




ಮಂಜೇಶ್ವರ, ಜನವರಿ 21, 2025 – ಒಂದು ಭಾವನಾತ್ಮಕ ಪುನರ್ಮಿಲನದಲ್ಲಿ, ಕಳೆದ ಎಂಟು ತಿಂಗಳುಗಳಿಂದ ಸ್ನೇಹಾಲಯ ಸೈಕೋಸೋಶಿಯಲ್ ರೀಹ್ಯಾಬಿಲಿಟೇಶನ್ ಸೆಂಟರ್‌ನಲ್ಲಿ ಆಶ್ರಯ ಪಡೆದುದ್ದ ಶ್ರೀ ಮುರ್ಸಲೀಂ (ಸೋನು) ಅವರ ತಾಯಿಯೊಂದಿಗೆ ಪುನಃ ಸೇರಿಕೊಂಡರು.
2024ರ ಅಕ್ಟೋಬರ್ 10ರಂದು ಸ್ನೇಹಾಲಯಕ್ಕೆ ದಾಖಲಾಗಿದ್ದ ಮುರ್ಸಲೀಂ ತಮ್ಮ ಕುಟುಂಬದ ಸಂಪರ್ಕವನ್ನು ಕಳೆದುಕೊಂಡಿದ್ದರು. ಕುಟುಂಬದವರು ಅವರ ಇರುವಿಕೆಯ ಮಾಹಿತಿ ಅಥವಾ ಆಗು ಹೋಗುಗಳನ್ನು ತಿಳಿಯದೆ ಕಂಗಾಲಾಗಿದ್ದರು. ಸ್ನೇಹಾಲಯದ ತಂಡದ ಅವಿರತ ಪರಿಶ್ರಮದ ಪರಿಣಾಮವಾಗಿ ಉತ್ತರ ಪ್ರದೇಶದಲ್ಲಿ ನೆಲೆಯಾಗಿದ್ದ ಆತನ ಕುಟುಂಬದ ವಿಳಾಸವನ್ನು ಪತ್ತೆಹಚ್ಚಲಾಯಿತು.
ಪುನರ್ಮಿಲನವು ಒಂದು ಭಾವನಾತ್ಮಕ ಕ್ಷಣವಾಗಿದ್ದು, ಮುರ್ಸಲೀಂ ಅವರ ಸಹೋದರ, ಹರುಷದ ಕಣ್ಣೀರಿನ ಹನಿಗಳೊಂದಿಗ ಆತನನ್ನು ತಬ್ಬಿಕೊಂಡರು.
ಮುರ್ಸಲೀಂ ಅವರ ಜೀವನದಲ್ಲಿ ಇದು ಒಂದು ನೂತನ ಅಧ್ಯಾಯವಾಗಿ ಮೂಡಿ ಬಂದು ಅವರು ತಮ್ಮ ಕುಟುಂಬದೊಂದಿಗೆ ಪುನಃ ಸಂಪರ್ಕ ಹೊಂದಿ ತಮ್ಮ ಜೀವನವನ್ನು ಪುನರ್ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬವನ್ನು ಪುನಃ ಸೇರ್ಪಡೆಗೊಳಿಸಲು ಪ್ರಮುಖ ಪಾತ್ರವಹಿಸಿದ ಸ್ನೇಹಾಲಯ ತನ್ನ ಸೇವೆಗೆ ಹೆಮ್ಮೆಪಡುವುದರ ಜೊತೆಗೆ ಇಂತಹ ಅನೇಕರ ಮನೆಮಟ್ಟ ತಲುಪುವ ಪ್ರಯಾಣವನ್ನು ಬೆಂಬಲಿಸಲು ಸತತವಾಗಿ ಪ್ರಯತ್ನ ಮಾಡುತ್ತಿದೆ.