತ್ತಮ ವೈದ್ಯಕೀಯ ಸೇವೆಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

ನಂಗನ್ ಬಾಬುರವರ ಕುಟುಂಬದ ಬಗ್ಗೆ ಯಾವುದೇ ಸುಳಿವು, ಮಾಹಿತಿ ಇದ್ದಲ್ಲಿ ಸಾರ್ವಜನಿಕರು ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ. ನಂಗನ್ ಬಾಬು ಅವರನ್ನು ಅವರ ಪ್ರೀತಿಯವರೊಂದಿಗೆ ಪುನರ್ಮಿಲನಗೊಳಿಸಲು ನಿಮ್ಮ ಸಹಾಯ ಮತ್ತು ಬೆಂಬಲವು ಅತ್ಯಂತ ಅಮೂಲ್ಯವಾಗಿದೆ.

Leave a Reply

Your email address will not be published. Required fields are marked *

Need Help?