Shakuntala Reunited with Family After Six Months of Being Missing

/

Manjeshwar: In an emotional and heartwarming reunion, Shakuntala, originally named Savitri Devi, was reunited with her family after six long months. Shakuntala, who has battled mental illness for six years, had gone missing once again. Thanks to the efforts of Snehalaya and Shraddha Foundations, she is now back with her loved ones.

The tragic journey for Shakuntala began after the passing of her husband, which triggered her mental instability. This was the third time she had gone missing.

Rescued on September 16, 2024, by the Snehalaya team, Shakuntala received treatment and care before being transferred to the Shraddha Foundation, where her reunion process was initiated. On December 27, 2024, she was finally reunited with her family.

This heartwarming story stands as a beautiful reminder of the enduring strength of family, love, and the power of community.

snehalaya-shakuntala-reunion-16jan2025-02 snehalaya-shakuntala-reunion-16jan2025-0 snehalaya-shakuntala-reunion-16jan2025-04

ಆರು ತಿಂಗಳ ವಿಯೋಗದ ಬಳಿಕ ಶಕುಂತಳಾಲ ಹ್ರದಯಸ್ಪರ್ಷಿ ಸಂಗಮ

ಮಂಜೇಶ್ವರ: ಸಿರಿ ಅಶ್ರುಗಳ ಭಾವನಾತ್ಮಕ ಮಿಲನದಲ್ಲಿ, ಮೂಲತಃ ಸಾವಿತ್ರೀ ದೇವಿ ಎಂದು ಕರೆಯಲ್ಪಡುವ ಶಕುಂತಳಾ, ತನ್ನ ಕುಟುಂಬದಿಂದ ಆರು ತಿಂಗಳ ಅಗಲಿಕೆಯ ನಂತರ ಪುನಃ ಆಕೆಯ ಕುಟುಂಬವನ್ನು ಸೇರಿದರು. ಕಳೆದ 6 ವರ್ಷಗಳಿಂದ ತನ್ನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಶಕುಂತಳಾ ಒಂದು ದಿನ ಮನೆಯಿಂದ ಅಕಸ್ಮಾತ್ ಕಣ್ಮರೆಯಾಗಿದ್ದರು. ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ಗಳ ಅವಿರತ ಪ್ರಯತ್ನಗಳಿಂದ, ಈಗ ಆಕೆ ತನ್ನ ಪ್ರೀತಿಪಾತ್ರ ಕುಟುಂಬದ ಜೊತೆ ಮರಳಿ ಸೇರಿದ್ದಾರೆ.

ಶಕುಂತಳಾ ಅವರ ದುಃಖದ ಪ್ರಯಾಣವು ಅವರ ಗಂಡನ ನಿಧನದಿಂದ ಆರಂಭವಾಯಿತು, ಪತಿಯ ಮರಣ ಆಕೆಯಲ್ಲಿ ಮಾನಸಿಕ ಅಸ್ಥಿರತೆಯನ್ನು ಉಂಟುಮಾಡಿತು. ಆ ನಂತರ ಪದೇ ಪದೇ ಮನೆಯಿಂದ ಕಣ್ಮರೆಯಾಗುವ ಶಕುಂತಳಾ ಇದೀಗ ಕಣ್ಮರೆಯಾಗಿದ್ದುಮೂರನೇ ಬಾರಿ.

2024ರ ಸೆಪ್ಟೆಂಬರ್ 16ರಂದು ಸ್ನೇಹಾಲಯ ತಂಡ ಆಕೆಯನ್ನು ರಕ್ಷಿಸಿತು. ಆ ಬಳಿಕ ಸ್ನೇಹಾಲಯದ ಆತ್ಮೀಯ ಸಂರಕ್ಷಣೆಯಲ್ಲಿ ಆಕೆಗೆ ಅಗತ್ಯವಿರುವ ಶಾರೀರಿಕ ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ನೀಡಿ ಆಕೆಯನ್ನು ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲಾಯಿತು, ಅಲ್ಲಿ ಶಕುಂತಳಾಲ ಪುನರ್ಮಿಲನದ ಪ್ರಕ್ರಿಯೆ ಆರಂಭವಾಯಿತು. 2024ರ ಡಿಸೆಂಬರ್ 27ರಂದು,ಹರ್ಷದ ಅಶ್ರುಧಾರೆಗಳೊಂದಿಗೆ ಆಕೆ ಪುನಃ ತನ್ನ ಕುಟುಂಬದ ಜೊತೆ ಒಂದಾದಳು

ಶಕುಂತಳಾಲ ಈ ಹೃದಯಸ್ಪರ್ಶಿ ಪುನರ್ಮಿಲನದ ಕಥೆಯು ಮಾನಸಿಕ ಅಘಾತಗಳಿಂದ ಬಳಲುವ ವ್ಯಕ್ತಿಗಳ ಜೀವನದಲ್ಲಿ ಒಂದು ಕುಟುಂಬದ ಬೆಂಬಲ, ಪ್ರೀತಿ ಮತ್ತು ಸಮಾಜದ ಕರುಣೆಯ ಸೂಕ್ಷ್ಮ ಅಭಿವ್ಯಕ್ತಿಗೆ ಒಂದು ಜ್ವಲಂತ ಉದಾಹರಣೆಯಾಗಿದೆ.

 

Leave a Reply

Your email address will not be published. Required fields are marked *

Need Help?