Manjeshwar: On February 5, 2025, 34-year-old Kunal Pradip Gavale was rescued by the compassionate team at Snehalaya, led by Bro Joseph Crasta, after being found in a disoriented state along a road in Sornad, Bantwala. A concerned citizen, Alex Sequeira, identified Mr. Gavale, who was visibly distressed, unkempt, and muttering to himself, showing signs of excessive tobacco use.
Kunal’s origins trace back to Sambaji Nagar near Kalyani Railway Station in Maharashtra. He speaks Hindi and Marathi. The team at Snehalaya is now appealing to the public for assistance in reuniting Mr. Gavale with his loved ones, believing that being with his family is essential for his recovery.
If you have any information or can help, please contact Snehalaya at: Phone: 9446547033 or 7994087033
Your help can bring Kunal back to the embrace of his family. Let’s make a difference together.
ಕುನಾಲ್ ಪ್ರದೀಪ್ ಗವಾಲೆ ಅವರನ್ನು ತಮ್ಮ ಕುಟುಂಬದೊಂದಿಗೆ ಪುನಃ ಸೇರಿಸಲು ಸಹಾಯ ಕೋರಿ ಮನವಿ
ಮಂಜೇಶ್ವರ: ಫೆಬ್ರವರಿ 5, 2025 ರಂದು, 34 ವರ್ಷದ ಕುನಾಲ್ ಪ್ರದೀಪ್ ಗವಾಲೆ ಎಂಬ ವ್ಯಕ್ತಿಯನ್ನು ಬಂಟ್ವಾಳದ ಸೋರ್ನಾಡಿನಲ್ಲಿ ಅನಿರ್ದಿಷ್ಟ ಸ್ಥಿತಿಯಲ್ಲಿ ತಿರುಗಾಡುತ್ತಿದ್ದಾಗ, ಸ್ಥಳೀಯ ನಾಗರಿಕ ಅಲೆಕ್ಸ್ ಸಿಕ್ವೇರಾ ಅವರ ಗಮನಕ್ಕೆ ಬಿದ್ದು ಸ್ನೇಹಾಲಯಕ್ಕೆ ಮಾಹಿತಿ ನೀಡಿದಾಗ ಸ್ನೇಹಾಲಯ ತಂಡವು, ಬ್ರೊ. ಜೋಸೆಫ್ ಕ್ರಾಸ್ಟಾ ಅವರ ನೇತೃತ್ವದಲ್ಲಿ ಕುನಾಲ್ ಪ್ರದೀಪ್ ರಕ್ಷಿಸಿದರು. ಪತ್ತೆಯಾದ ಸಮಯದಲ್ಲಿ ಕುನಾಲ್ ಪ್ರದೀಪ್ ಅವರು ಬಲಹೀನ ಸ್ಥಿತಿಯಲ್ಲಿದ್ದು, ಶಾರೀರಿಕ ಸ್ವಚ್ಚತೆಯ ಕೊರತೆ, ತಮ್ಮಷ್ಟಕ್ಕೆ ಮಾತಾಡಿಕೊಳ್ಳುವ ಸ್ವಭಾವ ಮತ್ತು ಅತಿಯಾದ ತಂಬಾಕು ಬಳಕೆ ಮುಂತಾದ ವೈಕಲ್ಯಗಳೊಂದಿಗೆ ಕಂಡುಬಂದರು.
ಕುನಾಲ್ ಅವರ ಹುಟ್ಟೂರು ಮಹಾರಾಷ್ಟ್ರದ ಕಲ್ಯಾಣಿ ರೈಲ್ವೇ ನಿಲ್ದಾಣದ ಸಮೀಪದ ಸಂಬಾಜಿ ನಗರ ಎಂದು ತಿಳಿದು ಬಂದಿದೆ. ಅವರು ಹಿಂದಿ ಮತ್ತು ಮರಾಠಿ ಮಾತನಾಡುತ್ತಾರೆ. ಆದರೆ, ಅವರ ಕುಟುಂಬವನ್ನು ಪತ್ತೆ ಹಚ್ಚುವ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ. ಸ್ನೇಹಾಲಯದ ತಂಡವು ಇದೀಗ ಸಾರ್ವಜನಿಕರ ಸಹಾಯವನ್ನು ಕೋರುತ್ತಿದ್ದು, ಕುಟುಂಬದ ಜೊತೆ ಅವರನ್ನು ಮರು ಸೇರ್ಪಡಿಸುವ ಕಾರ್ಯಕ್ಕೆ ತೊಡಗಿದೆ.
ಕುನಾಲ್ ಪ್ರದೀಪ್ ನವರ ಕುಟುಂಬದ ಬಗ್ಗೆ ಯಾವುದೇ ಸುಳಿವು, ಮಾಹಿತಿ ಇದ್ದಲ್ಲಿ ಸಾರ್ವಜನಿಕರು ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ. ನಿಮ್ಮ ಸಹಯೋಗದಿಂದ ಕುನಾಲ್ ನವರನ್ನು ಆತನ ಪ್ರೀತಿಯವರೊಂದಿಗೆ ಪುನರ್ಮಿಲನಗೊಳಿಸಲು ನಿಮ್ಮ ಸಹಾಯ ಮತ್ತು ಬೆಂಬಲವು ಅತ್ಯಂತ ಅಮೂಲ್ಯವಾಗಿದೆ.
One Response
The organization Snehala helps many human beings who are about to end their lives wandering on the streets and brings them back to life. This is truly a great message for our society..a message of love, light, truth, and compassion.