Manjeshwar: On January 26, 2025, 35-year-old Abdul was rescued by social worker Mr. Sayyad Jafor Pasha and his team from Nellyadi and brought to Snehalaya Psycho-Social Rehabilitation Home for Men in Manjeswar. Abdul was found wandering in a disoriented state, displaying symptoms such as poor hygiene, muttering to himself, hoarding behavior, and substance use (pan masala and cigarettes).
Though Abdul claims to be from Delhi and speaks Hindi, little is known about his family or background.
Snehalaya is seeking any information that could help identify Abdul or reconnect him with his family. Please contact 9446547033 or 7994087033 if you can help.
Your assistance could be vital in helping Abdul recover and reunite with his loved ones.
ಅಬ್ದುಲ್ ಅವರ ಪುನರ್ವಸತಿಗೆ ಸಂಬಂದ ಪಟ್ಟ ಮಾಹಿತಿಗಾಗಿ ವಿನಂತಿ
ಮಂಜೇಶ್ವರ: 2025ರ ಜನವರಿ 26ರಂದು, 35 ವರ್ಷ ವಯಸ್ಸಿನ ಅಬ್ದುಲ್ ಅವರನ್ನು ಖ್ಯಾತ ಸಮಾಜ ಸೇವಕರಾದ ಶ್ರೀ ಸಯ್ಯದ್ ಜಾಫರ್ ಪಾಷಾ ಮತ್ತು ಅವರ ತಂಡದವರು ನೆಲ್ಯಾಡಿಯಿಂದ ರಕ್ಷಿಸಿ ಮಂಜೇಶ್ವರದಲ್ಲಿ ನೆಲೆಗೊಂಡಿರುವ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಪುರುಷರ ವಿಭಾಗದಲ್ಲಿ ದಾಖಲಿಸಿದ್ದಾರೆ. ಪತ್ತೆಯಾದ ಸಮಯದಲ್ಲಿ ಅಬ್ದುಲ್ ಅವರಲ್ಲಿ ಗುರಿ ಇಲ್ಲದ ಅಲೆದಾಟ, ಸ್ವಚ್ಛತೆಯ ಕೊರತೆ, ಸ್ವಯಂ-ಮಾತು, ಅಪ್ರಯೋಜಕ ವಸ್ತುಗಳ ಸಂಗ್ರಹಣೆ, ಗಾಂಜಾ ಪಾನ್ ಮಸಾಲಾ ಮತ್ತು ಸಿಗರೆಟ್ ನಂತಹ ರಾಸಾಯನಿಕ ವಸ್ತುಗಳ ಬಳಕೆಯ ಲಕ್ಷಣಗಳು ಕಂಡುಬಂದಿವೆ.
ಅಬ್ದುಲ್ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು ದೆಹಲಿಯವರೆಂದು ಹೇಳಿಕೊಂಡರೂ, ಅವರ ಕುಟುಂಬ ಅಥವಾ ಹಿನ್ನೆಲೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಸ್ನೇಹಾಲಯ ಅಬ್ದುಲ್ ಅವರ ಗುರುತನ್ನು ಪತ್ತೆಹಚ್ಚಲು ಅಥವಾ ಅವರ ಕುಟುಂಬದೊಂದಿಗೆ ಐಕ್ಯಗೊಳಿಸಲು ಸಹಾಯಕವಾಗುವ ಮಾಹಿತಿಗಾಗಿ ಈ ಮೂಲಕ ಸಾರ್ವಜನಿಕರ ಸಹಾಯವನ್ನು ವಿನಂತಿಸುತ್ತಿದೆ. ತಮ್ಮಲ್ಲಿ ಯಾರಾದರೂಈ ವ್ಯಕ್ತಿಯ ಕುರಿತು ಮಾಹಿತಿ ಹೊಂದಿದ್ದಲ್ಲಿ ಅಥವಾ ಅಬ್ದುಲ್ ಅವರ ನೆಲೆಯನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಬಹುದಾದರೆ ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ. ನಿಮ್ಮ ಸಹಾಯ ಅಬ್ದುಲ್ ಅವರ ಚೇತರಿಕೆಗೆ ಮತ್ತು ಅವರ ಪ್ರಿಯಜನರೊಂದಿಗೆ ಪುನಃ ಸೇರಲು ಅತ್ಯಂತ ಮುಖ್ಯವಾಗಿದೆ.