Heartfelt Appeal to Reunite Vikram Singh with His Family

/

Manjeshwar, January 6, 2025 – In an extraordinary act of compassion, Br. Joseph Crasta and the dedicated team at Snehalaya Psycho-Social Rehabilitation Centre have rescued Vikram Singh, a 23-year-old young man found wandering lost and alone on the streets of Thuminad, Talapady.
Vikram, originally from Jharkhand, was found in a heartbreaking state. Disoriented and confused, he was talking to himself and displaying signs of deep distress. His once-bright spirit seemed hidden behind muttering, vacant smiles, and moments of silence. The world around him was blurry, but one thing was clear: Vikram needed help. Poor personal hygiene, hoarding small items, and his dependence on pan masala and beedis only reflected the weight of the struggles he’s been carrying for far too long.
Now, Vikram is under the loving care of the team at Snehalaya Psycho-Social Rehabilitation Home for Men. Here, he is finally receiving the medical care, counseling, and support he so desperately needs to regain his health, his dignity, and perhaps even a glimmer of hope for the future.
Together, we can make a difference.
Please contact us at 9446547033 or 7994087033. Let’s bring Vikram home.

snehalaya-vikramsingh-rescue-09janc2025-02 snehalaya-vikramsingh-rescue-09janc2025-03 snehalaya-vikramsingh-rescue-09janc2025-04 snehalaya-vikramsingh-rescue-09janc2025-05

ವಿಕ್ರಂ ಸಿಂಗ್ ಅವರನ್ನು ತನ್ನ ಕುಟುಂಬಕ್ಕೆ ಮರುಸೇರಿಸಲು ಸಹಾಯ ಕೋರಿ ಹೃತ್ಪೂರ್ವಕ ವಿನಂತಿ

ಮಂಜೇಶ್ವರ, 2025 ಜನವರಿ 6: ಒಂದು ಅಪೊರ್ವ ಮಾನವೀಯ ಅನುಕಂಪದ ಕಾರ್ಯದಲ್ಲಿ, ಬ್ರ. ಜೋಸೆಫ್ ಕ್ರಾಸ್ಟಾ ಮತ್ತು ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದ ಸಮರ್ಪಿತ ತಂಡ, ತುಮಿನಾಡ್, ತಲಪಾಡಿ ಬೀದಿಗಳಲ್ಲಿ ಅಲೆಮಾರಿಯಾಗಿ, ಒಂಟಿಯಾಗಿ ತಿರುಗುತ್ತಿದ್ದ 23 ವರ್ಷದ ವಿಕ್ರಂ ಸಿಂಗ್ ಅವರನ್ನು ರಕ್ಷಿಸಿದ್ದಾರೆ.

ಜಾರ್ಖಂಡ್ ನ ಮೂಲ ನಿವಾಸಿಯಾದ ವಿಕ್ರಂ, ತೀವ್ರ ಕಷ್ಟಕರ ಸ್ಥಿತಿಯಲ್ಲಿ ಕಂಡುಬಂದರು. ಗೊಂದಲಗೊಂಡು, ಶಾರೀರಿಕ ಮತ್ತು ಮಾನಸಿಕ ಹೀನತೆಯಿಂದ ಬಳಲುತ್ತಿದ್ದ ಅವರು ತಮ್ಮಷ್ಟಕ್ಕೆ ತಾವು ಮಾತನಾಡುವ ಮತ್ತು ಆಳವಾದ ಮಾನಸಿಕ ಒತ್ತಡದ ಲಕ್ಷಣಗಳನ್ನು ತೋರ್ಪಡಿಸುವ ಸ್ಥಿತಿಯಲ್ಲಿದ್ದರು. ಕಾಂತಿಹೀನ ಕಣ್ಣುಗಳು, ಬರಡಾದ ವರ್ಚಸ್ಸು, ಸ್ವ-ಮಾತುಕತೆ, ಅರ್ಥವಿಲ್ಲದ ನಗು, ಮತ್ತು ವಿಲಕ್ಷಣ ಮೌನದ ನಡುವೆ ಅವರಿಗೆ ಸುತ್ತು ಮುತ್ತಲಿನ ಜಗತ್ತು ಮುಸುಕಿನಂತಾಗಿದ್ದರೂ ಒಂದು ವಿಷಯ ಮಾತ್ರ ಸ್ಪಷ್ಟವಾಗಿತ್ತು: ವಿಕ್ರಂಗೆ ನೆರವು ಅಗತ್ಯವಾಗಿತ್ತು.

ವಿಕ್ರಂನಲ್ಲಿ ವೈಯಕ್ತಿಕ ಶೌಚತೆಯ ಕೊರತೆ, ಚಿಕ್ಕ ಸಾಮಾನುಗಳನ್ನು ಸಂಗ್ರಹಿಸುವ ಜಾಯಮಾನ, ಮತ್ತು ತಂಬಾಕು ಮಸಾಲಾ ಹಾಗೂ ಬೀಡಿಗಳ ಮೇಲೆ ಅವರ ತೀವ್ರ ಅವಲಂಬನೆಯು ಆತನ ಜೀವನದಲ್ಲಿ ಒತ್ತಿಹೇಳಲಾದ ಕಷ್ಟಗಳನ್ನು ಪ್ರತಿಬಿಂಬಿಸುತ್ತಿದ್ದವು.

ಇದೀಗ, ವಿಕ್ರಂ ಸ್ನೇಹಾಲಯ ಪುರುಷರ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದ ಪ್ರೀತಿ ಮತ್ತು ಕಾಳಜಿಯ ಸಂರಕ್ಷಣೆಯಲ್ಲಿದ್ದಾರೆ. ಇಲ್ಲಿ ಅವರು ತುರ್ತು ವೈದ್ಯಕೀಯ ಚಿಕಿತ್ಸೆ, ಸಲಹೆ, ಮತ್ತು ಎಲ್ಲಾ ತರದ ಅಗತ್ಯದ ಶಾರೀರಿಕ, ಮಾನಸಿಕ ಆರೈಕೆಯನ್ನು ಪಡೆಯುತ್ತಿದ್ದಾರೆ. ಸರ್ವತೋಮುಖ ಈ ಬೆಂಬಲವು ಅವರ ಆರೋಗ್ಯ, ಮಾನವೀಯ ಘನತೆ, ಮತ್ತು ನೊತನ ಭವಿಷ್ಯಕ್ಕಾಗಿ ಹೊಸ ಆಶೆಯನ್ನು ಮರಳಿ ಪಡೆಯಲು ಸಹಾಯಕರವಾಗಿದೆ. ಇಡೀ ಪ್ರಪಂಚವನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲದಿದ್ದರೂ ಇಂತಹ ಸಣ್ಣ ಪುಟ್ಟ ಮಾನವೀಯ ಕಾರ್ಯಗಳಿಂದ ನಾವು ಒಟ್ಟಾಗಿ ಸೇರಿ ಸಮಾಜದಲ್ಲಿ ಬದಲಾವಣೆ ತರಬಹುದು ಎನ್ನುವುದಕ್ಕೆ ಒಂದು ತೆರೆದ ಕನ್ನಡಿಯಾಗಿದೆ.

ವಿಕ್ರಂ ಅವರನ್ನು ಅವರ ಮನೆಯತ್ತ ಮರಳಿಸಲು ಯಾವುದೇ ಮಾಹಿತಿಗಾಗಿ ದಯವಿಟ್ಟು ನಮ್ಮನ್ನು 9446547033 ಅಥವಾ 7994087033 ನಲ್ಲಿ ಸಂಪರ್ಕಿಸಿ.

Leave a Reply

Your email address will not be published. Required fields are marked *

Need Help?