Manjeshwar : February 2, 2025 – A 35-year-old woman, identified as Sangeethiya, was found at the Porbandar-Kochuveli Railway Station in Kasaragod. Brought to Snehalaya Psycho-Social Rehabilitation Home for Women by Mr. Mahesh C.K., Senior Civil Police Officer, she is now in urgent need of assistance.
Sangeethiya, who communicates in Bhojpuri and Hindi, was found with poor personal hygiene and is showing signs of psychiatric illness. Currently, little is known about her background, identity, or family. We believe that Sangeethiya may be far from her home, lost and separated from her loved ones.
We are making an urgent appeal to the public for any information that can help us identify her family or her hometown. Your help is crucial in reuniting Sangeethiya with those who care about her and ensuring she receives the proper care and support she needs.
If you have any details about Sangeethiya’s identity or family, please contact us at9446547033 or7994087033.
Help us reunite her with her family and support her journey to recovery.
ಸಂಗೀತಿಯನ್ನು ತನ್ನ ಕುಟುಂಬದೊಂದಿಗೆ ಪುನರ್‌ಮಿಲನಗೊಳಿಸಲು ಸಹಾಯ ಕೋರಿ ನಿವೇದನೆ
ಮಂಜೇಶ್ವರ, ಫೆಬ್ರವರಿ 2, 2025 – 35 ವರ್ಷ ವಯಸ್ಸಿನ ಮಹಿಳೆ, ಸಂಗೀತಿಯಾ ಎಂದು ಗುರುತಿಸಲಾದವಳು, ಕಾಸರಗೋಡು ಜಿಲ್ಲೆಯ ಪೋರಬಂದರ್-ಕೊಚ್ಚುವೇಲಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಶ್ರೀ ಮಹೇಶ್ ಸಿ.ಕೆ. ಅವರು ಸಂಗೀತಿಯಾಳನ್ನು ಸ್ನೇಹಾಲಯಾ ಮನೋಸಾಮಾಜಿಕ ಪುನರ್ವಸತಿ ಕೇಂದ್ರದ ಮಹಿಳಾ ವಿಭಾಗದಲ್ಲಿ ದಾಖಲಿಸಿದ್ದು ಆಕೆಗೆ, ಈಗ ತುರ್ತು ಸಹಾಯದ ಅಗತ್ಯವಿದೆ.
ಸಂಗೀತಿಯಾ ಭೋಜ್ ಪುರಿ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಪತ್ತೆಯಾದ ಸಮಯದಲ್ಲಿ ವಯಕ್ತಿಕ ಸ್ವಚ್ಛತೆಯಲ್ಲಿ ಕೊರತೆಯಲ್ಲಿದ್ದು, ಆಕೆಯಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಿವೆ. ಅವರ ಜೀವನದ ಹಿಂದಿನ ಮಾಹಿತಿಯಾಗಲಿ, ಗುರುತು ಅಥವಾ ಕುಟುಂಬದ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ. ಸಂಗೀತಿಯಾ ತನ್ನ ಪ್ರಿಯ ಜನರಿಂದ ಬೇರ್ಪಡಿಸಲ್ಪಟ್ಟು ಕುಟುಂಬದಿಂದ ಬಹಳ ದೂರ ಬಂದಿರುವ ಸಾಧ್ಯತೆಗಳು ಕಾಣುತ್ತವೆ.
ಸಂಗೀತಿಯಾಳ ಕುಟುಂಬದ ಅಥವಾ ಆಕೆಯ ಊರಿನ ಬಗ್ಗೆ ಯಾವುದೇ ಸುಳಿವು, ಮಾಹಿತಿ ಇದ್ದಲ್ಲಿ ಸಾರ್ವಜನಿಕರು ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ. ನಿಮ್ಮ ಸಹಯೋಗದಿಂದ ಸಂಗೀತಿಯವರನ್ನು ಆಕೆಯ ಪ್ರೀತಿಯವರೊಂದಿಗೆ ಪುನರ್ಮಿಲನಗೊಳಿಸಲು ನಿಮ್ಮ ಸಹಾಯ ಮತ್ತು ಬೆಂಬಲವು ಅತ್ಯಂತ ಅಮೂಲ್ಯವಾಗಿದೆ.