Manjeshwar: In a compassionate rescue on December 29, 2024, the Snehalaya team found Selvam, a man struggling with addiction, wandering near Hampanakatte, Mangalore. Dishevelled and under the influence, Selvam was swiftly taken in by the team to Snehalaya’s Psychosocial Rehabilitation Centre for Men.
Led by Bro. Joseph Crasta, founder of Snehalaya, Selvam is now receiving care and support to rebuild his life. Snehalaya’s commitment to helping those most vulnerable shines through this act of kindness and hope.
If you have any information about Selvam’s family, please contact Snehalaya at 9446547033 or 7994087033. Your support can reunite a family and change a life.
ಸೆಲ್ವಂನ ಜೀವ ಉಳಿಸಿ ಆತನ ಜೀವನದಲ್ಲಿ ಆಶೆ, ಭರವಸೆ ಮತ್ತು ಪ್ರೇರಣೆ ಬೆಳಗಿದ ಸ್ನೇಹಾಲಯ.
ಮಂಜೇಶ್ವರ: 2024ರ ಡಿಸೆಂಬರ್ 29ರಂದು, ಮಂಗಳೂರು ಹಂಪನಕಟ್ಟೆ ಸಮೀಪ ಗುರಿಯಿಲ್ಲದೆ ಅಲೆಯುತ್ತಿದ್ದ ಸೆಲ್ವಂ ಎಂಬ ವ್ಯಕ್ತಿಯನ್ನು ಸ್ನೇಹಾಲಯದ ಸಂವೇದನಾಶೀಲ ತಂಡ ರಕ್ಷಿಸಿ ಆತನ ಜೀವನದಲ್ಲಿ ಭರವಸೆಯ ಹೊಂಗಿರಣವನ್ನು ತಂದಿತು. ಮದ್ಯಪಾನಕ್ಕೆ ವೈಖರಿಯಾಗಿದ್ದ ಸೆಲ್ವಂನನ್ನು ಸ್ನೇಹಾಲಯ ತಂಡ ರಕ್ಷಿಸಿ ಆತನ ತುರ್ತು ಚಿಕಿತ್ಸೆ ಮತ್ತು ಆರೈಕೆಗಾಗಿ ಸ್ನೇಹಾಲಯದ ಪುರುಷರ ಮನೋಸಾಮಾಜಿಕ ಪುನಶ್ಚೇತನ ವಿಭಾಗದಲ್ಲಿ ದಾಖಲಿಸಿತು.
ಸ್ನೇಹಾಲಯದ ಸಂಸ್ಥಾಪಕರಾದ ಬ್ರೊ. ಜೋಸೆಫ್ ಕ್ರಾಸ್ಟ ಅವರ ಸಮರ್ಥ ನೇತೃತ್ವ ಹಾಗೂ ಸಂರಕ್ಷಣೆಯಲ್ಲಿ ಸೆಲ್ವಂ ಈಗ ತನ್ನ ಜೀವನವನ್ನು ಪುನಃ ಕಟ್ಟಿಕೊಳ್ಳಲು ಅಗತ್ಯವಾದ ವೈದ್ಯಕೀಯ ಸಹಾಯ, ಪಾಲನೆ ಮತ್ತು ಪೋಷಣೆಯನ್ನು ಪಡೆಯುತ್ತಿದ್ದಾರೆ. ಸಮಾಜದಲ್ಲಿ ಅಸಾಹಾಯಕ ಮತ್ತು ಅಸುರಕ್ಷಿತ ಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡಬೇಕೆಂಬ ಸ್ನೇಹಾಲಯದ ತೀವ್ರ ಬದ್ಧತೆಯನ್ನು ಈ ದಯೆಯ ಕೃತ್ಯ ಸ್ಪಷ್ಟಪಡಿಸುತ್ತದೆ.
ಸೆಲ್ವಂನನ್ನು ಪುನಃ ಆತನ ಕುಟುಂಬದ ಜೊತೆಗೆ ಸೇರಿಸುವಲ್ಲಿ ತಮ್ಮಲ್ಲಿ ಯಾರಿಗಾದರೂ ಈತನ ಕುಟುಂಬದ ಮಾಹಿತಿ ಅಥವಾ ಅವರ ಕುರಿತು ಯಾವುದೇ ವಿವರಗಳು ಇದ್ದರೆ ತಾವು ದಯವಿಟ್ಟು ಸ್ನೇಹಾಲಯದ ಈ ದೂರವಾಣಿ ಸಂಖ್ಯೆಗಳಿಗೆ [9446547033 ಅಥವಾ 7994087033] ಕೂಡಲೇ ಸಂಪರ್ಕಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ.
One Response
Great effort Snehalaya team