Manjeshwar: January 8, 2025 – In a compassionate act of intervention, Fr. Louis Mariyadas, the priest of Hosangadi church, partnered with Snehalaya to rescue a disoriented 50-year-old man found wandering near Infant Jesus Church. The man, identifying himself as Philips Thomas, claims to be from Chengannur, Alappuzha.
Rehabilitation and Care Philips Thomas is currently receiving care at the Snehalaya Psycho-Social Rehabilitation Home for Men, where he is undergoing assessments. He communicates in Malayalam, and the dedicated team at Snehalaya is providing him with the emotional and medical support he needs to begin his journey of recovery.
Appeal for Assistance Snehalaya is urgently seeking information to help trace Philips’ family or background. Anyone with details about his identity, family, or history is requested to contact Snehalaya at 9446547033 or 7994087033. Your help could play a vital role in reuniting Philips with his loved ones.
ನಿರಾಶೆಯ ಕಗ್ಗತ್ತಲಿನಲಿ ಮಂಜೇಶ್ವರದ ಹೊಸಂಗಡಿ ಬಳಿ ಸುತ್ತಾಟ ಮಾಡುತ್ತಿದ್ದ 50 ವರ್ಷದ ವ್ಯಕ್ತಿಯನ್ನು ರಕ್ಷಿಸಿದ ಸ್ನೇಹಾಲಯ
ಮಂಜೇಶ್ವರ: 2025ರ ಜನವರಿ 8 – ಒಂದು ಸಂವೇದಾನಾತ್ಮಕ ಹೃದಯಸ್ಪರ್ಶಿ ಕಾರ್ಯದಲ್ಲಿ, ಹೊಸಂಗಡಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಲೂಯಿಸ್ ಮರಿಯದಾಸ್ ಅವರು ಸ್ನೇಹಾಲಯದ ಸಹಕಾರದಿಂದ ಸುಮಾರು 50 ವರ್ಷ ಪ್ರಾಯದ, ಮಾನಸಿಕ ಕ್ಷೋಭೆಗೊಳಗಾಗಿ ಬಾಲ ಯೇಸು ಚರ್ಚ್ ಪರಿಸರದಲ್ಲಿ ಸುತ್ತಾಟ ಮಾಡುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದರು. ತನ್ನನ್ನು ರಕ್ಷಿಸುವ ಸಮಯದಲ್ಲಿ ತನ್ನ ಹೆಸರು ಫಿಲಿಪ್ಸ್ ಥಾಮಸ್ ಹಾಗೂ ತಾನು ಆಲಪ್ಪುಜದ ಚೆಂಗನ್ನೂರಿನ ನಿವಾಸಿ ಎಂದು ಪರಿಚಯಿಸಿದ್ದಾರೆ.
ಪ್ರಸ್ತುತಃ ಫಿಲಿಪ್ಸ್ ಥಾಮಸ್ ಅವರು ಸ್ನೇಹಾಲಯದ ಪುರುಷರಿಗಾಗಿ ಇರುವ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಉತ್ತಮ ವದ್ಯಕೀಯ ಚಿಕಿತ್ಸೆ ಮತ್ತು ಸಂಪೂರ್ಣ ಶಾರೀರಿಕ ಹಾಗೂ ಮಾನಸಿಕ ಆರೈಕೆಯನ್ನು ಪಡೆಯುತ್ತಿದ್ದಾರೆ. ಸ್ನೇಹಾಲಯದಲ್ಲಿ ಅವರ ಆರೋಗ್ಯಕ್ಕೆ ಸಂಬಂದಪಟ್ಟ ಎಲ್ಲ ತಪಾಸಣೆಗಳನ್ನು ಮಾಡಲಾಗುತ್ತಿದೆ. ಫಿಲಿಪ್ಸ್ ಥಾಮಸ್ ಅವರು ಮಲಯಾಳದಲ್ಲಿ ಭಾಷೆಯನ್ನುಮಾತನಾಡುತ್ತಿದ್ದು, ಸ್ನೇಹಾಲಯದ ನಿಷ್ಠಾವಂತ ತಂಡವು ಅವರ ಪುನಶ್ಚೇತನಕ್ಕೆ ಅಗತ್ಯವಿರುವ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ,
ಫಿಲಿಪ್ಸ್ ಅವರ ಕುಟುಂಬ ಅಥವಾ ಹಿನ್ನೆಲೆಯನ್ನು ಪತ್ತೆಹಚ್ಚಲು ಸ್ನೇಹಾಲಯ ಸಕಲ ಪ್ರಯತ್ನಗಳನ್ನು ಮಾಡುತ್ತಿರುವಾಗ ಈ ನಿಟ್ಟಿನಲ್ಲಿ ಅವರ ಗುರುತು, ಕುಟುಂಬ ಅಥವಾ ಇತಿಹಾಸದ ಕುರಿತು ಮಾಹಿತಿಯುಳ್ಳವರು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಲು ವಿನಂತಿಸಲಾಗಿದೆ. ನಿಮ್ಮ ಸಹಾಯವು ಫಿಲಿಪ್ಸ್ ಅವರನ್ನು ಅವರ ಪ್ರೀತಿಪಾತ್ರರೊಂದಿಗೆ ಪುನರ್ಮಿಲನಗೊಳ್ಳಲು ಅತ್ಯಂತ ಸಹಕಾರಿಯಾಗಬಹುದು.