Chandini Malpaharia Reunited with Family After 8-Month Ordeal in Darjeeling

/

Manjeshwar: In a deeply emotional reunion, Chandini Malpaharia, who had been missing for eight agonizing months, was finally reunited with her husband and son on January 27, 2025, in Darjeeling, West Bengal.

Chandini, originally named Suman, had been battling mental illness for seven years before going missing. Her plight touched the hearts of many, but hope was restored when she was rescued by Br Joseph Crasta and the dedicated team from Snehalaya Charitable Trust on December 4, 2024.

Following her rescue, Chandini underwent extensive treatment and care. Her recovery was supported by the compassionate efforts of Snehalaya, and later, she was transferred to Shraddha Foundation to help facilitate the reunion process with her family.

The reunion was filled with overwhelming joy, especially for Chandini’s young son, who was thrilled to embrace his mother once again. Family members, neighbors, and villagers celebrated this miraculous moment, expressing their gratitude for the tireless work of Snehalaya and Shraddha Foundation in restoring hope and reuniting a family.

This remarkable journey stands as a testament to the power of compassion and community, highlighting the lifesaving work done by organizations like Snehalaya Charitable Trust in bringing families back together.

snehalaya-chikichandni-reunion-08feb2025-03 snehalaya-chikichandni-reunion-08feb2025-04 snehalaya-chikichandni-reunion-08feb2025-05

ಸ್ನೇಹಾಲಯದಲ್ಲಿ ಸೌಹಾರ್ದದ ಸಮಾಗಮ ಎಂಟು ತಿಂಗಳ ಸಂಕಷ್ಟದ ಬಳಿಕ ಚಾಂದಿನಿ ಮಲ್ಪಹಾರಿಯಾ ಮಿಲನ

ಮಂಜೇಶ್ವರ: ದುಃಖದಾಯಕ ಎಂಟು ತಿಂಗಳ ಕಾಲ ನಾಪತ್ತೆಯಾಗಿದ್ದ ಚಾಂದಿನಿ ಮಲ್ಪಹಾರಿಯಾ ಅವರು 2025ರ ಜನವರಿ 27ರಂದು ಪಶ್ಚಿಮ ಬಂಗಾಳದ ದಾರ್ಜಿಲಿಂಗ್‌ನಲ್ಲಿ ತಮ್ಮ ಪತಿ ಮತ್ತು ಮಗನೊಂದಿಗೆ ಪುನಃ ಸೇರಿದರು. ಈ ಸಂದರ್ಭದ ಭಾವೋದ್ವಿಗ್ನ ಕ್ಷಣಗಳು ನೆರೆದವರ ಕಣ್ಮನಗಳನ್ನು ಅಶ್ರುಧಾರೆಗಳಿಂದ ನೆನೆದವು.

ಚಾಂದಿನಿ, ಮೂಲತಃ ಸುಮನ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟವರು, ಏಳು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದರು. ಅವರು ನಾಪತ್ತೆಯಾಗಿದ್ದ ವಿಚಾರ ಅವರ ಆತ್ಮೀಯರ ಮನಸ್ಸಿಗೆ ಬಹಳ ಬೇಸರ ಮೂಡಿಸಿತ್ತು, ಆದರೆ 2024ರ ಡಿಸೆಂಬರ್ 4ರಂದು ಬ್ರದರ್ ಜೋಸೆಫ್ ಕ್ರಾಸ್ಟಾ ಮತ್ತು ಸ್ನೇಹಾಲಯ ಚಾರಿಟಬಲ್ ಟ್ರಸ್ಟ್‌ನ ತಂಡ ಅವರನ್ನು ರಕ್ಷಿಸಿದಾಗ ಹತಾಶೆ ಭರವಸೆಯಾಗಿ ಮಾರ್ಪಟ್ಟಿತು.

ರಕ್ಷಿಸಿದ ಬಳಿಕ, ಚಾಂದಿನಿ ಸ್ನೇಹಾಲಯದ ಪ್ರೀತಿಪೂರ್ವಕ ಸಂರಕ್ಷಣೆಯಲ್ಲಿ ಸಮಗ್ರ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆದರು. ಸ್ನೇಹಾಲಯದ ಮಮತೆ, ಸಹಾನುಭೂತಿಯ ಸಮಾಲೋಚನೆ, ಮತ್ತು ಸಂಪೂರ್ಣ ಬೆಂಬಲದಿಂದ ಚೇತರಿಸಿಕೊಂಡ ಅವರನ್ನು, ಪುನರ್ಮಿಲನ ಪ್ರಕ್ರಿಯೆಗಾಗಿ ಶ್ರದ್ಧಾ ಫೌಂಡೇಶನ್‌ಗೆ ಸ್ಥಳಾಂತರಿಸಲಾಯಿತು.

ಪುನರ್ಮಿಲನದ ಸಂದರ್ಭ ಭಾವುಕತೆಯಿಂದ ತುಂಬಿತ್ತು, ವಿಶೇಷವಾಗಿ ಚಾಂದಿನಿಯ ಪುಟ್ಟ ಮಗನಿಗೆ ತಾಯಿ ಮತ್ತೆ ಲಭ್ಯರಾಗಿರುವುದು ವರ್ಣಿಸಲಾಗದ ಸಂತೋಷವನ್ನು ನೀಡಿತು. ಕುಟುಂಬದ ಸದಸ್ಯರು, ನೆರೆಯವರು ಮತ್ತು ಊರವರು ಈ ಅದ್ಭುತ ಕ್ಷಣವನ್ನು ಸಂಭ್ರಮಿಸಿದರು. ಕುಟುಂಬವನ್ನು ಪುನಃ ಸೇರುವಂತೆ ಮಾಡಿದ ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ನ ಶ್ರಮಕ್ಕಾಗಿ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಅದ್ಭುತ ಪ್ರಯಾಣ ಮಾನವೀಯತೆ ಮತ್ತು ಸಹಾನುಭೂತಿಯ ಶಕ್ತಿಗೆ ಸಾಕ್ಷಿಯಾಗಿದ್ದು, ಕುಟುಂಬಗಳನ್ನು ಪುನಃ ಸೇರಿಸುವಲ್ಲಿ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್‌ನಂತಹ ಸಂಸ್ಥೆಗಳು ಮಾಡುತ್ತಿರುವ ಅಮೋಘ ಸೇವೆಯನ್ನು ಎತ್ತಿಹಿಡಿಯುತ್ತದೆ.

 

Leave a Reply

Your email address will not be published. Required fields are marked *

Need Help?