Snehalaya Join Hands to Rescue Disoriented Man from Streets

/

Manjeshwar, December 29, 2024 – In a heartwarming act of compassion, concerned citizens of Mondepadav came together to rescue a distressed man, identified as Ranjith, found disoriented and in poor condition near the Mondepadav Public School.

Ranjith, who appeared confused and unhygienic, was quickly noticed by kind-hearted individuals who took immediate action to ensure his safety. Their timely intervention led to his admission to the Snehalaya Psycho-Social Rehabilitation Centre for Men, where he is now receiving the care he desperately needed.
This heartwarming rescue is a powerful reminder of the impact that community involvement can have on the lives of vulnerable individuals. The Snehalaya team has commended the local citizens for their compassion and swift actions, which have made a life-changing difference for Ranjith.

If you have any information about Ranjith’s family, please contact Snehalaya at 9446547033 or 7994087033. Your help can reunite a family and give hope to a life in need.

snehalaya-ranjith-rescue-07janc2025-02 snehalaya-ranjith-rescue-07janc2025-03

ಬೀದಿಗಳಲ್ಲಿ ಅಲೆಯುತ್ತಿದ್ದ ವ್ಯಕ್ತಿಯ ರಕ್ಷಣೆಗೆ ನೆರವಾದ ಸ್ನೇಹಾಲಯ

ಮಂಜೇಶ್ವರ, ಡಿಸೆಂಬರ್ 29, 2024ರಂದು ಮಾನಸಿಕ ಖಿನ್ನಾವಸ್ಥೆಯಲ್ಲಿ ಮೊಂಟೆಪದವು ಸಾರ್ವಜನಿಕ ಶಾಲೆಯ ಸಮೀಪ ಗೊತ್ತು-ಗುರಿ ಇಲ್ಲದೆ ಅಲೆದಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯ ನಾಗರಿಕರು ದಯೆ ಮತ್ತು ಸಹಾನುಭೂತಿ ತೋರಿಸಿ ಆತನನ್ನು ರಕ್ಷಿಸಿದ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ.

ರಂಜಿತ್ ಎಂಬ ಈ ವ್ಯಕ್ತಿ ಮಾನಸಿಕ ಗೊಂದಲಕ್ಕೀಡಾಗಿ, ಅಸ್ವಚ್ಛ ಸ್ಥಿತಿಯಲ್ಲಿ ಕಂಡುಬಂದಾಗ, ಸ್ಥಳೀಯರು ತಕ್ಷಣ ಕ್ರಿಯಾಶೀಲರಾಗಿದ್ದು, ಅವನ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅವರ ಸಮಯೋಚಿತ ಹಸ್ತಕ್ಷೇಪದಿಂದ ರಂಜಿತನನ್ನು ಸ್ನೇಹಾಲಯ ಪುರುಷರ ಮನೋ-ಸಾಮಾಜಿಕ ಪುನಶ್ಚೇತನ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಪ್ರಸ್ತುತಃ ಸ್ನೇಹಾಲಯವು ರಂಜಿತನಿಗೆ ಅಗತ್ಯವಿರುವ ತುರ್ತು ಆರೈಕೆ, ವೈದ್ಯಕೀಯ ನೆರವು ಹಾಗೂ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ.

ಈ ಹೃದಯಸ್ಪರ್ಶಿ ರಕ್ಷಣಾ ಘಟನೆಯು ಬಲಹೀನ ಹಾಗೂ ನೊಂದ ವ್ಯಕ್ತಿಗಳ ಜೀವನದಲ್ಲಿ ಒಂದು ಸಮಾಜ ಅಥವಾ ಸಮುದಾಯದ ಪಾತ್ರ ಎಷ್ಟು ಮಹತ್ವದ ಪ್ರಭಾವ ಬೀರಬಹುದು ಎಂಬುದಕ್ಕೆ ಬಲವಾದ ಸಾಕ್ಷಿಯನ್ನು ನೀಡುತ್ತದೆ. ಸ್ನೇಹಾಲಯದ ತಂಡ ಸ್ಥಳೀಯ ನಾಗರಿಕರ ದಯೆ ಮತ್ತು ತ್ವರಿತ ಕ್ರೀಯಾಶೀಲತೆಗಾಗಿ ಅವರನ್ನು ತುಂಬು ಹ್ರದಯದಿಂದ ಪ್ರಶಂಸಿಸಿದೆ.

ಪ್ರಸ್ತುತಃ ರಂಜಿತನನ್ನು ತನ್ನ ಕುಟುಂಬದೊಂದಿಗೆ ಪುನಃಸೇರ್ಪಡಿಸಲು ಆತನ ಹಿನ್ನೆಲೆ ಹಾಗೂ ಕುಟುಂಬದ ಮಾಹಿತಿಯನ್ನುಒಟುಗೂಡಿಸುವ ಪ್ರಯತ್ನ ನಡೆಸುತ್ತಿರುವ ಜೊತೆಗೆ ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ ತಮ್ಮಲ್ಲಿ ಯಾರಿಗಾದರೂ ರಂಜಿತ್ ಅವರ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಸ್ನೇಹಾಲಯವನ್ನು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ. ನಿಮ್ಮ ನೆರವು ಒಂದು ಕುಟುಂಬವನ್ನು ಪುನರ್ಮಿಲನಗೊಳಿಸಲು ಮತ್ತು ನೊಂದ ಬಾಳಿಗೆ ಆಶ್ರಯವನ್ನು ನೀಡಲು ಸಹಾಯಕವಾಗುತ್ತದೆ.

Leave a Reply

Your email address will not be published. Required fields are marked *

Need Help?