An ICONIC donor for persistence sustainability for 3 generations

/

The Menezes Family from Sasthan, headed by Shri Joseph Menezes has pledged to relentlessly to carry on Snehalaya’s Midday Meal Program for a Century.
Snehalaya Charitable Trust, a renowned charitable organization in Mangalore, has been providing midday meals daily to around 700 bystanders at the Wenlock Government Hospital for almost a decade. This most essential key service, which provides much-needed sustenance to the families of patients who often travel from distant places and cannot afford basic necessities, has been made a dream come true through the unwavering support of Snehalaya’s donors.
Now, this initiative has compelled it’s 10 years successfully. Small seed of humanity has grown wide and tall in the community across DK, Udupi, Coorg, Kerala and Chickmangalore etc. it has expanded in multiple ways beyond ones imagination.

On December 14, 2024, Mr. Joseph Menezes, Director of Fortune Life Wealth Pvt. Ltd., Delhi, and Proprietor of PTI Consultancy in Mumbai, made an epic announcement that he will ensure the longevity of this essential project for next 3 generations to come. He was talking at the celebration of his grandson Nathan’s fifth birthday, Mr. Menezes and his family have committed to provide funding for the midday meal program for the next 100 years. Their extraordinary donation of ₹3 lakhs per month, beginning from January 1, 2025, will guarantee the continued contribution, impacting thousands of lives for decades.
This unparalleled act of philanthropy is not just a generous contribution but a visionary investment in the well-being of the underprivileged. The Menezes family’s decision to support Snehalaya’s work ensures that patients’ families, often in vulnerable situations, will have basic daily nourishment, easing one of the many burdens they face during their difficult days at the hospital.
For Snehalaya, the assurance of the Menezes family is a dream come true. The organization, which has always relied on the goodwill of its supporters, now has the assurance that its mission will continue uninterrupted. Mr. Menezes, driven by a deep sense of compassion and responsibility, has ensured that Snehalaya’s midday meal project will survive and thrive well in the future.
Snehalaya expresses its heartfelt gratitude to the Menezes family for their commitment and foresight. The Menezes family’s contribution is not just about feeding the body but also about nourishing the soul, offering hope and humanity to those in need. Their selflessness will inspire others to act, proving that one act of kindness can indeed ripple across generations, making the world a better place to live.

snehalaya-mannatrinity-vision-27dec2024-01 snehalaya-mannatrinity-vision-27dec2024-02 snehalaya-mannatrinity-vision-27dec2024-03 snehalaya-mannatrinity-vision-27dec2024-04snehalaya-mannatrinity-vision-27dec2024-05

ಸ್ನೇಹಾಲಯದ “ಮನ್ನಾ” ಯೋಜನೆಯನ್ನು 3 ತಲೆಮಾರುಗಳ ತನಕ ನಿರಂತರ ಮುನ್ನಡೆಸಲು ಮಹಾ ದಾನಿಯ ಮಹಾ ಆಶಯ

ಶ್ರೀಯುತ ಜೊಸೆಫ್ ಮಿನೇಜಸ್, ಸಾಸ್ತಾನ ಇವರ ನೇತೃತ್ವದಲ್ಲಿ ಅವರ ಕುಟುಂಬದ ಸಹಯೋಗದೊಂದಿಗೆ, ದಶಕದಿಂದ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಸ್ನೇಹಾಲಯದ ಮಧ್ಯಾಹ್ನದ ಊಟದ “ಮನ್ನಾ” ಕಾರ್ಯಕ್ರಮವನ್ನು ಒಂದು ಶತಮಾನದವರೆಗೆ ನಿರಂತರವಾಗಿ ಮುನ್ನಡೆಸಲು ಪ್ರತಿಜ್ಞೆ ಮಾಡಿರುತ್ತಾರೆ.

ಮಂಗಳೂರಿನ ಹೆಸರಾಂತ ಸೇವಾ ಸಂಸ್ಥೆಯಾದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಸುಮಾರು ಒಂದು ದಶಕದಿಂದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 700 ಮಂದಿಗೆ ಪ್ರತಿದಿನ ಮಧ್ಯಾಹ್ನದ ಊಟವನ್ನು ಉಚಿತವಾಗಿ ನೀಡುತ್ತಿದೆ. ದೂರದ ಊರುಗಳಿಂದ ಸರಕಾರಿ ವೆನ್ಲೊಗ್ ಆಸ್ಪತ್ರೆಗೆ ದಾಖಾಲಾಗುವ ರೋಗಿಗಳಿಗೆ ಸಹವರ್ತಿಗಳಾಗಿ ಸೇವೆ ನೀಡುತ್ತಿರುವ ಬಡವರಿಗೆ ಮಧ್ಯಾಹ್ನದ ಊಟವನ್ನು ಉಚಿತವಾಗಿ ನೀಡುವ ಸ್ನೇಹಾಲಯ ಸಂಸ್ಥೆಯ ಕನಸು ದಾನಿಗಳ ಅವಿರತ ಬೆಂಬಲದಿಂದ ನನಸಾಗಿದೆ.
ಈ “ಮನ್ನಾ” ಯೋಜನೆಯು ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದೆ. ಸ್ಥಳೀಯವಾಗಿ ಬಿತ್ತಲ್ಪಟ್ಟ ಮಾನವೀಯತೆಯ ಸಣ್ಣ ಬೀಜವು ದ.ಕ., ಉಡುಪಿ, ಮಡಿಕೇರಿ, ಕೇರಳ ಮತ್ತು ಚಿಕ್ಕಮಂಗಳೂರು ಮುಂತಾದೆಡೆ ಸಮುದಾಯದಲ್ಲಿ ವಿಶಾಲವಾಗಿ ಮತ್ತು ಎತ್ತರವಾಗಿ ಬೆಳೆದಿದೆ. ಇದು ಕಲ್ಪನೆಗೂ ಮೀರಿದ ರೀತಿಯಲ್ಲಿ ವಿಶಾಲವಾಗಿ ವಿಸ್ತರಿಸಿದೆ ಹಾಗು ಹಲವರಿಗೆ ಪ್ರೇರಣೆ ನೀಡಿದೆ.
ಡಿಸೆಂಬರ್ 14, 2024 ರಂದು, ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್‌ ನವದೆಹಲಿ ಇದರ ನಿರ್ದೇಶಕರೂ ಹಾಗೂ ಮುಂಬೈನಲ್ಲಿರುವ PTI ಕನ್ಸಲ್ಟೆನ್ಸಿಯ ಮಾಲಿಕರಾಗಿರುವ ಶ್ರೀ. ಜೋಸೆಫ್ ಮಿನೆಜಸ್ ಅವರು ಮುಂದಿನ 3 ತಲೆಮಾರುಗಳಿಗೆ ಅದಾಂಜು 100 ವರುಷ ಸದರಿ ಮನ್ನಾ ಯೋಜನೆಯನ್ನು ಮುನ್ನಡೆಸುವ ಪ್ರತಿಜ್ಣೆ ಮಾಡಿರುತ್ತಾರೆ.
ಅವರು ತಮ್ಮ ಮೊಮ್ಮಗ ನಾಥನ್ ಅವರ ಐದನೇ ಹುಟ್ಟುಹಬ್ಬದ ಆಚರಣೆಯ ಸುಸಂದರ್ಭದಲ್ಲಿ ಮಾತನಾಡುತ್ತಾ, ಈ ಅಗತ್ಯ ಯೋಜನೆಯ ಪ್ರಕಟಣೆಯನ್ನು ಮಾಡಿರುತ್ತಾರೆ. ಶ್ರೀ ಮಿನೇಜಸ್ ಮತ್ತು ಅವರ ಕುಟುಂಬವು ಮುಂದಿನ 100 ವರ್ಷಗಳವರೆಗೆ ಮಧ್ಯಾಹ್ನದ ಊಟದ ಕಾರ್ಯಕ್ರಮಕ್ಕೆ ತಗಲುವ ಎಲ್ಲಾ ಖರ್ಚಿನ ಬಾಬ್ತು ಧನಸಹಾಯ ನೀಡಲು ಮುಂದಾಗಿಗೆ ಹಾಗು ಬದ್ಧವಾಗಿದೆ. ಜನವರಿ 1, 2025 ರಿಂದ ಪ್ರಾರಂಭವಾಗುವ ಈ ಯೋಜನೆಗೆ, ಪ್ರತಿ ತಿಂಗಳು ₹3 ಲಕ್ಷಗಳ ಅಸಾಧಾರಣ ದೇಣಿಗೆಯ ನಿರಂತರ ಕೊಡುಗೆಯನ್ನು ಖಾತರಿಪಡಿಸಿರುತ್ತಾರೆ. ಇದು ಮುಂದೆ ಸಾವಿರಾರು ಜನರ ಮೇಲೆ ಪರಿಣಾಮ ಬೀರುತ್ತದೆ.

ಲೋಕೋಪಕಾರದ ಈ ಅಪ್ರತಿಮ ಕಾರ್ಯವು ಕೇವಲ ಉದಾರ ಕೊಡುಗೆಯಾಗಿರದೆ, ಹಿಂದುಳಿದವರ ಬಡವರ ಯೋಗಕ್ಷೇಮದಲ್ಲಿ ಸಹಾಯಹಸ್ತ ನೀಡುವ ದೂರದೃಷ್ಟಿಯ ಕಾರ್ಯವಾಗಿದೆ. ಸ್ನೇಹಾಲಯದ ಇಂತಹ ಕಾರ್ಯಗಳನ್ನು ಹಾಗು ಮನ್ನಾದಂತಹ ಯೋಜನೆಯನ್ನು ಬೆಂಬಲಿಸುವ ಮಿನೆಜಸ್ ಕುಟುಂಬದ ನಿರ್ಧಾರವು ದೈವಿಕ ಕಾಯಕವಾಗಿದ್ದು, ಕುಂದಿ ಹೋದ ರೋಗಿಗಳ ಕುಟುಂಬಗಳಿಗೆ ಸಾಂತ್ವನ ಹಾಗೂ ಬಲ ನೀಡುವ ನೈತಿಕ ಕೆಲಸದ ಜೊತೆ ಮೂಲಭೂತ ದೈನಂದಿನ ಪೋಷಣೆಯನ್ನು ರೋಹಿಗಳ ಆ ಕುಟುಂಬಗಳಿಗೆ ಖಚಿತಪಡಿಸುತ್ತದೆ. ಆಸ್ಪತ್ರೆಯಲ್ಲಿ ಅವರ ಕಷ್ಟದ ದಿನಗಳಲ್ಲಿ ಅವರು ಎದುರಿಸುತ್ತಿರುವ ಅನೇಕ ಹೊರೆಗಳಲ್ಲಿ ಒಂದನ್ನು ಸುಗುಮಗೊಳಿಸುತ್ತದೆ.

ಸದಾ ಸದ್ಗುಣಿ ಹ್ರದಯವುಳ್ಳ ದಾನಿಗಳನ್ನೇ, ತನ್ನ ಹಿತೈಷಿಗಳನ್ನೇ ನೆಚ್ಚಿಕೊಂಡು ಬಂದಿರುವ ಸ್ನೇಹಾಲಯಕ್ಕೆ ಸಂಸ್ಥೆಗೆ ಮಿನೇಜಸ್ ಕುಟುಂಬದ ಆಶ್ವಾಸನೆ ಕನಸೊಂದು ನನಸಾದ ಅನುಭವ. ಈಗ ಸ್ನೇಹಾಲಯಕ್ಕೆ ತನ್ನ ಧ್ಯೇಯೋದ್ದೇಶ ಅವಿರತವಾಗಿ ಮುಂದುವರಿಯುವ ಭರವಸೆ ಸಿಕ್ಕಿದೆ. ಪ್ರೀತಿ, ತ್ಯಾಗ, ಸಹಾನುಭೂತಿ ಮತ್ತು ಮಾನವೀಯ ಗುಣಗಳಿಂದ ಪ್ರೇರೇಪಿಸಲ್ಪಟ್ಟ ಶ್ರೀಯುತ ಮಿನೇಜಸ್’ರವರು, ಸ್ನೇಹಾಲಯದ ಮಧ್ಯಾಹ್ನದ ಊಟ ನೀಡುವ ಮನ್ನಾ ಯೋಜನೆಯು ಭವಿಷ್ಯದಲ್ಲಿ ಸದಾ ಉಳಿಯುತ್ತದೆ ಮತ್ತು ಉತ್ತಮವಾಗಿ ಬೆಳೆಯುತ್ತದೆ ಎಂದು ಖಚಿತಪಡಿಸಿದ್ದಾರೆ. ಈ ನುಡಿಗಳು ದೈವಿಕ ವಾಗಿ ಸಿಕ್ಕಿರುವ ಭಗವಂತನ ಆಶೀರ್ವಾದ ಎಂದೇ ಸ್ನೇಹಾಲಯ ಪರಿಗಣಿಸಿದೆ.
ಮಿನೇಜಸ್ ಕುಟುಂಬದ ಬದ್ಧತೆ ಮತ್ತು ದೂರದೃಷ್ಟಿಗಾಗಿ ಸ್ನೇಹಾಲಯ ತನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಮಿನೆಜಸ್ ಕುಟುಂಬದ ಕೊಡುಗೆ ಕೇವಲ ದೇಹಕ್ಕೆ ಆಹಾರವನ್ನು ನೀಡುವುದು ಅಷ್ಟೇ ಅಲ್ಲ, ಅದರ ಜೊತೆಗೆ ಆತ್ಮವನ್ನು ಪೋಷಿಸುವುದು, ಅಗತ್ಯವಿರುವವರಿಗೆ ಧೈರ್ಯ, ಭರವಸೆ ಮತ್ತು ಮಾನವೀಯತೆಯನ್ನು ಯಾವುದೇ ಸ್ವಾರ್ಥವಿಲ್ಲದೇ ನೀಡುವುದು ಸತ್ಯ. ಅವರ ನಿಸ್ವಾರ್ಥತೆಯು ಇತರರನ್ನು ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ. ದಯೆಯ ಈ ಒಂದು ಸತ್ಕಾರ್ಯವು ಮೂರು ತಲೆಮಾರುಗಳಾದ್ಯಂತ ನೆಲೆ ನಿಂತು ಮಾನವೀಯತೆ ಸಮಾಜದಲ್ಲಿ ಇನ್ನೂ ಜೀವಂತವಿದೆ ಎಂದು ಸಾಬೀತುಪಡಿಸುತ್ತದೆ. ನಾವೆಲ್ಲಾರೂ ಸೇರಿ ಈ ಜಗತ್ತನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡೋಣ.

One Response

  1. ತಾಂಕಾ ಸಾಗ್ದಾಂಕಾಯಿ ದೆವು ಬೋರೆಂಕರೋ
    ದೇವರ ಅಭಯ ಹಸ್ತ ಅವರ ಮೇಲೆ ಸದಾ ಇರಲಿ
    ಆಮೆನ್

Leave a Reply

Your email address will not be published. Required fields are marked *

Need Help?