On December 3, 2024, the compassionate team of the Snehalaya Psycho-Social Rehabilitation Centre rescued a young man, Nithesh, from the Central Railway Station in Mangalore. Nithesh, a 28-year-old native of Gwalior whose mother tongue is Hindi, wandered aimlessly, displaying poor personal hygiene and a conspicuous swelling on his right leg.
Moved by his plight, Snehalaya admitted Nithesh to its facility in Manjeswar to provide care and rehabilitation. The team is working tirelessly to uncover his past and reunite him with his family, who may be desperately searching for him.
We appeal for your assistance in this heartfelt mission. If you have any information about Nithesh, his family, or his origins, please come forward. Contact Snehalaya at 9446547033 or 7994087033.
Your kindness and vigilance can help reunite Nithesh with his loved ones and bring hope into his life. Together, let us bring Nithesh home.
“ನಿತೇಶನನ್ನು ಆತನ ಕುಟುಂಬದೊಂದಿಗೆ ಪುನರ್ವಿಲೀನಗೊಳಿಸುವಲ್ಲಿ ಸಹಾಯ ಕೋರಿ ಮನವಿ”
28 ವರ್ಷದ ನಿತೇಶ್ ಎಂಬ ವ್ಯಕ್ತಿಯನ್ನು 2024 ಡಿಸೆಂಬರ್ 3 ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿಯಿಂದ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದ ತಂಡ ರಕ್ಷಿಸಿತು.
ಪತ್ತೆ ಹಚ್ಚಿದ ಸಮಯದಲ್ಲಿನಿತೇಶನ ವೈಯಕ್ತಿಕ ಸ್ವಚ್ಛತೆ ಅಸಮರ್ಪಕವಾಗಿದ್ದು, ಅಸುರಕ್ಷಿತ ಸ್ಥಿತಿಯಲ್ಲಿ ಬೀದಿಯಲ್ಲಿ ಅಲೆಮಾರಿಯಾಗಿ ಕಂಡುಬಂದಿದ್ದ. ನಂತರ ಪ್ರಾಥಮಿಕ ತಪಾಸಣೆಯಲ್ಲಿ ಈತನಲ್ಲಿ ಮನೋವೈದ್ಯಕೀಯ ಲಕ್ಷಣಗಳು ಇರುವುದು ತಿಳಿದುಬಂದಿದೆ. ನಿತೇಶನ ಮಾತೃಭಾಷೆ ಹಿಂದಿಯಾಗಿದ್ದು ಆತ ಗ್ವಾಲಿಯರ್‌ನ ನಿವಾಸಿಯಾಗಿದ್ದಾರೆ.
ಪ್ರಸ್ತುತಃ ನಿತೇಶ್ ಮಂಜೇಶ್ವರದ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಅತ್ಯುತ್ತಮ ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.
ನಿತೇಶನನ್ನು ಆತನ ಕುಟುಂಬದ ಜೊತೆಗೆ ಪುನಃ ಸೇರಿಸುವಲ್ಲಿ ತಮ್ಮಲ್ಲಿ ಯಾರಿಗಾದರೂ ಆತನ ಕುಟುಂಬದ ವಿವರ ಅಥವಾ ಆತನ ಕುರಿತು ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ಸ್ನೇಹಾಲಯದ ಈ ದೂರವಾಣಿ ಸಂಖ್ಯೆಗಳಿಗೆ [9446547033 ಅಥವಾ 7994087033] ಕೂಡಲೇ ಸಂಪರ್ಕಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ.